ಬೆಂಗಳೂರು: ದುರಳರು ಯಾರಿಗೂ ತಿಳಿಯದಂತೆ ನವಜಾತ ಶಿಶುವನ್ನು ಪ್ಲಾಸ್ಟಿಕ್ ಕವರ್‌ನೊಳಗೆ ಹಾಕಿ ಕಸದ ಲಾರಿಗೆ ಬಿಸಾಕಿದ್ದಾರೆ. ಆದರೆ ದುರಾದೃಷ್ಟವಶಾತ್ ಕವರ್‌ನಲ್ಲಿ ಮಲಗಿದ್ದ ಶಿಶು ರಸ್ತೆ ಮಧ್ಯ ಭಾಗಕ್ಕೆ ಬಿದ್ದಿದ್ದು, ಇತರೆ ವಾಹನಗಳು ಹರಿದು ಅಲ್ಲಿಯೇ ಅಸುನೀಗಿದೆ. ಪರಿಣಾಮ ಶಿಶುವಿನ ರುಂಡ ಮುಂಡ ಛಿದ್ರಛಿದ್ರವಾದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ (Bengaluru News) ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಫೆಬ್ರವರಿ 28ರಂದು ಅಮೃತಹಳ್ಳಿಯ ಪಂಪಾ ಲೇಔಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ಬಿಬಿಎಂಪಿ ಕಸದ ಲಾರಿಯಿಂದ ಪ್ಲಾಸ್ಟಿಕ್ ಕವರ್ ರಸ್ತೆಗೆ ಬಿದ್ದಿದೆ. ವಾಹನಗಳು ಕವರ್ ಮೇಲೆ ಹರಿದ ಪರಿಣಾಮ ಅದರಲ್ಲಿದ್ದ ಶಿಶು ಮೃತಪಟ್ಟಿದೆ.
ಇದನ್ನೂ ಓದಿ: Fire tragedy : ಚಪ್ಪರದ ಗುಡಿಸಲಿಗೆ ಬೆಂಕಿ ಬಿದ್ದು ವೃದ್ಧ ಸಜೀವ ದಹನ, ಏಳು ಎಕರೆ ಕಬ್ಬು ಸಂಪೂರ್ಣ ಅಗ್ನಿಗಾಹುತಿ
ಈ ದುರಂತದಲ್ಲಿ ಶಿಶು ಪೂರ್ತಿ ನಜ್ಜುಗುಜ್ಜಾಗಿರುವುದರಿಂದ ಗಂಡು ಮಗುವೋ ಹೆಣು ಮಗುವೋ ಎಂಬ ಗುರುತು ಸಹ ಪತ್ತೆಯಾಗಿಲ್ಲ. ಸಾರ್ವಜನಿಕರು ನೀಡಿದ ಮಾಹಿತಿಯನ್ವಯ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ