Site icon Vistara News

Lok Sabha Election 2024: ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಡಿ.ಕೆ. ಸುರೇಶ್

Bangalore Rural Lok Sabha Constituency Congress candidate D K Suresh Election campaign

ಮಾಗಡಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಡಿ.ಕೆ. ಸುರೇಶ್, ಶುಕ್ರವಾರ ಮಾಗಡಿ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಚುನಾವಣಾ (Lok Sabha Election 2024) ಪ್ರಚಾರ ಕೈಗೊಂಡು, ಮತಯಾಚನೆ ನಡೆಸಿದರು.

ಮಾಗಡಿ ವಿಧಾನಸಭಾ ಕ್ಷೇತ್ರದ ಶಿವಗಂಗೆಯ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಶಿವಗಂಗೆ ಬೆಟ್ಟದಿಂದ ಕುದೂರುವರೆಗೆ ಬೈಕ್ ರಾಲಿ ಮೂಲಕ ಚುನಾವಣಾ ಪ್ರಚಾರ ಮಾಡಿದರು.

ಇದನ್ನೂ ಓದಿ: Uttara Kannada News: ಬನವಾಸಿಯ ಐತಿಹಾಸಿಕ ಶ್ರೀ ಉಮಾಮಧುಕೇಶ್ವರ ದೇವರ ಮಹಾರಥೋತ್ಸವ

ಕುದೂರಿನಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮತಯಾಚನೆ ನಡೆಸಿ, ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಬಿಜೆಪಿಯವರ ಮಾತಿಗೆ ಯಾರೂ ಕಿವಿಗೊಡಬೇಡಿ, ಗ್ಯಾರಂಟಿ ತಾತ್ಕಾಲಿಕವಲ್ಲ. ಅದು ಶಾಶ್ವತ ಎಂದ ಅವರು, ಬಿಜೆಪಿ ಬರೀ ಸುಳ್ಳು ಭರವಸೆಗಳನ್ನು ಮಾತ್ರ ನೀಡುತ್ತದೆ ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು, ಎಲ್ಲರಿಗೂ ತಲುಪುತ್ತಿವೆ. ಅನುಕೂಲವಾಗಿವೆ. ಈ ಬಾರಿಯ ಚುನಾವಣೆಯಲ್ಲಿ ತಮಗೆ ಮತ ನೀಡಿ, ಕಾಂಗ್ರೆಸ್‌ ಶಕ್ತಿ ಹೆಚ್ಚಿಸಿ ಎಂದು ಮತದಾರರಲ್ಲಿ ಅವರು ಮನವಿ ಮಾಡಿದರು.

ಮಾಗಡಿ ವಿಧಾನಸಭಾ ಕ್ಷೇತ್ರದ ಶಿವಗಂಗೆ ಬೆಟ್ಟದಿಂದ ಕುದೂರುವರೆಗೆ ಸಂಸದ ಡಿ.ಕೆ. ಸುರೇಶ್, ಬೈಕ್ ರಾಲಿ ಮೂಲಕ ಚುನಾವಣಾ ಪ್ರಚಾರ ಮಾಡಿದರು.

ಈ ಸಂದರ್ಭದಲ್ಲಿ ಕೆ.ಆರ್.ಡಿ.ಸಿ.ಎಲ್. ಅಧ್ಯಕ್ಷ, ಶಾಸಕ ಎಚ್.ಸಿ. ಬಾಲಕೃಷ್ಣ, ಆಮ್ ಆದ್ಮಿ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು, ರಾಜ್ಯ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎಚ್.ಎಂ. ರೇವಣ್ಣ ಸೇರಿದಂತೆ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.

Exit mobile version