Site icon Vistara News

Bengaluru Power Cut: ಜು.27, 28, 30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Bengaluru Power Cut

ಬೆಂಗಳೂರು: ನಗರದ 220/66/11 ಕೆವಿ ಹೆಬ್ಬಾಳ ಕೇಂದ್ರದಲ್ಲಿ 220ಕೆವಿ ಸಹಕಾರ ನಗರ-ಮಾನ್ಯತಾ ಜಿಐಎಸ್-ಹೆಬ್ಬಾಳ ಮಾರ್ಗದ ಬಿ ಹಂತದ ಕೇಬಲ್ ಸರಿಪಡಿಸುವ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಜು.27ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಗಂಗಾನಗರ, ಲಕ್ಷ್ಮಯ್ಯ ಬ್ಲಾಕ್, ವೀವರ್ ಕಾಲೋನಿ, ಸಿ.ಬಿ.ಐ ಕ್ವಾರ್ಟರ್ಸ್, ಆರ್.ಬಿ.ಐ ಕಾಲೋನಿ, ಸಿ.ಪಿ.ಯು ಬ್ಲಾಕ್, ಡಿ.ಜಿ.ಕ್ಯೂ ಕ್ವಾರ್ಟರ್ಸ್, ಮುನಿರಾಮಯ್ಯ ಬ್ಲಾಕ್, ಯು.ಎ.ಎಸ್ ಕ್ಯಾಂಪಸ್. ದಿನ್ನೂರ್ ಮುಖ್ಯ ರಸ್ತೆ, ಆರ್. ಟಿ ನಗರ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಮುನನಪ್ಪಾ ಕಾಲೋನಿ, ಎಚ್.ಎಂ.ಟಿ ಬ್ಲಾಕ್, ಚಾಮುಂಡಿನಗರ, ಮಾಜಿ ಸೈನಿಕರ ಕಾಲೋನಿ, ಆರ್‌ಟಿ ನಗರ ಪೊಲೀಸ್ ಠಾಣಾ ಪ್ರದೇಶ, ಅಶ್ವಥ್‌ ನಗರ, ಡಾಲರ್ಸ್ ಕಾಲೋನಿ, ಎಂಎಲ್‌ಎ ಲೇಔಟ್, ರತನ್ ಅಪಾರ್ಟ್‌ಮೆಂಟ್, ಗಾಯತ್ರಿ ಅಪಾರ್ಟ್‌ಮೆಂಟ್, ಫುಡ್‌ವರ್ಲ್ಡ್ ಆರ್‌ಟಿ ನಗರ, ನೃಪತುಂಗ ಬಡಾವಣೆ, ಕೃಷ್ಣಪ್ಪ ಬ್ಲಾಕ್, ಸಿಬಿಐ ಮುಖ್ಯರಸ್ತೆ, ಎಂಎಲ್‌ಎ ಲೇಔಟ್‌ನ ಭಾಗಗಳು, ಶಾಂತಿಸಾಗರ ಮುಖ್ಯ ರಸ್ತೆ, ಆರ್‌ಟಿ ನಗರ, ವೇಣುಗೋಪಾಲ ಲೇಔಟ್, ಜಡ್ಜಸ್ ಕಾಲೋನಿ, 80′ ರಸ್ತೆ, ವಿಶ್ವೇಶ್ವರ ಬ್ಲಾಕ್, ಕರಿಯಣ್ಣ ಲೇಔಟ್, ಯೋಗೇಶ್ವರ ನಗರ, ರಿಂಗ್ ರೋಡ್, ಕುವೆಂಪು ಲೇಔಟ್, ನೇತಾಜಿ ನಗರ, ವಿನಾಯಕ ಲೇಔಟ್ 1ನೇ ಹಂತ, ಮುನಿಸ್ವಾಮಿ ಗೌಡ ಅಪಾರ್ಟ್‌ಮೆಂಟ್, ಸ್ಟಾರ್ಲಿಂಗ್ ಗಾರ್ಡನ್ ಲೇಔಟ್, ಐ.ವಿ.ಆರ್.ಐ, ಗಂಗಾನಗರ ಮಾರುಕಟ್ಟೆ, ಆಲ್ಪೈನ್ ಅಪಾರ್ಟ್‌ಮೆಂಟ್, ಜೈನ್ ಅಪಾರ್ಟ್‌ಮೆಂಟ್, ಸಿ 4 ಉಪವಿಭಾಗ ಕಚೇರಿ ಗಿಡ್ಡಪ್ಪ ಬ್ಲಾಕ್, ಚೋಳನಾಯಕನಹಳ್ಳಿ, ಎಜಿಎಸ್ ಕಾಲೋನಿ, ಎಸ್‌ಬಿಎಂ ಕಾಲೋನಿ, ವೇಣುಗೋಪಾಲರೆಡ್ಡಿ ಲೇಔಟ್, ವಿನಾಯಕ ಲೇಔಟ್, ಆನಂದಗಿರಿ ಎಕ್ಸ್‌ಟೆನ್ಸೆನ್, ಎಸ್‌ಎಸ್‌ಎ ರಸ್ತೆ, ಪೊಲೀಸ್ ಕ್ವಾರ್ಟರ್ಸ್, ಹೆಬ್ಬಾಳ, ಎಸ್‌ಎಸ್ ಬ್ಲಾಕ್, ಕೆಂಪಣ್ಣ ಲೇಔಟ್, ಗುಡ್ಡದಹಳ್ಳಿ ರಸ್ತೆ, ಸುಬ್ರಮಣಿ ಕಾಲೋನಿ, ಕುಂಟಿಗ್ರಾಮ. ಕೆಇಬಿ ಲೇಔಟ್, ಸಂಜಯನಗರ, ಎಇಸಿಎಸ್ ಲೇಔಟ್, , ಹೊಯ್ಸಳ ಅಪಾರ್ಟ್‌ಮೆಂಟ್, ಗೆದ್ದಲಹಳ್ಳಿ, ಅಶ್ವಥ್ ನಾಗರಸನ್ ಜಯನಗರ, ಭೂಪಸಂದ್ರ, ಸೆಂಟ್ರಲ್ ಎಕ್ಸೈಸ್ ಲೇಔಟ್, 60′ ರಸ್ತೆ, ಕಲ್ಪನಾ ಚಾವ್ಲಾ ರಸ್ತೆ, ಮೊಹಮ್ಮದ್ ಲೇಔಟ್, ವಿಎಸ್‌ಎನ್‌ಎಲ್ ವೈಟ್ ಹೌಸ್, ದಿನ್ನೂರ್ ರಸ್ತೆಯ ಭಾಗಗಳು, ಆರ್‌ಟಿ ಬ್ಲಾಕ್ ನಗರ. ಹಳ್ಳಿ, ಚೋಳನಗರ, ಎಂ.ಎಸ್.ಎಚ್ ಲೇಔಟ್, ಶ್ರೀಮತಿ ಲೇಔಟ್, ಅಮರಜ್ಯೋತಿ ಲೇಔಟ್, ಗುಂಡಪರೆಡ್ಡಿ ಲೇಔಟ್, ಚಿದಾನಂದರೆಡ್ಡಿ ಲೇಔಟ್ ಜಿ.ಓ ಸಾಯಿ ಸ್ಲಮ್, ಕೆಂಪಣ್ಣ ಲೇಔಟ್, ನೇತಾಜಿ ನಗರ, ಚಿನ್ನಮ್ಮ ಲೇಔಟ್, ಸೀತಪ್ಪ ಲೇಔಟ್, ಸಿಐಎಲ್ ಲೇಔಟ್, ಸನ್ರೈಸ್ ಕಾಲೋನಿ, ಮೈತ್ರಿ ಬಜಾರ್, ತಿಮ್ಮಕ್ಕ ಲೇಔಟ್, ಅಕ್ಕಯ್ಯಮ್ಮ ಲೇಔಟ್,, ಗುಡ್ಡದಹಳ್ಳಿ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಇದನ್ನೂ ಓದಿ: Dengue Fever: ರಾಜ್ಯದಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ: ದಿನೇಶ್ ಗುಂಡೂರಾವ್

66ಕೆ.ವಿ ಇ.ಪಿ.ಐ.ಪಿ-ಕಾಡಗೋಡಿ ಲೈನ್‌ನ ತುರ್ತು ನಿರ್ವಹಣಾ ಕಾರ್ಯ, ವಿದ್ಯುತ್‌ ವ್ಯತ್ಯಯ

ಬೆಂಗಳೂರು ನಗರದ 66ಕೆ.ವಿ ಇ.ಪಿ.ಐ.ಪಿ-ಕಾಡುಗೋಡಿ ಲೈನ್‌ನ ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜು.28ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಬೇಲತ್ತೂರು, ಅಯ್ಯಪ್ಪ ದೇವಾಲಯ, ಕುಂಬೇನಾ ಅಗ್ರಹಾರ, ಪಾಟಲಮ್ಮ ಲೇಔಟ್, ವಿಎಸ್ಆರ್ ಲೇಔಟ್, ಕಾಡುಗೋಡಿ, ಚನ್ನಸದ್ರ, ಎಫ್ಸಿಐ ಗೌಡನ್, ಸಫಲ್, ವಿಎಸ್ಆರ್ ಲೇಔಟ್, ಕಾಡುಗೋಡಿ, ಶಂಕರಪುರ, ಸಿದ್ಧಾರ್ಥ ಲೇಔಟ್, ಸಾಯಿ ಆಶ್ರಮ, ಬೆಳತ್ತೂರು, ಎಚ್‌ಡಿಎಫ್‌ಸಿ ಬ್ಯಾಂಕ್, ಕುಂಬೇನಾ ಅಗ್ರಹಾರ, ಅಲಾಂಬಿಕ್ ಆಪ್ಟ್, ಮಾರ್ವೆಲ್ ಆಪ್ಟ್, ಹಗದುರ್, ಬಿಯರ್ ಸ್ಟ್ರೀಟ್, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಬ್ರೂಕ್ ಬಾಂಡ್, ಹಗದುರ್, ಹಗದುರ್ ಕೇನ್, ವಿನಾಯಕನಗರ, ವಿಜಯನಗರ, ಗಾಂಧಿಪುರ, ಇಮ್ಮಡಿಹಳ್ಳಿ ಮುಖ್ಯ ರಸ್ತೆ, ಹಗದುರ್, ನಾಗೊಂಡನಹಳ್ಳಿ, ನಾಗರಾಜ್ ಲೇಔಟ್, ದೋಬರಪಾಳ್ಯ, ಇಮ್ಮಡಿಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

66/11 ಕೆ.ವಿ. ಮಹಾಲಕ್ಷ್ಮಿಲೇಔಟ್ ಎಂ.ಯು.ಎಸ್.ಎಸ್. 66 ಕೆ.ವಿ. ಲೈನ್ ಬಸ್‌ನ ನಿರ್ವಾಹಣಾ ಕಾರ್ಯ, ವಿದ್ಯುತ್‌ ವ್ಯತ್ಯಯ

ಬೆಂಗಳೂರು ನಗರದ 66/11 ಕೆ.ವಿ. ಮಹಾಲಕ್ಷ್ಮಿ ಲೇಔಟ್ ಎಂ.ಯು.ಎಸ್.ಎಸ್. 66 ಕೆ.ವಿ. ಲೈನ್ ಬಸ್‌ನ ನಿರ್ವಾಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜು.30ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಮಂಜುನಾಥ್ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅರ್ಪಾಟ್‌ಮೆಂಟ್, ಶಿವನಹಳ್ಳಿ ಪಾರ್ಕ್ ಆದರ್ಶನಗರ, ಆದರ್ಶ ಲೇಔಟ್, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಮಂಜುನಾಥ್ ನಗರ, 3ನೇ ಹಂತ, 1ನೇ ಬ್ಲಾಕ್, ಬಿ-ನಗರ ಲಕ್ಷ್ಮಿನಗರ, ಎಚ್.ವಿ.ಕೆ. ಲೇಔಟ್, ಕಿರ್ಲೋಸ್ಕರ್ ಕಾಲೋನಿ, ಕರ್ನಾಟಕ ಕಾಲೋನಿ, ಕಮಲನಗರ, ವಿ.ಜೆ.ಎಸ್.ಎಸ್.ಲೇಔಟ್, ವಾರ್ಡ್ ಆಫೀಸ್ ಸುತ್ತಮುತ್ತಲಿನ ಪ್ರದೇಶ, ಗೃಹಲಕ್ಷ್ಮಿ ಲೇಔಟ್ 1ನೇ ಹಂತ, ನಾಗಪುರ, ಮಹಾಲಕ್ಷ್ಮಿಪುರಂ, ಮೋದಿ ಹಾಸ್ಪಿಟಲ್ ರಸ್ತೆ, ಪಂಜಾಬ್ ನ್ಯಾಷನಲ್ ಬ್ಯಾಂಕ ರಸ್ತೆ, ಹಂಸಲೇಖ ಮನೇ ಸುತ್ತ ಮುತ್ತ, ಶಂಕರ್ ಮಠ, ಪೈಪ್ ಲೈನ್ ರಸ್ತೆ, ಜೆ.ಸಿ.ನಗರ, ಕುರುಬರಹಳ್ಳಿ, ರಾಜಾಜಿನಗರ 2ನೇ ಬ್ಲಾಕ್, ಇ.ಎಸ್.ಐ.ಆಸ್ಪತ್ರೆ, ಕಮಲನಗರ ಮುಖ್ಯರಸ್ತೆ, ಗೆಳೆಯರ ಬಳಗ, ಭೋವಿ ಪಾಳ್ಯ, ಜಿ.ಡಿ.ನಾಯ್ಡು ಹಾಲ್, ವೆಸ್ಟ್ ಆಫ್ ಕೋರ್ಡ್‌ ರೋಡ್‌, ಮಹಾಲಕ್ಷ್ಮಿ ಲೇಔಟ್, ಇಸ್ಕಾನ್ ಎದುರುಗಡೆ, ಎಸ್.ಐ.ಟಿ ರಸ್ತೆ, ಬಿ.ಎನ್.ಇ.ಎಸ್.ಕಾಲೇಜ್, ಬೆಲ್ ಅಪಾರ್ಟ್‌ಮೆಂಟ್, ಸ್ಯಾಂಡಲ್ ಸೋಫ್ ಫ್ಯಾಕ್ಟರ್, ಯಶವಂತಪುರ ಕೈಗಾರಿಕಾ ಪ್ರದೇಶ, ಟೊಯೋಟಾ ಶೋರೂಮ್, ಎಸ್ಟೀಮ್ ಕ್ಲಾಸಿಕ್‌ ಅರ್ಪಾಟ್‌ಮೆಂಟ್ ಸುತ್ತ ಮುತ್ತಲಿನ ಪ್ರದೇಶಗಳು.

ಇದನ್ನೂ ಓದಿ: Samsung AC: ಹೊಸ ಶ್ರೇಣಿಯ ಎಸಿಗಳನ್ನು ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ಇದರ ವಿಶೇಷತೆ ಏನೇನು?

ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Exit mobile version