ಬೆಂಗಳೂರು: ನಗರದ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ(Amrit Mahotsav) ಹಿನ್ನೆಲೆಯಲ್ಲಿ ಶನಿವಾರ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ದೇಶಕ ಐಪಿಎಸ್ ಅಧಿಕಾರಿ ರಾಧಿಕಾ.ಜಿ, ಭ್ರಷ್ಟಾಚಾರ ನಿಗ್ರಹ ದಳದ(KSPS) ಉಪ ಪೊಲೀಸ್ ಅಧೀಕ್ಷಕರಾದ ನಜ್ಮಾ ಫಾರೂಕಿ, ಪ್ರಾಂಶುಪಾಲರಾದ ಸಿಸ್ಟರ್ ಲಲಿತಾ ಥಾಮಸ್ ಹಾಗೂ ಮುಖ್ಯ ಅತಿಥಿಗಳು ಧ್ವಜಾರೋಹಣ ಮಾಡಿದರು.
ಮುಖ್ಯ ಅತಿಥಿ ಐಪಿಎಸ್ ಅಧಿಕಾರಿ ರಾಧಿಕಾ. ಜಿ ಮಾತನಾಡಿ, ಸಮಯ ನಿರ್ವಹಣೆ, ಕಠಿಣ ಪರಿಶ್ರಮ ಮತ್ತು ಸ್ಮಾರ್ಟ್‌ವರ್ಕ್, ಒತ್ತಡ ನಿರ್ವಹಣೆ ಇತ್ಯಾದಿಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮೆರುಗು ನೀಡಿತು.
ಇದನ್ನೂ ಓದಿ | Amrit Mahotsav | ಟೆಲಿಗ್ರಾಫ್ ತಂತಿಗಳನ್ನು ತುಂಡರಿಸಿ ಬ್ರಿಟಿಷರ ನಿದ್ದೆಗೆಡಿಸಿದ್ದ ಚೆಂಗಲ್‌ಪೇಟೆ ಕ್ರಾಂತಿಕಾರಿಗಳು