Site icon Vistara News

Accident news | ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಬೈಕ್‌ ಸವಾರ ಸಾವು

accident news

ಬೆಂಗಳೂರು: ಬಿಎಂಟಿಸಿ ಬಸ್ಸಿನ ಚಕ್ರಕ್ಕೆ ಸಿಲುಕಿ ದ್ವಿಚಕ್ರ ವಾಹನ ಚಾಲಕರೊಬ್ಬರು ಮೃತಪಟ್ಟಿದ್ದಾರೆ.

ದೀಪಕ್ (30) ಮೃತಪಟ್ಟ ಯುವಕ. ಕಳೆದ ರಾತ್ರಿ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಪೀಣ್ಯದ 14ನೇ ಕ್ರಾಸ್ ಬಳಿ ದುರ್ಘಟನೆ ನಡೆದಿದೆ. ಎನ್‌ಹೆಚ್ 4ರ ಕಡೆಯಿಂದ ಕಾಮಾಕ್ಷಿಪಾಳ್ಯದ ಕಡೆ ತೆರಳುತಿದ್ದ ಬಸ್ಸನ್ನು ಈ ವೇಳೆ ಎಡಭಾಗದಿಂದ ಓವರ್ ಟೇಕ್ ಮಾಡಲು ದೀಪಕ್‌ ಯತ್ನಿಸಿದ್ದರು. ಈ ವೇಳೆ ಬಸ್ಸಿನ ಹಿಂಬದಿಯ ಟೈರಿನಡಿ ಸಿಲುಕಿ ಸಾವಿಗೀಡಾಗಿದ್ದಾರೆ.

ಬೈಕ್ ಚಲಾಯಿಸುವ ವೇಳೆ ದೀಪಕ್‌ ಹೆಲ್ಮೆಟ್ ಕೂಡ ಹಾಕಿರಲಿಲ್ಲ. ಪೀಣ್ಯ ಸಂಚಾರಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ‌.

ಇದನ್ನೂ ಓದಿ | Hit and Run Case | ಐಷರ್ ವಾಹನ‌ ಡಿಕ್ಕಿಯಾಗಿ ಮೂವರು ಕೂಲಿ ಕಾರ್ಮಿಕರ ಸಾವು

Exit mobile version