ಬೆಂಗಳೂರು: ವಿಧಾನ ಪರಿಷತ್ ಚುನಾವಣೆ 2023-24ಕ್ಕೆ (MLC Election) ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಖ್ಯಾತ ವಕೀಲ ಎಚ್. ಸುನೀಲ್ ಕುಮಾರ್ ಅವರು ಸ್ಪರ್ಧಿಸುತ್ತಿದ್ದಾರೆ. ವಕೀಲಿ ವೃತ್ತಿಯಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಾ ಹಲವು ಶಿಕ್ಷಕರು, ಬಡಜನರ ಸಮಸ್ಯೆಗಳಿಗೆ ಸ್ಪಂದಿಸಿ, ನ್ಯಾಯಕ್ಕಾಗಿ ಹೋರಾಡುತ್ತಿದ್ದ ಎಚ್. ಸುನೀಲ್ ಕುಮಾರ್ ಅವರು ಇದೀಗ ಜನಸೇವೆಗಾಗಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ.
ಎಚ್. ಸುನೀಲ್ ಕುಮಾರ್ ಅವರು ಮೂಲತಃ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನವರು. ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಮುಗಿಸಿ, ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ಅವರು, MA, MPHIL, LLB, HRM, CPA ಪದವೀಧರರಾಗಿದ್ದಾರೆ.
ಮಲ್ಲೇಶ್ವರ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಲೀಸಾ ಎಂಬ ಹುಡುಗಿಗೆ ಸರ್ಕಾರದಿಂದ ನ್ಯಾಯ ಪರಿಹಾರ ಒದಗಿಸಿಕೊಟ್ಟಿದ್ದ ಇವರು, ಕೋರ್ಟ್‌ನಲ್ಲಿ ಹಲವರ ಪರವಾಗಿ ಉಚಿತವಾಗಿ ವಾದ ಮಂಡಿಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ.
ಇದನ್ನೂ ಓದಿ | Lalbagh Flower Show: ಫಲಪುಷ್ಪ ಪ್ರದರ್ಶನದಲ್ಲಿ ಬಸವ ತತ್ವ; ಎಂ.ಬಿ. ಪಾಟೀಲ್ ಸಂತಸ
ವಕೀಲರ ಹುದ್ದೆಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಸುನೀಲ್ ಕುಮಾರ್ ಅವರು ಬೆಂಗಳೂರು ಶಿಕ್ಷಕರ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುನೀಲ್ ಕುಮಾರ್ ಅವರು, ಶಿಕ್ಷಕರ ಸಮುದಾಯದಲ್ಲಿ ಹಲವು ವರ್ಷಗಳಿಂದ ಮುಕ್ತಿ ಕಾಣದಿರುವ ಸಮಸ್ಯೆಗಳಿವೆ. ಇವುಗಳನ್ನು ಅರಿತು ನನ್ನ ಕನಸು, ಕಲ್ಪನೆ, ಬುದ್ಧಿ ಭಾವನೆಗಳಿಗಾಗಿ, ನಿಮ್ಮ ಆತ್ಮಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಮುಂಬರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನಿಮ್ಮೆಲ್ಲರ ಬೆಂಬಲವಿರಲಿ ಎಂದು ಶಿಕ್ಷಕರನ್ನು ಕೋರಿದ್ದಾರೆ.