Site icon Vistara News

Janopakari Doddanna Shetty: ಗಾಣಿಗ ಸಮುದಾಯ ಶ್ರಮದಿಂದ ಬದುಕು ಕಟ್ಟಿಕೊಂಡಿದೆ; ಡಿ.ಕೆ. ಶಿವಕುಮಾರ್ ಶ್ಲಾಘನೆ

Janopakari Doddanna Shetty

ಬೆಂಗಳೂರು: ದೀಪ ಉರಿಯುವಾಗ (Janopakari Doddanna Shetty) ಎಣ್ಣೆ, ಬತ್ತಿ ಏನೂ ಕಾಣುವುದಿಲ್ಲ. ಕಾಣುವುದು ಬೆಳಕು ಮಾತ್ರ. ಗಾಣಿಗ ಸಮುದಾಯ ತಯಾರಿಸುವ ಎಣ್ಣೆಯು ದೀಪ ಹಾಗೂ ಮನುಷ್ಯನನ್ನು ತಂಪಾಗಿಸಲು ತಲೆಗೂ ಬೇಕು. ಗಾಣಿಗ ಸಮುದಾಯ ಶ್ರಮದ ಮೂಲಕ ಬದುಕು ಕಟ್ಟಿಕೊಂಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (Bengaluru News) ಅಭಿಪ್ರಾಯಪಟ್ಟರು.

ಯಜಮಾನ್ ಜನೋಪಕಾರಿ ದೊಡ್ಡಣ್ಣ ಶೆಟ್ಟಿ ಅವರ 103ನೇ ವಾರ್ಷಿಕ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಮನುಷ್ಯ ಇದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಹರಕೆ ಹೊತ್ತಿರುವುದಿಲ್ಲ. ಹುಟ್ಟಿದ ನಂತರ ಜಾತ್ಯತೀತವಾಗಿ ಬದುಕಬೇಕು. ದೊಡ್ಡಣ್ಣ ಶೆಟ್ಟರು ಭೇದ ಭಾವ ಮಾಡದೆ ಬದುಕಿದ ಕಾರಣಕ್ಕೆ ಅವರನ್ನು ನೆನಪಿಸುತ್ತಿದ್ದೇವೆ. ನಿಮ್ಮ ವೃತ್ತಿ, ಸಮುದಾಯವನ್ನು ಉಳಿಸಿಕೊಳ್ಳಲು ಸಂಘಟಿತರಾಗಿ ಎಂದು ತಿಳಿಸಿದರು.

ದೊಡ್ಡಣ್ಣ ಶೆಟ್ಟರು ಬ್ರಿಟಿಷರ ಆಡಳಿತ ಅವಧಿಯಲ್ಲಿಯೇ ಬೆಂಗಳೂರು ಹೃದಯ ಭಾಗದಲ್ಲಿ ಧರ್ಮಾತ್ಮ ಸಂಸ್ಥೆ ಕಟ್ಟಿ ಸಮಾಜದ ಎಲ್ಲಾ ಸಮುದಾಯಗಳ ನೆರವಿಗೆ ನಿಂತ ಮಹಾನುಭಾವ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಖಚಿತ ಇದರ ನಡುವೆ ಏನನ್ನು ಗಳಿಸುತ್ತೇವೆ, ಸಾಧಿಸುತ್ತೇವೆ ಎನ್ನುವುದು ಮುಖ್ಯ. ದೊಡ್ಡಣ್ಣ ಶೆಟ್ಟರು ಗತಿಸಿಹೋಗಿ ನೂರು ವರ್ಷಗಳಾದರೂ ಅವರ ನೆನಪು ನಮ್ಮ ನಡುವೆಯಿದೆ ಎಂದರು.

ಇದನ್ನೂ ಓದಿ: Money Guide: ಆನ್‌ಲೈನ್‌ ಶಾಪಿಂಗ್‌ ವೇಳೆ ಮೋಸ ಹೋಗದಿರಲು ಈ ಟಿಪ್ಸ್‌ ಪಾಲೋ ಮಾಡಿ

ದೇವರು ಯಾರಿಗೆ ವರ, ಶಾಪ ಏನನ್ನೂ ಕೊಡುವುದಿಲ್ಲ. ಸಿಗುವ ಅವಕಾಶದಲ್ಲಿ ಉಪಕಾರ ಮಾಡಿ. ಅನ್ಯ ಕಾರ್ಯಗಳು ಇರುವ ಕಾರಣ ನಿಮಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ತುಳಿತಕ್ಕೆ ಒಳಗಾಗಿರುವ ಸಮಾಜವು ಹಿಂದುಳಿದಿದ್ದೇವೆ ಎನ್ನುವ ಚಿಂತೆ ಮಾಡಬಾರದು. ನಿಮ್ಮ ಸಮಸ್ಯೆಗಳನ್ನು ನಮಗೆ ತಿಳಿಸಿ ನಾವು ಬಗೆಹರಿಸುತ್ತೇವೆ ಎಂದು ತಿಳಿಸಿದರು.

Exit mobile version