Site icon Vistara News

Ismart Jodi | ಕಿರುತೆರೆಗೆ ಬರಲು ಸಜ್ಜಾಗಿದೆ ʻಇಸ್ಮಾರ್ಟ್‌ ಜೋಡಿʼ: ಸ್ಪರ್ಧಿಗಳು ಯಾರು?

Ismart Jodi

ಬೆಂಗಳೂರು: ಗೋಲ್ಡನ್‌ ಸ್ಟಾರ್‌ ಗಣೇಶ್ ನಿರೂಪಣೆ ಮಾಡುತ್ತಿರುವ ʻಇಸ್ಮಾರ್ಟ್‌ ಜೋಡಿʼ(Ismart Jodi) ಶೋ ಬಿಡುಗಡೆಗೆ ಸಜ್ಜಾಗಿದೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಜು.16ರಿಂದ 10.30ರ ತನಕʼಇಸ್ಮಾರ್ಟ್‌ ಜೋಡಿʼ ಪ್ರಸಾರವಾಗಲಿದೆ.

10 ಜೋಡಿಗಳು ಈ ಶೋನಲ್ಲಿ ಇರಲಿದ್ದು, ಒಟ್ಟು 26 ಕಂತುಗಳಿವೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಇದು ಪ್ರಸಾರವಾಗಲಿದೆ. ಈಗಾಗಲೇ 2 ಕಂತುಗಳ ಚಿತ್ರೀಕರಣ ನಡೆದಿದೆ. ಈಗ ಇನ್ನೆರಡು ಕಂತುಗಳ ಚಿತ್ರೀಕರಣ ಆಗುತ್ತಿದೆ. ಈ ಶೋನಲ್ಲಿ ತೀರ್ಪುಗಾರರು ಇರುವುದಿಲ್ಲ. ಸ್ಪರ್ಧಿಗಳಿಗೆ ಹಲವು ಟಾಸ್ಕ್‌ಗಳು ಇರುತ್ತವೆ. ಮೊದಲ ಐದು ಕಂತುಗಳಲ್ಲಿ ಯಾವುದೇ ಎಲಿಮಿನೇಷನ್‌ ಇರುವುದಿಲ್ಲ. ಗೆದ್ದವರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.

ಇದನ್ನೂ ಓದಿ | Ismart ಜೋಡಿ | ಶೋ ಮೂಲಕ ರಂಜಿಸಲು ಬರುತ್ತಿದ್ದಾರೆ ಗೋಲ್ಡನ್‌ ಸ್ಟಾರ್‌ ಗಣೇಶ್‌

ಭಾಗವಹಿಸುವ ಸ್ಪರ್ಧಿಗಳು

  1. ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್
  2. ಸುಮನ್ ನಗರ್ಕರ್ ಮತ್ತು ಗುರುದೇವ್ ನಾಗರಾಜ
  3. ವಿನಯ್ ಗೌಡ ಮತ್ತು ಅಕ್ಷತಾ ಗೌಡ
  4. ಪ್ರತಿಕ್ ಪ್ರೊ ಮತ್ತು ಮೌಲ್ಯಶ್ರೀ ಎಂ
  5. ದಿಶಾ ಮದನ್ ಮತ್ತು ಶಶಾಂಕ್ ವಾಸುಕಿ ಗೋಪಾಲ್
  6. ಶ್ರೀರಾಮ ಸುಳ್ಯ ಮತ್ತು ಪುನೀತಾ ಆಚಾರ್ಯ
  7. ರಘು ವೈನ್ ಸ್ಟೋರ್ ಮತ್ತು ವಿದ್ಯಾಶ್ರೀ
  8. ಇಂಪನಾ ಜಯರಾಜ್ ಮತ್ತು ಅಜಿತ್ ಜಯರಾಜ್
  9. ಸಪ್ನ ದೀಕ್ಷಿತ್ ಮತ್ತು ಅಶ್ವಿನ್ ದೀಕ್ಷಿತ್
  10. ರಿಚರ್ಡ್ ಲೂಯಿಸ್ ಮತ್ತು ಹ್ಯಾರಿಯೆಟ್ ಲೂಯಿಸ್

ಇದನ್ನೂ ಓದಿ | Golden Star | ಜನುಮದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದೇಕೆ ಗಣೇಶ್‌?

Exit mobile version