Site icon Vistara News

Bengaluru News: ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮುಂದಾದ ವೈಐಪಿಪಿ ಸಹ ಸಂಸ್ಥಾಪಕ ನಿಖಿಲ್ ಕಾಮತ್

YIPP co founder Nikhil Kamath

ಬೆಂಗಳೂರು: ವೈಐಪಿಪಿ (ಯಂಗ್ ಇಂಡಿಯಾ ಫಿಲಾಂತ್ರೊಪಿಕ್ ಪ್ಲೆಡ್ಜ್‌ ) ಸಹ-ಸಂಸ್ಥಾಪಕ ನಿಖಿಲ್‌ ಕಾಮತ್‌ ಅವರ ನಾಯಕತ್ವದಲ್ಲಿ ಕರ್ನಾಟಕ ಮಾದರಿ ಶಾಲಾ ಮಾರ್ಗದರ್ಶನ ಕಾರ್ಯಕ್ರಮ (KMSPP) ಅಡಿಯಲ್ಲಿ ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಜ್ಜಾಗಿದೆ. ಕರ್ನಾಟಕ ಸರ್ಕಾರ ಹಾಗೂ ಸತ್ವ ಸಂಸ್ಥೆಯ ಸಹಯೋಗದಲ್ಲಿ 2025-26 ಶೈಕ್ಷಣಿಕ ವರ್ಷದ ವೇಳೆಗೆ ತುಮಕೂರು, ದಾವಣಗೆರೆ, ಹಾವೇರಿ, ಯಾದಗಿರಿ ಮತ್ತು ಚಿತ್ರದುರ್ಗ ಜಿಲ್ಲೆಗಳ 210 ಕ್ಕೂ ಹೆಚ್ಚು ಶಾಲೆಗಳು ಮತ್ತು ಅಂಗನವಾಡಿಗಳು/ಪ್ರಿಸ್ಕೂಲ್‌ಗಳನ್ನು ಪರಿವರ್ತಿಸಲು ರೂಪುರೇಷೆಗಳು (Bengaluru News) ಸಿದ್ಧವಾಗುತ್ತಿವೆ.

ಭಾರತೀಯ ವ್ಯಾಪಾರ ಮತ್ತು ಲೋಕೋಪಕಾರಿ ಸಮುದಾಯದ ಪ್ರಮುಖ ವ್ಯಕ್ತಿ ನಿಖಿಲ್ ಕಾಮತ್ ಮತ್ತು ಯುವ ಅನ್‌ಸ್ಟಾಪಬಲ್ ನ ಸ್ಥಾಪಕ ಅಮಿತಾಬ್‌ ಶಾ ಜತೆಗೂಡಿ ಯಂಗ್ ಇಂಡಿಯಾ ಫಿಲಾಂತ್ರೊಪಿಕ್ ಪ್ಲೆಡ್ಜ್ (YIPP) ಮುನ್ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್, ಜೆಎಸ್‌ಡಬ್ಲ್ಯೂ ಫೌಂಡೇಶನ್, ಸ್ವಿಸ್ರೆ, ಪ್ರಶಾಂತ್ ಪ್ರಕಾಶ್ ಮತ್ತು ವೈ ಐಪಿಪಿ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಕರ್ನಾಟಕದಾದ್ಯಂತ ಹಮ್ಮಿಕೊಂಡಿದೆ.

ಇದನ್ನೂ ಓದಿ: WhatsApp Update: ವಾಟ್ಸ್ ಆಪ್ ಬಳಕೆದಾರರಿಗೆ ಸಂತಸದ ಸುದ್ದಿ; ಮೆಸೆಜ್‌ಗೆ ಸಂಬಂಧಿಸಿ ಮಹತ್ವದ ಅಪ್‌ಡೇಟ್‌!

ಕಳೆದ ಒಂದೂವರೆ ವರ್ಷದಲ್ಲಿ ಕೆಎಂಎಸ್‌ಪಿಪಿ ಶಾಲೆಯ ಪರಿವರ್ತನೆಗೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಗಣನೀಯ ಪಾತ್ರ ವಹಿಸಿದೆ. ಪ್ರಾರಂಭಿಕವಾಗಿ ಜಿಲ್ಲಾ ಮಟ್ಟದಲ್ಲಿ ಪ್ರಮುಖ ಉಪಕ್ರಮಗಳಲ್ಲಿ ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯವನ್ನು ಹೆಚ್ಚಿಸುವುದು, 21ನೇ ಶತಮಾನದ ಕೌಶಲ್ಯಗಳನ್ನು ಸಂಯೋಜಿಸುವುದು, ವಿಜ್ಞಾನ ಮತ್ತು ಎಸ್‌ಟಿಇಎಂ ಶಿಕ್ಷಣಕ್ಕೆ ಒತ್ತು ನೀಡುವುದು, ಫೌಂಡೇಶನಲ್ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ (FLN) ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು, ವೃತ್ತಿ ಸಮಾಲೋಚನೆಯನ್ನು ಒದಗಿಸುವುದರ ಜತೆಯಲ್ಲಿ ಅನಿಯಮಿತ ವಿದ್ಯಾರ್ಥಿಗಳನ್ನು ಮರುಸಂಘಟಿಸುವುದು ಮತ್ತು ಶಿಕ್ಷಕರು ಮತ್ತು ಶಿಕ್ಷಣ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ನೀಡಲಾಗಿದೆ.

ಈ ಕುರಿತು ವೈಐಪಿಪಿಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಮಾತನಾಡಿ, “ಈ ಕಾರ್ಯಕ್ರಮವು ಮೂಲಸೌಕರ್ಯಗಳನ್ನು ಮಾತ್ರವಲ್ಲದೆ ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಅಧಿಕಾರಿಗಳಲ್ಲಿ ಶಿಕ್ಷಣದ ಗ್ರಹಿಕೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

ಪರಿಣಾಮಕಾರಿ ಅನುಷ್ಠಾನ ಮತ್ತು ಪ್ರಭಾವದ ಮೌಲ್ಯಮಾಪನವನ್ನು ಖಾತ್ರಿಪಡಿಸುವ, ತಳಮಟ್ಟದ ಮಧ್ಯಸ್ಥಿಕೆಗಳನ್ನು ಪರಿಷ್ಕರಿಸಲು ಈ ಯೋಜನೆ ದೃಢವಾದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸಹ ಸ್ಥಾಪಿಸಿದೆ. ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕರ (SPD) ನೇತೃತ್ವದ ರಾಜ್ಯ ಮಟ್ಟದ ಚಾಲನಾ ಸಮಿತಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಗಳೊಂದಿಗೆ ಕೆಎಂಎಸ್‌ಪಿಪಿ ರಾಜ್ಯಾದ್ಯಂತ ಉತ್ತಮ ಅಭ್ಯಾಸಗಳನ್ನು ಸಾಂಸ್ಥಿಕಗೊಳಿಸುತ್ತಿದೆ ಮತ್ತು ವ್ಯವಸ್ಥಿತ ಬದಲಾವಣೆಗೆ ಚಾಲನೆ ನೀಡುತ್ತಿದೆ ಎಂದು ತಿಳಿಸಿದ್ದಾರೆ.

Exit mobile version