Site icon Vistara News

ಪಂಡಿತರ ಹತ್ಯೆಯೂ ಗೋಸಾಗಾಟ ಗಾರರ ಮೇಲಿನ ಹಲ್ಲೆಯೂ ಒಂದೇ: ಸಾಯಿ ಪಲ್ಲವಿ ಹೇಳಿಕೆ ಸಮರ್ಥಿಸಿದ ರಮ್ಯಾ  

ramya

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ರಮ್ಯಾ ಖಡಕ್‌ ಅಭಿಪ್ರಾಯಗಳಿಗೆ ಹೆಸರಾದರವರು. ಇದೀಗ ಅವರು ಬಹುಭಾಷಾ ನಟಿ ಸಾಯಿಪಲ್ಲವಿ ಅವರು ಇತ್ತೀಚೆಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿದ್ದಾರೆ. ಅವರು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.

ಸಾಯಿಪಲ್ಲವಿ ಹೇಳಿದ್ದೇನು?

ನಟಿ ಸಾಯಿಪಲ್ಲವಿ ಇತ್ತೀಚಿಗೆ ತಮ್ಮ ಚಿತ್ರವಾದ ವಿರಾಟ ಪರ್ವಂ ಸಿನಿಮಾದ ಪ್ರಚಾರದ ವೇಳೆ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ʻʻಕೆಲವು ದಿನಗಳ ಹಿಂದೆ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಬಿಡುಗಡೆಯಾಗಿತ್ತು. ಅದರಲ್ಲಿ ಆ ಕಾಲದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಹತ್ಯೆ ಮಾಡಲಾಯಿತು ಎಂದು ತೋರಿಸಲಾಗಿದೆ. ಅದನ್ನು ನೀವು ಧಾರ್ಮಿಕ ಸಂಘರ್ಷ ಎಂದು ಹೇಳುವುದಾದರೆ ಇತ್ತೀಚೆಗೆ ಗೋವು ಸಾಗಿಸುತ್ತಿದ್ದ ಒಬ್ಬ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಜೈ ಶ್ರೀರಾಮ್ ಎಂದು ಒತ್ತಾಯಪೂರ್ವಕವಾಗಿ ಹೇಳಿಸಲಾಯಿತು. ಆಗ ನಡೆದಿದ್ದಕ್ಕೂ, ಈಗ ನಡೆದಿದ್ದಕ್ಕೂ ನನಗೇನೂ ವ್ಯತ್ಯಾಸ ಕಾಣಿಸುವುದಿಲ್ಲ.ʼʼ ಎಂದು ಹೇಳಿದ್ದರು.

ರಮ್ಯಾ ಸಮರ್ಥನೆ ಏನು?

ಈ ಕುರಿತು ಟ್ವೀಟ್ ಮಾಡಿರುವ ನಟಿ ರಮ್ಯಾ, ʻʻನಟಿ ಸಾಯಿ ಪಲ್ಲವಿ ಹೇಳಿರುವುದು ಸರಿಯಾಗಿದೆ. ಆದರೆ ಯಾಕೆ ಈ ವಿಚಾರವನ್ನು ವಿವಾದ ಮತ್ತು ಟ್ರೋಲ್​ ಮಾಡಲಾಗುತ್ತಿದೆ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳುವ ಅರ್ಹತೆ ಇದೆ. ಆ ಅರ್ಹತೆ ಮಹಿಳೆಯರಿಗೆ ಇಲ್ಲವೇ? ಯಾವುದೇ ಸುಸಂಸ್ಕೃತ ವ್ಯಕ್ತಿ ಹೇಳುವುದು ದಯೆ ಮತ್ತು ದಮನಕ್ಕೊಳಗಾದವರನ್ನು ರಕ್ಷಿಸು ಎಂದು ಅದೇ ಮಾತನ್ನು ಸಾಯಿ ಪಲ್ಲವಿ ಹೇಳಿದ್ದಾರೆ. ಆದರೆ. ಇದು ಕೆಲವರಲ್ಲಿ ಭಿನ್ನಾಭಿಪ್ರಾಯ ಮೂಡಿಸಿದೆʼʼ ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ʻʻಪ್ರಸ್ತುತ ದಿನದಲ್ಲಿ ಯಾರಾದರೊಬ್ಬರು ಒಳ್ಳೆಯ ಮನುಷ್ಯರಾಗಿರಿ ಎಂದು ಹೇಳಿದರೆ ಅವರನ್ನು ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಿ ಗೋಲಿ ಮಾರೋ ಎಂದು ಘೋಷಣೆ ಕೂಗಲಾಗುತ್ತದೆ. ಅದೇ ದ್ವೇಷವನ್ನು ಹರಡುವ ವ್ಯಕ್ತಿಗಳಿಗೆ ಮಾತ್ರ ಹೀರೊಗಳೆಂಬ ಹಣೆಪಟ್ಟಿ ಕಟ್ಟಿ ಮೆರೆಸಲಾಗುತ್ತದೆ. ನಾವು ಯಾವ ರೀತಿಯ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ| ಕಾಶ್ಮೀರಿ ಪಂಡಿತರ ಕಗ್ಗೊಲೆ ಮತ್ತು ದನಸಾಗಣೆಗಾರರ ಮೇಲಿನ ಹಲ್ಲೆ ಹೋಲಿಸಿದ ನಟಿ ಸಾಯಿ ಪಲ್ಲವಿ

Exit mobile version