ಬೆಂಗಳೂರು: ಮೌಲ್ಯಾಧಾರಿತ ಶಿಕ್ಷಣ ನೀಡಲು ಮತ್ತು ಯುವಕರಲ್ಲಿ ಸಮಗ್ರ ಅಭಿವೃದ್ಧಿ ಉತ್ತೇಜಿಸಲು ಬದ್ಧವಾಗಿರುವ ದಿಶಾ ಭಾರತ್ (Disha Bharat) ಸಂಸ್ಥೆಯ 20ನೇ ವಾರ್ಷಿಕೋತ್ಸವವನ್ನು ಫೆಬ್ರವರಿ 24ರಂದು ʼಸಂಭ್ರಮ’ ಎಂಬ ಭವ್ಯವಾದ ಕಾರ್ಯಕ್ರಮದೊಂದಿಗೆ ಆಚರಿಸುತ್ತಿದ್ದು, ನಗರದ ಆರ್.ವಿ ಟೀಚರ್ಸ್ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ದಿಶಾ ಭಾರತ್ ಸಂಸ್ಥಾಪಕಿ ರೇಖಾ ರಾಮಚಂದ್ರನ್ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ, ದಿಶಾ ಭಾರತ್ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು, ನಾಯಕತ್ವ ಗುಣಗಳು ಮತ್ತು ಜೀವನ ಕೌಶಲ್ಯ, ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುವ ಜವಾಬ್ದಾರಿಯುತ ನಾಗರಿಕರನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ದಿಕ್ಕಿನಲ್ಲಿ ಸಂಸ್ಥೆಯ ಪಯಣ 19 ವರ್ಷಗಳನ್ನು ತುಂಬಿರುವುದು ಒಂದು ಮಹತ್ವದ ಮೈಲಿಗಲ್ಲಾಗಿದೆ. 22ನೇ ವರ್ಷದ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಂಸ್ಥೆಯು ಆಯೋಜಿಸಿದೆ ಎಂದು ಹೇಳಿದರು.
ಇದನ್ನೂ ಓದಿ | Book Release: ಫೆ.29ರಂದು ಎಚ್.ಡಿ.ದೇವೇಗೌಡರ ಕುರಿತ ʼಮಣ್ಣಿನ ಮಗʼ ಕೃತಿ ಲೋಕಾರ್ಪಣೆ
ಸುದ್ದಿಗೋಷ್ಠಿಯಲ್ಲಿ ಸಂಯೋಜಕಿಯರಾದ ಲಾವಣ್ಯ, ಸ್ನೇಹಾ ದಾಮ್ಲೆ, ಸಹ ಸಂಯೋಜಕಿ ಸ್ಮೃತಿ ಖರೆ, ಡಿಜಿಟಲ್ ಕೋ ಆರ್ಡಿನೇಟರ್ ಉಪಸ್ಥಿತರಿದ್ದರು.
ವಾರ್ಷಿಕೋತ್ಸವ ಹಿನ್ನೆಲೆ ವಿವಿಧ ಕಾರ್ಯಕ್ರಮಗಳ ಆಯೋಜನೆ
- ಮಾಸಿಕ ಉಪನ್ಯಾಸ ಮಾಲಿಕೆ ಭಾರತೀಯ ಇತಿಹಾಸಗಳಿಂದ ನೈತಿಕತೆ ಮತ್ತು ಜೀವನಾದರ್ಶಗಳು
- ಶಿಕ್ಷಣ ತಜ್ಞರ ವಿಚಾರಘೋಷ್ಠಿ
- ಮೆಗಾ ಯುವ ಸಮಾವೇಶ
- ಹ್ಯಾಶ್ ಟ್ಯಾಗ್ spreadinggoodness ಚಾಲೆಂಜ್ – ಆನ್ಲೈನ್ ಅಭಿಯಾನ
- ಮೌಲ್ಯ ಶಿಕ್ಷಣದ ಕುರಿತಾಗಿ ರಾಷ್ಟ್ರಮಟ್ಟದ ಶಿಕ್ಷಣ ತಜ್ಞರ ಮತ್ತು ಶಿಕ್ಷಕರ ಸಮ್ಮೇಳನ
- ಎನ್ ಎಸ್ ಎಸ್ ಸಂಯೋಜಕರ ಸಮಾಗಮ
- ಸೇವಾ ಕುಂಭ – ಯುವಜನರ ಸಬಲೀಕರಣ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳ ಒಕ್ಕೂಟ
- ಕಾರ್ಯಕರ್ತರ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರಗಳು
- ಮೇರಾ ಭಾರತ್ ಮಹಾನ್ – ರಾಜ್ಯ ಮಟ್ಟದ ರಸಪ್ರಶ್ನೆ
- ಶಿಕ್ಷಕರಿಗೆ ಮತ್ತು ಪೋಷಕರಿಗೆ ಕಾರ್ಯಾಗಾರಗಳು
- ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಸಮರ್ಥ ನಾಯಕತ್ವ, ಭಾರತದ ಜ್ಞಾನಧಾರೆ ಮುಂತಾದ ವಿಷಯಗಳ ಬಗ್ಗೆ ಅನ್ಲೈನ್ ಮತ್ತು ಆಫ್ ಲೈನ್ ಕೋರ್ಸ್ ಪ್ರಾರಂಭ
- ಮೌಲ್ಯಾಧಾರಿತ ಶಿಕ್ಷಣ ಕಲಿಸಲು ಆಸಕ್ತ ತರಬೇತುದಾರರಿಗೆ ತರಬೇತಿ ಕಾರ್ಯಾಗಾರ-Train the trainer
- ದಿಶಾಭಾರತ್ – ರಾಜ್ಯಾದ್ಯಂತ / ರಾಷ್ಟ್ರಾದ್ಯಂತ ಘಟಕಗಳ ಪ್ರಾರಂಭ
- ಯುವಜನ – ರಾಷ್ಟ್ರ ನಿರ್ಮಾಣದ ರೂವಾರಿಗಳು