Site icon Vistara News

Art Exhibition | ಹವಾಮಾನ ಬದಲಾವಣೆ ಕುರಿತ ಕಲಾ ಪ್ರದರ್ಶನ

painting

ಬೆಂಗಳೂರು: ಕಲಾವಿದೆ, ಲೇಖಕಿ ಮತ್ತು ಯೋಗ ಶಿಕ್ಷಕಿಯಾಗಿರುವ ನಮಿತಾ ಕುಲಕರ್ಣಿ ಅವರು ಜಾಗತಿಕ ಹವಾಮಾನ ವೈಪರೀತ್ಯದ ಬಗ್ಗೆ ಜಾಗೃತಿ ಮೂಡಿಸಲು ಕಲಾಕೃತಿಗಳ ಪ್ರದರ್ಶನವನ್ನು (Art Exhibition) ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದಾರೆ.

ನಗರದ ಯಶವಂತಪುರದ ಓರಿಯನ್‌ ಮಾಲ್‌ನಲ್ಲಿ, ಬೆಂಗಳೂರು ಕ್ರಿಯೇಟಿವ್‌ ಸರ್ಕಲ್ಸ್‌ ಆಶ್ರಯದಲ್ಲಿ ಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್‌ 15ರ ತನಕ ಈ ಕಲಾ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 7 ತನಕ ನಡೆಯುತ್ತದೆ.

ವಸಾಹತುಶಾಹಿ ವ್ಯವಸ್ಥೆ ಮತ್ತು ಜಾಗತಿಕ ಹವಾಮಾನ ಬದಲಾವಣೆಯ ಬಿಕ್ಕಟ್ಟಿಗೆ ಇರುವ ನಂಟನ್ನು ಕಲಾಕೃತಿಗಳಲ್ಲಿ ನಮಿತಾ ಕುಲಕರ್ಣಿ ಅವರು ಬಿಂಬಿಸಿದ್ದಾರೆ. ಎರಡೂ ಚಾರಿತ್ರಿಕ ಸಂಬಂಧವನ್ನು ಹೊಂದಿವೆ ಎನ್ನುತ್ತಾರೆ ಅವರು.

Exit mobile version