Site icon Vistara News

ಇನ್ನೊಮ್ಮೆ ಕಿಚ್ಚ ಸುದೀಪ್‌ V/S ಅಜಯ್‌ ದೇವಗನ್‌: ಜುಲೈನಲ್ಲಿ ʼವಿಕ್ರಾಂತ್‌ ರೋಣಾʼ, ʼಥ್ಯಾಂಕ್‌ ಗಾಡ್‌ʼ ಸ್ಟಾರ್‌ ವಾರ್..!

ಬೆಂಗಳೂರು : ತಿಂಗಳ ಹಿಂದೆಯಷ್ಟೇ ಭಾರತದ ರಾಷ್ಟ್ರ ಭಾಷೆಯ ಬಗ್ಗೆ ಸೂಪರ್‌ ಸ್ಟಾರ್‌ ಕಿಚ್ಚ ಸುದೀಪ್‌ ಅವರ ಕಮೆಂಟ್‌ಗೆ ಬಾಲಿವುಡ್‌ ನಟ ಅಜಯ್‌ ದೇವಗನ್ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಸುದೀಪ್‌ ಹೇಳಿದ ಮಾತಿಗೆ ರಿಪ್ಲೈ ಮಾಡಿದ್ದ ದೇವಗನ್‌, ಹಾಗಾದರೆ ಹಿಂದಿ ಭಾಷೆಯಲ್ಲಿ ಏಕೆ ಡಬ್‌ ಮಾಡುತ್ತೀರಿ ಎಂದು ಹಿಂದಿಯಲ್ಲೇ ಸಂಪೂರ್ಣ ಟ್ವೀಟ್‌ ಬರೆದು ಪೋಸ್ಟ್‌ ಮಾಡಿದ್ದರು. ಇದಕ್ಕೆ ಸುದೀಪ್‌ ವಿನಯದಿಂದಲೇ ಖಡಕ್‌ ಉತ್ತರ ನೀಡಿದ್ದರು. ಈ ವಿಚಾರ ವ್ಯಾಪಕ ಚರ್ಚೆಗೀಡಾಗಿ ನಂತರ ವಿಚಾರ ತಣ್ಣಗೆ ಆಗಿದೆ. ಇಬ್ಬರೂ ನಟರು ಮತ್ತೊಮ್ಮೆ ಗುದ್ದಾಡಲು ಸಜ್ಜಾಗಿದ್ದಾರೆ. ಆದರೆ ಇದು ಭಾಷೆ, ಗುಟ್ಕಾ ವಿಚಾರಕ್ಕಲ್ಲ, ಸಿನಿಮಾ ಪರದೆ ಮೂಲಕ ಈ ಪೈಪೋಟಿ ನಡೆಯಲಿದೆ.

ಇದನ್ನೂ ಓದಿ : ಹಿಂದಿ ಬಾರದವರು ದೇಶದಿಂದ ಹೊರ ಹೋಗಿ ಎಂದ ಉತ್ತರ ಪ್ರದೇಶ ಸಚಿ

ತಿಂಗಳ ಹಿಂದೆ ಅಷ್ಟೇ ಸುದೀಪ್‌ ನಟನೆಯ ವಿಕ್ರಾಂತ್‌ ರೋಣಾ ಸೀನಿಮಾದ ಡೇಟ್‌ ಬಹಿರಂಗಗೊಂಡಿತ್ತು. ಜುಲೈ 28 ರಂದು ಈ ಸಿನಿಮಾವನ್ನು 3 ಡಿಯಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ವಿಕ್ರಾಂತ್‌ ರೋಣಾ 10 ಭಾಷೆಗಳಲ್ಲಿ ರಿಲೀಸ್‌ ಆಗ್ತಾ ಇದೆ. ಅದೇ ತಿಂಗಳು, ಅದೇ ವಾರದ , ಒಂದೇ ದಿನದ ಅಂತರದಲ್ಲಿ ಅಜಯ್‌ ದೆವಗನ್‌ ಅವರ ʼಥ್ಯಾಂಕ್‌ ಗಾಡ್‌ ʼ (Thank God) ಸಿನಿಮಾ ಕೂಡ ರಿಲೀಸ್‌ ಆಗ್ತಾ ಇದೆ. ಈ ಹಿಂದೆ ನಂವೆಬರ್‌ನಲ್ಲಿ ಅಜಯ್‌ ದೇವಗನ್‌ ʼಸ್ಲೈಸ್ ಆಫ್‌ ಲೈಫ್‌ʼ (‌Slice Of Life) ಹಾಗೂ ʼಥ್ಯಾಂಕ್‌ ಗಾಡ್‌ʼ (Thank God) ಚಿತ್ರವನ್ನು ರಿಲೀಸ್‌ ಮಾಡಬೇಕೆಂದು ಇರುವುದಾಗಿ ಹೇಳಿದ್ದರು. ಇದೀಗ ತಮ್ಮ ಇನ್ಸ್ಟಾಗ್ರಾಂ ಮೂಲಕ ಥ್ಯಾಂಕ್‌ ಗಾಡ್‌ ಸಿನಿಮಾ ರಿಲೀಸ್‌ ಪೋಸ್ಟರ್‌ ಅನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Explainer: ಹಿಂದಿ ರಾಷ್ಟ್ರಭಾಷೆ ಹೌದೋ, ಅಲ್ಲವೋ?

ಇಬ್ಬರ ಸಿನಿಮಾ ಒಂದೇ ತಿಂಗಳು ರಿಲೀಸ್‌ ಆಗುತ್ತಿರುವ ವಿಷಯ ಕೇಳಿ ಅಭಿಮಾನಿಗಳ ಮಧ್ಯೆ ಸಿಕ್ಕಾಪಟ್ಟೆ ಡಿಸ್‌ಕಷನ್‌ ನಡೆಯುತ್ತಾ ಇದೆ. ವಿಕ್ರಾಂತ್‌ ರೋಣಾ ಥ್ರಿಲರ್‌ ಮೂವಿ ಆಗಿದ್ದು, ಥ್ಯಾಂಕ್‌ ಗಾಡ್‌ ಸಿನಿಮಾ ಫುಲ್‌ ಕಾಮಿಡಿ ಎಂಟರ್‌ಟೇನರ್‌ ಮೂವಿ. ಆದರೆ ಇನ್ನೂ ಕೂತುಹಲಕಾರಿ ವಿಷಯ ಎನಪ್ಪ ಅಂದ್ರೆ ಅಜಯ್‌ ದೇವಗನ್‌ ಅವರ ಥ್ಯಾಂಕ್‌ ಗಾಡ್‌ ಸಿನಿಮಾ ಕೇವಲ ಹಿಂದಿಯಲ್ಲಿ ಮಾತ್ರ ರಿಲೀಸ್‌ ಆಗ್ತಾ ಇದೆ. ಸಿದ್ಧಾರ್ಥ್‌ ಮಲ್ಹೋತ್ರಾ ಹಾಗೂ ರಾಕುಲ್‌ ಪ್ರೀತ್‌ ಸಿಂಗ್‌ ಅಭಿನಯಿಸುತ್ತಿರುವುದು ಇನ್ನೂ ವಿಶೇಷ.

ಒಟ್ಟಿನಲ್ಲಿ ಇಬ್ಬರ ಸಿನಿಮಾ ಒಂದೇ ತಿಂಗಳಲ್ಲಿ ರಿಲೀಸ್‌ ಅಗ್ತಾ ಇರೋದು ಅಭಿಮಾನಿಗಳಿಗೆ ಖುಷಿ ನೀಡಿದ್ದು, ಎರಡೂ ಸಿನಿಮಾಗಳು ಹೇಗೆ ರಂಜಿಸುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ | ವಿಮಲ್‌ಗಾಗಿ ಫ್ಯಾನ್ಸ್‌ ಕ್ಷಮೆ ಯಾಚಿಸಿದ ಅಕ್ಷಯ್‌ ಕುಮಾರ್

Exit mobile version