Site icon Vistara News

Accident: ಕುಡಿದ ಮುತ್ತಿನಲ್ಲಿ ಲಾರಿಯ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

accident death

ಆನೆಕಲ್:‌ ಕುಡಿದ ಮುತ್ತಿನಲ್ಲಿ ಓಲಾಡಿ ಬಿದ್ದು ಲಾರಿ ಚಕ್ರಕ್ಕೆ ಸಿಲುಕಿ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

ಬಿಹಾರ ಮೂಲದ ಅಬ್ಸಿ ಸಹಾನಿ(32) ಮೃತ ವ್ಯಕ್ತಿ. ಬೆಳಗ್ಗೆ 9 ಗಂಟೆಯ ಸಮಯದಲ್ಲಿ ಆನೇಕಲ್ ಪಟ್ಟಣದ ದೇವರಕೊಂಡಪ್ಪ ವೃತ್ತದಲ್ಲಿ ಕುಡಿದ ಮತ್ತಿನಲ್ಲಿ ಸಿಕ್ಕಸಿಕ್ಕ ವಾಹನಗಳಿಗೆ ಅಡ್ಡ ಬಂದು ಬೀಳುತ್ತಿದ್ದ ಈ ವ್ಯಕ್ತಿ ಹೊಸೂರು ಮಾರ್ಗವಾಗಿ ಆನೇಕಲ್ ಪಟ್ಟಣದಿಂದ ಬೆಂಗಳೂರಿಗೆ ಹೋಗುತ್ತಿದ್ದ ಲಾರಿಯ ಹಿಂಭಾಗದ ಚಕ್ರಕ್ಕೆ ಸಿಲುಕಿದ್ದಾನೆ. ಆತನನ್ನು ತಡೆದು ಜನರು ಬೈದು ಬುದ್ಧಿ ಹೇಳಿದ್ದರೂ ಸುಮ್ಮನಿರದ ಈ ವ್ಯಕ್ತಿ ಕಬ್ಬಿಣ ತುಂಬಿಕೊಂಡು ಬರುತ್ತಿದ್ದ ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: K.Viswanath: ʼಶಂಕರಾಭರಣಂʼ ಖ್ಯಾತಿಯ ಚಿತ್ರ ನಿರ್ದೇಶಕ, ನಿರ್ಮಾಪಕ ಕೆ. ವಿಶ್ವನಾಥ್‌ ಇನ್ನಿಲ್ಲ

Exit mobile version