Site icon Vistara News

Electric shock : ಡಿಶ್‌ ರಿಪೇರಿ ಮಾಡುವಾಗ ವ್ಯಕ್ತಿಗೆ ವಿದ್ಯುತ್‌ ಶಾಕ್‌! ಕೈ-ಕಾಲು ಸುಟ್ಟು ಕರಕಲು

Electric shock

ದೊಡ್ಡಬಳ್ಳಾಪುರ : ಇಲ್ಲಿನ ಬಸವೇಶ್ವರ ನಗರದಲ್ಲಿ ಮನೆ ಮೇಲೆ ಡಿಶ್ ರಿಪೇರಿ ಮಾಡಲು ಹೋದ ವ್ಯಕ್ತಿಗೆ ಕರೆಂಟ್‌ ಶಾಕ್ (Electric shock) ಹೊಡೆದಿದೆ. ಜಯಕುಮಾರ್ (26) ವಿದ್ಯುತ್ ಶಾಕ್‌ನಿಂದ ಗಂಭೀರ ಗಾಯಗೊಂಡಿದ್ದಾರೆ.

ಜಯಕುಮಾರ್‌ ಡಿಶ್ ರಿಪೇರಿ ಮಾಡುವಾಗ ಪಕ್ಕದಲ್ಲೇ ಇದ್ದ ವಿದ್ಯುತ್ ಲೈನ್ ತುಳಿದಿದ್ದಾರೆ. ಪರಿಣಾಮ ಕರೆಂಟ್‌ ಶಾಕ್‌ ಹೊಡೆದಿದ್ದು, ಕ್ಷಣಾರ್ಧದಲ್ಲಿ ದೇಹವೆಲ್ಲ ಸುಟ್ಟು ಹೋಗಿದೆ. ಶೇ. 60 ರಷ್ಟು ಸುಟ್ಟ ಗಾಯಗಳಾಗಿದ್ದು ನರಳಾಡುತ್ತಿದ್ದ ಜಯಕುಮಾರ್‌ನನ್ನು ಸ್ಥಳೀಯರು ಆಟೋ ಮೂಲಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು

ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಸವೇಶ್ವರ ನಗರದಲ್ಲಿ ಈ ಅವಘಡ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version