Site icon Vistara News

Yuva Dasara: ಯುವ ದಸರಾದಲ್ಲಿ ಮನಮೋಹಕ ಭರತನಾಟ್ಯ ಪ್ರದರ್ಶನ

Bharatanatyam performance

ಬೆಂಗಳೂರು: ಜಯನಗರದಲ್ಲಿ ಯುವಕ ಸಂಘ ಹಾಗೂ ಸುಮಧುರ ಗ್ರೂಪ್ಸ್‌ ಸಹಯೋಗದಲ್ಲಿ ಆಯೋಜಿಸಿರುವ ‘ಯುವ ದಸರಾ – ಕರುನಾಡ ಕವಯಿತ್ರಿಯರುʼ ಕಾರ್ಯಕ್ರಮದಲ್ಲಿ ಶ್ರೀ ರುದ್ರಾಕ್ಷ ನಾಟ್ಯಾಲಯದ ಕಲಾವಿದರು ಮನಮೋಹಕವಾಗಿ ಭರತನಾಟ್ಯ ಪ್ರದರ್ಶನ ಮಾಡಿದರು.

ಯುವ ದಸರಾದ 6ನೇ ದಿನವಾದ ಶುಕ್ರವಾರ ಸಂಜೆ 6 ಗಂಟೆಗೆ ಜಯನಗರದ ವಿವೇಕ ಸಭಾಂಗಣದಲ್ಲಿ ಕರುನಾಡ ಕವಯಿತ್ರಿಯರು ಭರತನಾಟ್ಯ ಪ್ರದರ್ಶನ ನೆರವೇರಿತು. ಶ್ರೀ ರುದ್ರಾಕ್ಷ ನಾಟ್ಯಾಲಯದ ಪದ್ಮಿನಿ ಎಸ್. ಉಪಾಧ್ಯ ಮತ್ತು ತಂಡದವರು ಅಕ್ಕಮಹಾದೇವಿ, ಹರಪನಹಳ್ಳಿ ಭೀಮವ್ವ, ಹೆಳವನಕಟ್ಟಿ ಗಿರಿಯಮ್ಮ ಸೇರಿ ಕರ್ನಾಟಕದ ವಿವಿಧ ಕವಯಿತ್ರಿಯರ ಭರತನಾಟ್ಯ ನೃತ್ಯ ಪ್ರದರ್ಶಿಸಿದರು. ಸುತ್ತಮುತ್ತಲಿನ ವಿವಿಧ ಕಲಾಭಿಮಾನಿಗಳು ಕಲಾಪ್ರೇಕ್ಷಕರು ನೃತ್ಯವನ್ನು ನೋಡಿ ಕಣ್ತುಂಬಿಕೊಂಡರು.

ಬೆಳಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಭಾವಗೀತೆ, ದೇಶಭಕ್ತಿ ಗೀತೆಗಳ ಸಮೂಹ ಗಾಯನ ಸ್ಪರ್ಧೆ ನಡೆಯಿತು. ಇದರಲ್ಲಿ ವಿವಿಧ ಕಾಲೇಜುಗಳಿಂದ 11 ತಂಡಗಳು ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳು ನಗದು ಬಹುಮಾನವನ್ನು ಪಡೆದುಕೊಂಡರು.

ಇದನ್ನೂ ಓದಿ | Navaratri: ವಿದ್ಯಾದೇವತೆ ಸರಸ್ವತಿ ಪೂಜೆ; ಏನಿದರ ಮಹತ್ವ?

5ನೇ ದಿನವಾದ ಗುರುವಾರ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯ, ಕಲಾವಿದನ ಕಷ್ಟಗಳು, ಪರಿಸರ ಕುರಿತು, ಶ್ರೀ ರಾಘವೇಂದ್ರ ಸ್ವಾಮಿ, ಏಕಲವ್ಯ, ಪರಶುರಾಮ, ಬಬ್ರುವಾಹನ, ಶಕುನಿ, ರಾವಣ, ಶಿಕ್ಷಕ, ವಿದ್ಯಾರ್ಥಿ, ರಾಜಕಾರಣಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಏಕಪಾತ್ರಾಭಿನಯ ಹಾಗೂ ನಾಟಕ ಸ್ಪರ್ಧೆ ನಡೆದಿತ್ತು. ಇದರಲ್ಲಿ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಯಾ ವಿಭಾಗದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.

ಅದೇ ರೀತಿ ಶೋಭಾ ಎನ್.ಎಸ್ ಮತ್ತು ತಂಡದಿಂದ ಭಕ್ತಿ ಗೀತೆಗಳು ಹಾಗೂ ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದಿಂದ ತಬಲ ತರಂಗ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ವಿವಿಧ ಭಕ್ತಿ ಗೀತೆಗಳ ಮೂಲಕ ಶೋಭಾ ಎನ್.ಎಸ್. ತಂಡವು ಪ್ರೇಕ್ಷಕರನ್ನು ರಂಜಿಸಿತು. ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದ ಅಮೃತೇಶ್ ಕುಲಕರ್ಣಿ ತಂಡದಿಂದ ತಬಲವಾದ್ಯದ ಮೂಲಕ ತಬಲಾ ತರಂಗವನ್ನು ಪ್ರಸ್ತುತ ಪಡಿಸಿದ್ದರು.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಸೃಷ್ಟಿ ಸ್ಥಿತಿ ಲಯಕಾರಿಣಿಯಾದ ಜಗನ್ಮಾತೆಯ ಸ್ವರೂಪ ವೈಭವ: ನವರಾತ್ರಿ

ಅ. 24 ರವರೆಗೆ ವಿವಿಧ ಕಾರ್ಯಕ್ರಮ

ನಾಡಹಬ್ಬ ದಸರಾ ಅಂಗವಾಗಿ ಯುವಕ ಸಂಘದ (Yuvaka Sangha) ವತಿಯಿಂದ ಜಯನಗರದ ಯುವಪಥ ಸಭಾಂಗಣದಲ್ಲಿ ಯುವ ದಸರಾ’ (ಅ.15ರಿಂದ 24ರವರೆಗೆ) ಆಯೋಜಿಸಲಾಗಿದೆ. ಅ. 24ರವರೆಗೆ ಪ್ರತಿ ದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Exit mobile version