ಬೆಂಗಳೂರು: ಸೋಮವಾರ (ಮೇ 30) ನಡೆಯಬೇಕಿದ್ದ ಬೆಂಗಳೂರು ಉತ್ತರ ವಿವಿ ಬಿಕಾಂ, ಬಿಸಿಎ ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ
ಎರಡೂ ವಿಷಯಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿದಿವೆ.
ಇದನ್ನೂ ಓದಿ | UPSC Calendar 2023-24: ಯಾವ ಪರೀಕ್ಷೆ ಯಾವಾಗ ನಡೆಯುತ್ತದೆ ಚೆಕ್ ಮಾಡಿಕೊಳ್ಳಿ…
ಬಿಕಾಂನ ಪ್ರಿನ್ಸಿಪಲ್ ಆಫ್ ಮಾರ್ಕೆಟಿಂಗ್, ಬಿಸಿಎ ಪದವಿಯ ಮ್ಯಾಥಮೆಟಿಕಲ್ ಫೌಂಡೇಶನ್ ವಿಷಯದ ಪರೀಕ್ಷೆಗಳು ಮುಂದೂಡಿಕೆ ಆಗಿವೆ. ಪರೀಕ್ಷೆ ರದ್ದುಪಡಿಸಿ ಬೆಂಗಳೂರು ಉತ್ತರ ವಿವಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಉತ್ತರ ವಿವಿಯಲ್ಲಿ ಈ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಬರೆಯಲು ಸಿದ್ಧತೆಯೊಂದಿಗೆ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ನಿರಾಸೆಯಿಂದ ವಾಪಸಾದರು. ವಿವಿಯಲ್ಲಿ ಪದೇಪದೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.