ಕೆ.ಆರ್.ಪುರ: ರಾಮಮೂರ್ತಿನಗರ ಸಮೀಪದ ಕನಕನಗರ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಹೈವೋಲ್ಟೇಜ್ ವಿದ್ಯುತ್ ಕಂಬ ಏರಿ ಯುವಕನೊಬ್ಬ ಹುಚ್ಚಾಟ ಮೆರೆದಿದ್ದಾನೆ.
ಸಂಜೆ 5 ಗಂಟೆಗೆ ವಿದ್ಯುತ್ ಕಂಬ ಏರಿರುವ ಭೂಪ ರಾತ್ರಿ 11ರ ವರೆಗೂ ಹೈವೋಲ್ಟೇಜ್ ಕಂಬದ ಮೇಲೆ ಕುಳಿತು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದಾನೆ. ಆನೇಕಲ್ನ ಚಂದಾಪುರ ಭಾಗದ ಅನಂತ್ ರಾಜ್ ಎಂಬ ಯುವಕ ಕಂಬದಿಂದ ಕೆಳಗಿಳಿಯದೆ ಪೊಲೀಸರೊಂದಿಗೆ ಕಿರಿಕ್ ನೀಡಿದ್ದಾನೆ.
ಯುವಕನ ಮನವೊಲಿಸಲು ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ತೀವ್ರ ಕಸರತ್ತು ನಡೆಸಿದ್ದರಿಂದ ಸುಮಾರು 6 ಗಂಟೆಗಳ ಬಳಿಕ ಆತ ಕೆಳಗಿಳಿದಿದ್ದಾನೆ. ಆವಲಹಳ್ಳಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಲು ಠಾಣೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ | ಬೃಹತ್ ಆಪರೇಷನ್ಗೂ ಸಿಗದ ಬೆಳಗಾವಿ ಚಿರತೆ, ಹಾಗಿದ್ದರೆ ಗಾಲ್ಫ್ ಮೈದಾನ ಪ್ರದೇಶ ಬಿಟ್ಟು ಹೋಗಿದ್ಯಾ?