ಬೆಂಗಳೂರು: ನೇರಳೆ ಮಾರ್ಗದಲ್ಲಿ ಬರುವ ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಮೆಟ್ರೊ ರೈಲು ಸಂಚಾರವನ್ನು ಜನವರಿ ೨೭ರಿಂದ ಜನವರಿ ೩೦ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಹೇಳಿದೆ. ಹೀಗಾಗಿ ಜ. ೨೭ರಿಂದ ಜನವರಿ ೩೦ರವರೆಗೆ ನಾಲ್ಕು ದಿನ ಕೆಂಗೇರಿ ಮತ್ತು ಮೈಸೂರು ರಸ್ತೆ ನಡುವೆ ರೈಲು ಓಡಾಡುವುದಿಲ್ಲ.
ಈಗ ಕೆಂಗೇರಿವರೆಗೆ ಇರುವ ಮೆಟ್ರೋ ಲೈನನ್ನು ಚಲ್ಲಘಟ್ಟದವರೆಗೆ ವಿಸ್ತರಿಸುವ ಕಾಮಗಾರಿಯ ಕಮಿಷನಿಂಗ್ ಕೆಲಸಗಳನ್ನು ನಡೆಸಬೇಕಾಗಿರುವುದರಿಂದ ನಾಲ್ಕು ದಿನಗಳ ಕಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ, ನೇರಳೆ ಮಾರ್ಗದಲ್ಲಿ ಬೈಯಪ್ಪನ ಹಳ್ಳಿಯಿಂದ ಆರಂಭಗೊಂಡು ಮೈಸೂರು ರಸ್ತೆವರೆಗೆ ಮಾತ್ರ ರೈಲುಗಳು ಓಡಾಡುತ್ತವೆ. ನೇರಳ ಮಾರ್ಗದ ಪೂರ್ಣ ಸೇವೆ ಜನವರಿ ೩೧ರ ಬೆಳಗ್ಗೆ ೫ ಗಂಟೆಯಿಂದ ಪ್ರಯಾಣಿಕರಿಗೆ ದೊರೆಯಲಿದೆ.
ನಾಗಸಂದ್ರದಿಂದ ರೇಷ್ಮೆ ಸಂಸ್ಥೆವರೆಗಿನ ಹಸಿರು ಮಾರ್ಗದಲ್ಲಿ ರೈಲುಗಳ ಸೇವೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದ್ದು, ನೇರಳ ಮಾರ್ಗದಲ್ಲಿ ಮಾಡಿರುವ ಬದಲಾವಣೆಗೆ ಸಹಕರಿಸುವಂತೆ ಮನವಿ ಮಾಡಿದೆ.
ಇದನ್ನೂ ಓದಿ | Bengaluru Traffic: ಮುಹೂರ್ತ ಮೀರುವ ಭಯದಲ್ಲಿ ಕಾರಿನಿಂದ ಜಿಗಿದು ಮೆಟ್ರೋಗೆ ಹಾರಿದ ಮದುಮಗಳು!