ಬೆಂಗಳೂರು: ಈ ಹಿಂದೆ 13 ಸಾವಿರ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿ ರಾನಿ (Ronny) ಚಿತ್ರದ ಟೈಟಲ್ ಬಿಡುಗಡೆ ಮಾಡಿ ಗಮನ ಸೆಳೆದಿದ್ದ ಕನ್ನಡತಿ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ಅವರು, ಇದೀಗ ಮತ್ತೊಂದು ಸಾಹಸ ಮಾಡಿದ್ದಾರೆ. ಬರೋಬ್ಬರಿ 8 ಸಾವಿರ ಅಡಿ ಎತ್ತರದಲ್ಲಿ ಸೋಲೋ ಪ್ಯಾರಾ ಗ್ಲೈಡಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಹಿಮಾಚಲ ಪ್ರದೇಶಕ್ಕೆ ಹೋಗಿ 10 ದಿನ ಟ್ರೈನಿಂಗ್ ಪಡೆದು 8 ಸಾವಿರ ಅಡಿ ಎತ್ತರದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡುವ ಮೂಲಕ ನಟ ಕಿರಣ್ ರಾಜ್ ಅವರು, ಕನ್ನಡ ಚಿತ್ರರಂಗದಲ್ಲಿ ಸೋಲೋ ಪ್ಯಾರಾಗ್ಲೈಡಿಂಗ್ ಮಾಡಿದ ಮೊದಲ ನಟ ಎಂಬ ದಾಖಲೆ ಬರೆದಿದ್ದಾರೆ.
ದುಬೈನಲ್ಲಿ ಸ್ಕೈ ಡೈವ್ ಮೂಲಕ ರಾನಿ ಟೈಟಲ್ ರಿಲೀಸ್ ಮಾಡಿದ್ದ ನಟ
ನಟ ಕಿರಣ್ ರಾಜ್ ಅವರು ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿರುವ ರಾನಿ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಫೆಬ್ರವರಿಯಲ್ಲಿ ದುಬೈನಲ್ಲಿ 13 ಸಾವಿರ ಅಡಿ ಮೇಲಿಂದ ಸ್ಕೈ ಡೈವ್ (Sky Dive) ಮಾಡಿ ನೂತನ ಚಿತ್ರ ರಾನಿ ಶೀರ್ಷಿಕೆ ಅನಾವರಣ ಮಾಡಿದ್ದರು.
ʼಬಡ್ಡೀಸ್ʼ ನಂತರ ಗುರುತೇಜ ಶೆಟ್ಟಿ ಹಾಗೂ ಕಿರಣ್‌ರಾಜ್ ಕಾಂಬಿನೇಶನ್‌ನ ಎರಡನೇ ಸಿನಿಮಾ ಇದಾಗಿದೆ. ಸಾಕಷ್ಟು ರೀಲ್ಸ್ ಮತ್ತು ಕೆಲವೊಂದು ಗಾಸಿಪ್ ಮೂಲಕ ಮನೆಮಾತಾದ ನಟ ಕಿರಣ್ ರಾಜ್ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ʻರಾನಿʼ (Ronny Movie) ಸಿನಿಮಾ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಗುರುತೇಜ್ ಶೆಟ್ಟಿ (Director Gurutej Shetty) ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಟಾಕ್ ನಡೆಯುತ್ತಿದೆ. ರಾನಿ ಸಿನಿಮಾವನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಇದನ್ನೂ ಓದಿ | Garuda Purana Movie : ವಿಜಯದಶಮಿಗೆ ಬಂತು ಗರುಡ ಪುರಾಣ ಟ್ರೇಲರ್; ಇದು ಸಸ್ಪೆನ್ಸ್ ಥ್ರಿಲ್ಲರ್
ಈ ಚಿತ್ರದಲ್ಲಿ ಕಿರಣ್ ರಾಜ್ ಜತೆಗೆ ರವಿಶಂಕರ್, ಮೈಕೋ ನಾಗರಾಜ್, ನಾಗತಿಹಳ್ಳಿ ಚಂದ್ರಶೇಖರ್, ಬಿ ಸುರೇಶ್, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಪ್ರಥ್ವೀರಾಜ್, ಯಶ್ ಶೆಟ್ಟಿ, ಉಮೇಶ್, ಸುಜಯ್ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್ ಮಲಾನಿ, ಅನಿಲ್, ಧರ್ಮೇಂದ್ರ ಅರಸ್, ಮನಮೋಹನ ರೈ ಮೊದಲಾದವರು ಇದ್ದಾರೆ. ಪ್ರಮೋದ್ ಮರವಂತೆ ಈ ಚಿತ್ರದ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ಮಣಿಕಾಂತ್ ಕದ್ರಿ ಟ್ಯೂನ್ ಹಾಕಿದ್ದಾರೆ.