Site icon Vistara News

ಪೊಲೀಸರಿಂದ ಅನ್ಯಾಯವಾಗಿದೆ ಎಂದು ಕಮಿಷನರ್ ಕಚೇರಿ ಬಳಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ

ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಮಗಳ ವರದಕ್ಷಿಣೆ ಪ್ರಕರಣದಲ್ಲಿ ಅನ್ಯಾಯ ಆಗಿದೆ. ಪೊಲೀಸರು ಲಂಚ ಪಡೆದು ನಮಗೆ ಮೋಸ ಮಾಡಿದ್ದಾರೆ ಎಂದು ವಿಜಯಪುರದ ನಿವಾಸಿಯೊಬ್ಬರು ನಗರದ ಪೊಲೀಸ್ ಆಯುಕ್ತರ ಕಚೇರಿ ಗೇಟ್‌ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿಜಯಪುರ ಮೂಲದ ಸಿದ್ದರಾಮಗೌಡ ವಿಷ ಸೇವನೆ ಮಾಡಿದವರು. ಮಗಳ ವರದಕ್ಷಿಣೆ ಪ್ರಕರಣದ ತನಿಖೆ ವೇಳೆ ಅಮೃತಹಳ್ಳಿ ಪೊಲೀಸರು ಹಣ ಹಾಗೂ ಚಿನ್ನಾಭರಣ ಪಡೆದು ಮೋಸ ಮಾಡಿದ್ದಾರೆ. ಪ್ರಕರಣದಲ್ಲಿ ನಮಗೆ ನ್ಯಾಯ ದೊರೆತಿಲ್ಲ ಎಂದು ಆರೋಪಿಸಿ ಅವರು ಕಮಿಷನರ್ ಕಚೇರಿ ಹಿಂಬದಿ ಗೇಟ್ ಬಳಿ ವಿಷ ಸೇವನೆ ಮಾಡಿದ್ದಾರೆ.
ನಿತ್ರಾಣವಾಗಿ ಬಿದ್ದಿದ್ದ ಸಿದ್ದರಾಮಗೌಡ ಅವರನ್ನು ಪೊಲೀಸರು ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ | ರಾಯಚೂರಿನ ನಂತರ ಬಳ್ಳಾರಿಯಲ್ಲಿ ಆತಂಕ: ಕಲುಷಿತ ನೀರು ಸೇವನೆಯಿಂದ ಓರ್ವ ಬಾಲಕಿ ಸಾವು, 20 ಮಂದಿ ಅಸ್ವಸ್ಥ

Exit mobile version