ಬೆಂಗಳೂರು: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ನೇಷನ್ ಫಸ್ಟ್ ಸಿಟಿಜನ್ಸ್ ಸೋಲ್ಜರ್ಸ್ ಮತ್ತು ಪ್ರಗತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ‘ರಾಷ್ಟ್ರಕ್ಕಾಗಿ ಓಟ, ಸೈನಿಕರೊಂದಿಗೆ ಓಟ’ ಧ್ಯೇಯದೊಂದಿಗೆ ಸೋಲ್ಜರ್-ಎ-ಥಾನ್ ‘5K ರಿಪಬ್ಲಿಕ್ ರನ್’ ಅನ್ನು (5K Republic Run) ಆಯೋಜಿಸಲಾಗಿತ್ತು.
ಧ್ವಜಾರೋಹಣದ ನಂತರ ಮುಖ್ಯ ಅತಿಥಿಗಳಾದ 1971 ಯುದ್ಧದ ಯೋಧ ಹಾಗೂ ನಿವೃತ್ತ ಸೈನಿಕ ಗೋಪಶೆಟ್ಟಿ ಅವರು ಅತ್ಯಂತ ಭಾವುಕರಾಗಿ ಭಾರೀ ಉತ್ಸಾಹ ಮತ್ತು ಕ್ರೀಡಾ ಮನೋಭಾವದಿಂದ ನೆರೆದಿದ್ದ ಪ್ರೇಕ್ಷಕರ ಕಡೆಗೆ ಸಂತೋಷವನ್ನು ವ್ಯಕ್ತಪಡಿಸಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶಿವಕುಮಾರ್ ಗೌಡ ಅವರು, ಭಾರತೀಯ ಸೇನೆಯ ನಿವೃತ್ತ ಸಂಘಟಕರನ್ನು ಮತ್ತು ವಿಶೇಷವಾಗಿ ನಿರ್ಗತಿಕ ಮಕ್ಕಳಿಗೆ ಮತ್ತು ವಿಶೇಷಚೇತನರಿಗೆ ಸೇವೆ ಸಲ್ಲಿಸುತ್ತಿರುವ ಪ್ರಗತಿ ಚಾರಿಟಬಲ್ ಟ್ರಸ್ಟ್ ಸದಸ್ಯರನ್ನು ಅಭಿನಂದಿಸಿದರು.
ಇದನ್ನೂ ಓದಿ | Republic Day 2024: ರಾಮ, ನಾರಿಶಕ್ತಿ, ಇಸ್ರೋ; ಸ್ತಬ್ಧಚಿತ್ರಗಳ ಫೋಟೊಗಳು ಇಲ್ಲಿವೆ
ಬಿಬಿಎಂಪಿ ಮಾಜಿ ಆಯುಕ್ತ ಅನಿಲ್‌ಕುಮಾರ್ ಐಎಎಸ್, ಸಂಘಟಕರ ಉದಾತ್ತ ಉಪಕ್ರಮವನ್ನು ಶ್ಲಾಘಿಸಿದರು. ಓಟದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಅಪಾರ ಜನಸಮೂಹಕ್ಕೆ ಸಂಘಟಕರಾದ ಮನೀಶ್ ಸೂರ್ಯ ಮತ್ತು ಮುನೇಶ್ ಕಸ್ತಿ ಅವರು ಧನ್ಯವಾದ ಅರ್ಪಿಸಿದರು.