Site icon Vistara News

ಅಪಘಾತದಿಂದ ಮೃತಪಟ್ಟ ಯುವಕ, ಅಂಗದಾನ ಮಾಡಿದ ಕುಟುಂಬ

organ donation

ಬೆಂಗಳೂರು: ನೈಸ್‌ ರಸ್ತೆಯಲ್ಲಿ ಅಪಘಾತದಿಂದ ಮೃತಪಟ್ಟ ಯುವಕನ ಅಂಗಾಂಗಗಳನ್ನು ದಾನ ಮಾಡಿ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.

ದೀಪಕ್(26) ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಕಂಡ ಯುವಕ. ಸೆ.25ರಂದು ನೈಸ್ ರಸ್ತೆಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ದೀಪಕ್‌ನ ಮೆದುಳು ನಿಷ್ಕ್ರಿಯಗೊಂಡು ಸಾವಿಗೀಡಾಗಿದ್ದ. ನೈಸ್‌ ರಸ್ತೆಯಲ್ಲಿ ನಿಂತಿದ್ದ ಕ್ಯಾಂಟರ್‌ಗೆ ಹಿಂಬದಿಯಿಂದ ಹೋದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದ ದೀಪಕ್‌ ಮೆದುಳಿಗೆ ಪೆಟ್ಟಾಗಿ ನಿಷ್ಕ್ರಿಯಗೊಂಡಿತ್ತು. ಕುಟುಂಬಸ್ಥರು ಮೃತನ ಕಿಡ್ನಿ, ಕಣ್ಣು, ಚರ್ಮ ಸೇರಿದಂತೆ ಅಂಗಾಂಗ ದಾನ ಮಾಡಿದ್ದಾರೆ. ಆರ್.ಆರ್. ನಗರದ ಎಸ್‌ಎಸ್ ಸ್ಪರ್ಶ್ ಆಸ್ಪತ್ರೆಯಲ್ಲಿ ಅಂಗದಾನದ ಪ್ರಕ್ರಿಯೆ ನಡೆದಿದೆ. ಮೃತರ ಅಂಗಗಳು ಆರು ಮಂದಿಯ ಬಾಳಿಗೆ ಹೊಸ ಬೆಳಕು ನೀಡಲಿವೆ.

ಇದನ್ನೂ ಓದಿ | NIA Raid | ದೇಶಾದ್ಯಂತ ಎನ್‌ಐಎ ದಾಳಿಗೆ ಕಾರಣವಾಗಿದ್ದು ಪಿಎಫ್‌ಐ ಸದಸ್ಯರ ಕರಾಟೆ ಕ್ಲಾಸ್!

Exit mobile version