ಹೊಸಕೋಟೆ: ಖಾಸಗಿ ಅಸ್ಪತ್ರೆಯ ವೈದ್ಯರೊಬ್ಬರು, ಅಪಘಾತದಲ್ಲಿ ಗಂಭಿರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ನರಳಾಡುತ್ತಿದ್ದ ಮಹಿಳೆಗೆ ಉಚಿತವಾಗಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣ ಉಳಿಸಿದ್ದಾರೆ. ವೈದ್ಯರ ಈ ಮಾದರಿ ನಡೆಗೆ (Doctor Kindness) ಮೆಚ್ಚುಗೆ ವ್ಯಕ್ತವಾಗಿದೆ.
2 ವರ್ಷದ ಹಿಂದೆ ಮದುವೆಯಾಗಿದ್ದ ಹೊಸಕೋಟೆಯ ಹಿಂಡಿಗನಾಳ ಮೂಲದ ಪ್ರಿಯಾ ಎಂಬ ಮಹಿಳೆಗೆ ಅಪಘಾತದಲ್ಲಿ ಗಂಭೀರ ಗಾಯವಾಗಿತ್ತು. ಇವರ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪ್ರಿಯಾ ಅವರ ತಲೆಬುರುಡೆ ಒಡೆದು ತಲೆಯಿಂದ ಮೆದುಳು ಹೊರಬಂದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕೆಯನ್ನು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಕೂಡಲೇ ಕಾರ್ಯತತ್ಪರರಾದ ಸಿಲಿಕಾನ್ ಸಿಟಿ ಆಸ್ವತ್ರೆಯ ವೈದ್ಯರು, ಸಾಯುವ ಸ್ಥಿತಿಯಲ್ಲಿ ಮೆದುಳು ಹೊರಗಡೆ ಬಂದು ನರಳಾಡುತ್ತಿದ್ದ ಮಹಿಳೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಹಣ ಪಡೆಯದೆ 24 ಗಂಟೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ. ಚಿಕಿತ್ಸೆಯಿಂದ ಪಡೆದ ಮಹಿಳೆ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರ ಕರ್ತವ್ಯಪರತೆ (Sense of duty), ಮಾನವೀಯ ಕಾರ್ಯವೈಖರಿಗೆ ಸಾರ್ವಜನಿಕರು ಹಾಗೂ ಮಹಿಳೆಯ ಕುಟುಂಬಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Kindness: ಬೀದಿಯಲ್ಲಿ ನರಳಾಡುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿದ ವೈದ್ಯರ ವರ್ತನೆಗೆ ಶ್ಲಾಘನೆ