Site icon Vistara News

2nd Puc Exam : ಆನ್‌ಲೈನ್‌ನಲ್ಲೆ ಸಿಗುತ್ತೆ ಪಿಯು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

2nd Pux Exam

ಬೆಂಗಳೂರು: ಏಪ್ರಿಲ್ 29 ರಿಂದ ಮೇ 16ರವರೆಗೆ ನಡೆದಿದ್ದ 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ (2nd Puc Exam) ಫಲಿತಾಂಶ ಪ್ರಕಟಗೊಂಡಿದೆ. ಇದರ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ 2ರ ಉತ್ತರ ಪತ್ರಿಕೆಯ ಸ್ಕ್ಯಾನ್ಡ್‌ ಪ್ರತಿ ಪಡೆಯಲು, ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗಾಗಿ ಮೇ 21ರಿಂದ 23ರವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕಡ್ಡಾಯವಾಗಿ ಸ್ಕ್ಯಾನಿಂಗ್‌ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಮರುಮೌಲ್ಯಮಾಪನ ಹಾಗೂ ಮರುಎಣಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅಂತಹವರು ಮೇ 22ರಿಂದ 25ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಯನ್ನು Kseab.karnataka.gov.in ವೆಬ್‌ಸೈಟ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಡೌನ್‌ಲೋಡ್‌ ಮಾಡಿಕೊಳ್ಳಲು ಮೇ 22ರಿಂದ 24ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಸ್ಕ್ಯಾನಿಂಗ್‌ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಶುಲ್ಕ ನಿಗದಿ ಮಾಡಲಾಗಿದೆ. ಮರು ಮೌಲ್ಯಮಾಪನದ ಶುಲ್ಕದ ಪ್ರತಿ ವಿಷಯಕ್ಕೆ 1,670 ರೂ. ಇದೆ. ಇನ್ನೂ ಯಾವುದೇ ಅಭ್ಯರ್ಥಿಗಳು ಪರೀಕ್ಷೆ 3ಕ್ಕೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನ ಫಲಿತಾಂಶಕ್ಕಾಗಿ ಕಾಯಬೇಕಾಗಿಲ್ಲ. ಮರು ಮೌಲ್ಯಮಾಪನದಲ್ಲಿ ಗಳಿಸಿದ ಅಂಕಗಳೇ ಪರೀಕ್ಷೆ 2ರ ಅಂತಿಮ ಅಂಕಗಳೆಂದು ಪರಿಗಣಿಸಲಾಗುತ್ತದೆ. ಇನ್ನೂ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಯ ಫಲಿತಾಂಶವನ್ನು , ಮಂಡಲಿಯ ವೆಬ್‌ಸೈಟ್‌ Kseab.karnataka.gov.in ಪ್ರಕಟಿಸಲಾಗುತ್ತದೆ. ಅಂಕಗಳ ಮರುಎಣಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಇದನ್ನೂ ಓದಿ: 2nd PUC Result : ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಫಲಿತಾಂಶವನ್ನು ಮೊಬೈಲ್‌ನಲ್ಲೇ ನೋಡಿ

ದ್ವಿತೀಯ ಪಿಯುಸಿ ಪರೀಕ್ಷೆ-3ರ ವೇಳಾಪಟ್ಟಿ ಪ್ರಕಟ; ನೋಂದಣಿಗೂ ಡೇಟ್‌ ಫಿಕ್ಸ್‌

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ (2nd PUC Exam) 3ನೇ ಪೂರಕ ಪರೀಕ್ಷೆಯು ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜೂನ್‌ 24ರಿಂದ ಜುಲೈ 5ರವರೆಗೆ ಪರೀಕ್ಷೆಯು ನಡೆಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30 ಹಾಗೂ ಮಧ್ಯಾಹ್ನ 2:15ರಿಂದ 4:30 ಪರೀಕ್ಷೆಯ ಸಮಯವಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆ -3ರ ವೇಳಾಪಟ್ಟಿ ಹೀಗಿದೆ


ದಿನಾಂಕ- ವಿಷಯ
ಜೂನ್‌ 24- ಕನ್ನಡ, ಅರೇಬಿಕ್
ಜೂನ್‌ 25- ಇಂಗ್ಲೀಷ್‌
ಜೂನ್‌ 26- ಸಮಾಜಶಾಸ್ತ್ರ , ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಜೂನ್‌ 27- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
ಜೂನ್‌ 28- ಅರ್ಥಶಾಸ್ತ್ರ, ರಸಾಯನಶಾಸ್ತ್ರ
ಜೂನ್‌ 29 – ಇತಿಹಾಸ, ಭೌತಶಾಸ್ತ್ರ
ಜುಲೈ 1 – ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ
ಜುಲೈ 2 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ
ಜುಲೈ 3 – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ
ಜುಲೈ 4- ಹಿಂದಿ
ಜುಲೈ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಹಾಗೂ ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ,ರೀಟೈಲ್‌, ಆಟೋ ಮೊಬೈಲ್‌, ಬ್ಯೂಟಿ ಮತ್ತು ವೆಲ್‌ನೆಸ್‌

ಪರೀಕ್ಷೆ -3ಕ್ಕೆ ನೋಂದಾಯಿಸಿಕೊಳ್ಳಲು ಹೀಗೆ ಮಾಡಿ

2023-24ನೇ ಸಾಲಿನ ಫಲಿತಾಂಶ ಪೂರ್ಣಗೊಂಡಿರದ ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳುವ ಹೊಸಬರು ಮತ್ತು ಖಾಸಗಿಯಾಗಿ ನೋಂದಾವಣೆಯಾದ ವಿದ್ಯಾರ್ಥಿಗಳು ಮಂಡಲಿಯ ವೆಬ್‌ಸೈಟ್‌ ಮೂಲಕ ನೇರವಾಗಿ ಪರೀಕ್ಷೆ 3ಕ್ಕೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೇ 23ರಿಂದ 28ರವರಗೆ ದಂಡ ರಹಿತ ನೋಂದಣಿ ಮಾಡಿಕೊಳ್ಳಬಹುದು. ಒಂದು ವೇಳೆ ಮೇ 28ರೊಳಗೆ ಅರ್ಜಿ ಸಲ್ಲಿಸದೇ ಹೋದರೆ ಮೇ 29ರಿಂದ 30ರವರೆಗೆ ದಂಡ ಸಹಿತ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಪರೀಕ್ಷೆ 3ಕ್ಕೆ ಪರೀಕ್ಷಾ ಶುಲ್ಕ ಪಾವತಿಸಲು ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಫಲಿತಾಂಶ ಉತ್ತಮ ಪಡಿಸಿಕೊಳ್ಳುವ ವಿದ್ಯಾರ್ಥಿಗಳ ಮಾಹಿತಿಯನ್ನು ಪ್ರಾಂಶುಪಾಲರು ಕೆಎಸ್‌ಇಎಬಿ ತಂತ್ರಾಂಶದಲ್ಲಿ ಸಲ್ಲಿಸಬೇಕು. ಮೇ 23ರಿಂದ ಮ28ರ ಒಳಗಾಗಿ ಇಂದೀಕರಿಸಬೇಕು. ಕೊನೆ ದಿನವನ್ನು ಮೀರಿದರೆ ದಂಡ ಸಹಿತ ಮೇ 29ರಿಂದ 30ರವರೆಗೆ ಅವಕಾಶ ಕಲ್ಪಿಸಲಾಗಿದೆ.

2024ರ ಪರೀಕ್ಷೆ 3ಕ್ಕೆ ಪರೀಕ್ಷಾ ಶುಲ್ಕವನ್ನು ನಿಗಧಿಸಲಾಗಿದೆ. ಒಂದು ವಿಷಯಕ್ಕೆ 140 ರೂ ಹಾಗೂ ಎರಡು ವಿಷಯಕ್ಕೆ 270 ರೂ., ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400 ರೂ. ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ 3ಕ್ಕೆ ಮೇ 24ರಿಂದ 28ರವರೆಗೆ ತಮ್ಮ ಕಾಲೇಜು ಅಥವಾ KSEAB ಪೋರ್ಟಲ್‌ನಲ್ಲಿ ಆನ್‌ಲೈನ್‌ ಮುಖಾಂತರ ನೋಂದಾಯಿಸಿಕೊಳ್ಳಬಹುದು. ಇನ್ನೂ ಫಲಿತಾಂಶ ತಿರಸ್ಕರಣಾ ಪದ್ಧತಿಯನ್ನು ರದ್ದುಪಡಿಸಲಾಗಿದೆ. 2023ರ ನಂತರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು 2024ರ ದ್ವಿತೀಯ ಪಿಯುಸಿ ಪರೀಕ್ಷೆ 3ರಲ್ಲಿ ಹಾಜರಾಗಬೇಕಾದರೆ ಮಂಡಲಿಯು ಒದಗಿಸಿದ ಫಲಿತಾಂಶದ ಪಟ್ಟಿಯ ಆಧಾರದ ಮೇಲೆ ಶುಲ್ಕವನ್ನು ಭರಿಸಬೇಕಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version