Site icon Vistara News

2nd PUC Result: ದ್ವಿತೀಯ ಪಿಯುಸಿಯಲ್ಲಿ ಶೇ.98% ಅಂಕ ಗಳಿಸಿದ ಪ್ರೀತಂ

Preetham m scored 98 percent result in 2nd PUC

ಬೆಂಗಳೂರು: 2023-24 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು (2nd PUC Result 2024), ಬೆಂಗಳೂರಿನ ರಾಮಮೂರ್ತಿ ನಗರದಲ್ಲಿನ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರೀತಂ 600ಕ್ಕೆ 585 ಅಂಕಗಳನ್ನು ಗಳಿಸಿ, ಶೇ. 98% ಪಡೆದಿದ್ದಾನೆ.

ಬೆಂಗಳೂರಿನ ಡೈನಾನಿಕ್‌ ಟ್ರಾವೆಲ್ಸ್‌ ಸಂಸ್ಥೆಯ ಮಾಲೀಕ ಮೋಹನ್‌ ಕುಮಾರ್‌ ಎಂ.ಎನ್‌ ಹಾಗೂ ನೇತ್ರಾವತಿ ಟಿ. ದಂಪತಿಯ ಪುತ್ರ ಪ್ರೀತಂ ಎಂ., ದ್ವಿತೀಯ ಪಿಯುಸಿಯಲ್ಲಿ 98% ಅಂಕ ಗಳಿಸಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಡೈನಾಮಿಕ್‌ ಟ್ರಾವೆಲ್ಸ್‌ ಸಂಸ್ಥೆಯ ಸಿಬ್ಬಂದಿ ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Akshay Kumar: ಅಕ್ಷಯ್‌ ಕುಮಾರ್‌ ಅಭಿನಯದ ‘ಸ್ಕೈ ಫೋರ್ಸ್ʼ ಟೀಸರ್‌ ಔಟ್‌!

ಈ ಕುರಿತು ಮಾತನಾಡಿದ ವಿದ್ಯಾರ್ಥಿ ಪ್ರೀತಂ, ಪೋಷಕರ ಸಹಕಾರ, ಶಿಕ್ಷಕರ ನೆರವು, ರಾತ್ರಿ 1-2 ಗಂಟೆಯ ತನಕ ಓದುವಿಕೆಯಿಂದ ಸಾಧನೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

2nd PUC Result 2024: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗಿನ ತಾಯಿ – ಮಗಳು ಪಾಸ್!

ಮಡಿಕೇರಿ: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ -1ರ ಫಲಿತಾಂಶವನ್ನು (2nd PUC Result) ಬುಧವಾರ ಪ್ರಕಟವಾಗಿದೆ. ಕೊಡಗಿನಲ್ಲಿ ಈ ಬಾರಿ ತಾಯಿ – ಮಗಳು ಗಮನ ಸೆಳೆದಿದ್ದಾರೆ. ಜಿಲ್ಲೆಯ ಚೆಟ್ಟಳ್ಳಿಯ ತಾಯಿ‌-ಮಗಳು ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.

ತಾಯಿ ಬೇಬಿರಾಣಿ ಹಾಗೂ ಮಗಳು ರಿನಿಶಾ ಉತ್ತೀರ್ಣರಾದವರು. ರಿನಿಶಾ ಸೈನ್ಸ್‌ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದು, 600ಕ್ಕೆ 570 ಅಂಕ ಪಡೆದು ಪಾಸ್ ಆಗಿದ್ದಾಳೆ. ತಾಯಿ ಬೇಬಿರಾಣಿ ಕಲಾ ವಿಭಾಗವನ್ನು ಪಡೆದುಕೊಂಡಿದ್ದು, 600ಕ್ಕೆ 388 ಅಂಕ ಪಡೆದು ಪಾಸ್ ಆಗಿದ್ದಾರೆ. ತಾಯಿ – ಮಗಳು ಇಬ್ಬರೂ ಬೇರೆ ಬೇರೆ ಕಾಲೇಜು ಸೇರಿದ್ದರು.

ತಾಯಿಗೆ ಪಿಯುಸಿ ವಿದ್ಯಾಭ್ಯಾಸ ಪೂರೈಸುವಂತೆ ಮಗಳು ರಿನಿಶಾ ಬಹಳ ಒತ್ತಾಯ ಮಾಡಿದ್ದಳಂತೆ ಈ ಕಾರಣಕ್ಕಾಗಿ ತಾಯಿ ಬೇಬಿರಾಣಿ ಈ ವಯಸ್ಸಿನಲ್ಲಿಯೂ ಓದಿ ಪರೀಕ್ಷೆ ಬರೆದು ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: Paris Olympics: ಟ್ರ್ಯಾಕ್‌-ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದರೆ 41.6 ಲಕ್ಷ ಬಹುಮಾನ!; ಐತಿಹಾಸಿಕ ನಿರ್ಧಾರ ಪ್ರಕಟಿಸಿದ ಡಬ್ಲ್ಯುಎ

25 ವರ್ಷಗಳ‌‌ ಹಿಂದೆ ಹತ್ತನೇ ತರಗತಿಯನ್ನು ಓದಿದ್ದೆ. ಬಳಿಕ ನನಗೆ ಓದಿನ ಬಗ್ಗೆ ಗಮನ ಕೊಡಲು ಆಗಿಲ್ಲ. ಮದುವೆ, ಮನೆ, ಸಂಸಾರ ಹೀಗೆ ಕುಟುಂಬದ ಜವಾಬ್ದಾರಿಯಲ್ಲಿ ಇದ್ದೆ. ಆದರೆ, ನನ್ನ ಮಗಳ ಒತ್ತಾಸೆ ಮೇರೆಗೆ ಓದಿ ಪರೀಕ್ಷೆಯನ್ನು ಬರೆದೆ. ಅದರಲ್ಲಿ ಈಗ ಪಾಸ್‌ ಆಗಿದ್ದು ನನಗೆ ನಿಜಕ್ಕೂ ಸಂತಸ ತಂದಿದೆ. ಅಲ್ಲದೆ, ಇದಕ್ಕೆ ನನ್ನ ಮನೆಯವರ ಪ್ರೋತ್ಸಾಹವೂ ಇದೆ” ಎಂದು ಬೇಬಿರಾಣಿ ಹೇಳಿಕೊಂಡಿದ್ದಾರೆ.

Exit mobile version