ಬೆಂಗಳೂರು: ಎನ್.ಸಿ.ಸಿ. ಪ್ರಾರಂಭಗೊಂಡು 75 ವಸಂತಗಳನ್ನು ಪೂರ್ಣಗೊಳಿಸಿದ ಸಲುವಾಗಿ ನಂ 2 ಕರ್ನಾಟಕ ಟೆಕ್ನಿಕಲ್ ಏರ್ ಸ್ಕ್ವಾರ್ಡ್ರನ್ ಎನ್.ಸಿ.ಸಿ. ವತಿಯಿಂದ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೃಷ್ಣರಾಜಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರದ (Blood Donation Camp) ಮೂಲಕ ಅತ್ಯಂತ ಯಶಸ್ವಿಯಾಗಿ 75ನೇ ಎನ್‌ಸಿಸಿ ವಾರ್ಷಿಕೋತ್ಸವ ಸಪ್ತಾಹ (75th anniversary of NCC) ಪೂರ್ಣಗೊಂಡಿತು.
ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಕಾಲೇಜಿನ ಪ್ರಾಂಶುಪಾಲರಾದ ನಳಿನಿ ಆರ್. ಅವರು ಚಾಲನೆ ನೀಡಿದರು. ಕಾಕತಾಳೀಯವೆಂಬಂತೆ 75 ವಸಂತಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜಿನ ಸಿಬ್ಬಂದಿ ಹಾಗೂ ಎನ್.ಸಿ.ಸಿ ಸಿಬ್ಬಂದಿ ವತಿಯಿಂದ 75 ಯುನಿಟ್‌ಗಳ ರಕ್ತವನ್ನು ಶೇಖರಿಸಲಾಯಿತು.
ವಾರ್ಷಿಕೋತ್ಸವ ಸಪ್ತಾಹದ ಈ ಸಂದರ್ಭದಲ್ಲಿ ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಗಿಡನೆಡುವಿಕೆ, ಹುತಾತ್ಮರಿಗೆ ಗೌರವ ಸಲ್ಲಿಕೆ, ಮಾಧಕ ವಸ್ತುಗಳ ಸೇವನೆಯ ನಿಷೇಧದ, ವಾಕಾಥಾನ್‌ನಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಯುನಿಟ್‌ನ ವಿವಿಧ ಶಾಲೆಗಳು ಆಯಾ ಶಾಲಾಸಂಸ್ಥೆಗಳ ಆವರಣದಲ್ಲಿ ಗಿಡನೆಡುವ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಐ.ಟಿ.ಐ ವಿದ್ಯಾಮಂದಿರ ಪ್ರೌಢಶಾಲೆ, ಅಮರಜ್ಯೋತಿ ಶಾಲೆ, ಡಿಯಾ ಅಕಾಡೆಮಿ ಶಾಲೆ, ಶ್ರೀವಾಣಿ ವಿದ್ಯಾಸಂಸ್ಥೆ, ಐ.ಟಿ.ಐ ಸೆಂಟ್ರಲ್ ಶಾಲೆ, ಸೇಂಟ್ ಪ್ಯಾಟ್ರಿಕ್ ಅಕಾಡೆಮಿ ಶಾಲೆ, ಕೇಂದ್ರೀಯ ವಿದ್ಯಾಲಯ ಹೆಬ್ಬಾಳ ವಿದ್ಯಾಸಂಸ್ಥೆಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ | UPSC Mains Result 2023: ಯುಪಿಎಸ್ಸಿ ಮುಖ್ಯ ಪರೀಕ್ಷೆಯ ರಿಸಲ್ಟ್ ಪ್ರಕಟ; ಚೆಕ್ ಮಾಡ್ಕೊಳ್ಳಿ
ಯುನಿಟ್ ವತಿಯಿಂದ ಅಡ್ಜಟೆಂಟ್ ಅಶೋಕ್ ಕುಮಾರ್ ಮೊಹಂತಿ, ಸಾರ್ಜೆಂಟ್ ಭೂಷಣ್ ರಾಣೆ, ಕಾರ್ಪೊರಲ್ ವಿಜಯ್ ಅಥಣಿ, ಕಾರ್ಪೊರಲ್ ಭಾಷ ಹಾಗೂ ಇತರರು ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ