Site icon Vistara News

Cylinder blast: ಸಿಲಿಂಡರ್ ಸ್ಫೋಟ, ಅಂಗಡಿ ಧ್ವಂಸ, ಒಬ್ಬನಿಗೆ ಗಾಯ

Cylinder blast

ಆನೇಕಲ್: ಸ್ಟವ್ ರಿಪೇರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಮತ್ಯಾನಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಫೋಟ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಿಲಿಂಡರ್ ಸ್ಫೋಟಕ್ಕೆ ಮುತ್ತಾನಲ್ಲೂರು ಸರ್ಕಲ್‌ನಲ್ಲಿರುವ ಇಡೀ ಅಂಗಡಿಯೇ ಧ್ವಂಸವಾಗಿದೆ. ಜತೆಗೆ ಸುತ್ತಮುತ್ತಲಿನ ಅಂಗಡಿ, ಮನೆಗಳಿಗೂ ಹಾನಿಯಾಗಿದೆ. ಸ್ಥಳಕ್ಕೆ ಸೂರ್ಯನಗರ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Exit mobile version