Site icon Vistara News

ಆತ್ಮಹತ್ಯೆಗೆ ಯತ್ನಿಸಿದ ಯುವಕನ ಜೀವ ಉಳಿಸಿದ 112

suicide attemt JP Nagar

ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನ ಪ್ರಾಣ 112 ಸಹಾಯವಾಣಿಯಿಂದ ಉಳಿದಿದೆ. 112 ಸಂಖ್ಯೆಗೆ ಕರೆ ಸ್ವೀಕರಿಸಿ ಯುವಕನ ಪ್ರಾಣವನ್ನು ಉಳಿಸುವಲ್ಲಿ ಜೆ.ಪಿ‌. ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಖಿನ್ನತೆಯಿಂದ ಬಳಲುತ್ತಿದ್ದ 24 ವರ್ಷದ ಯುವಕ ಮಂಗಳವಾರ ತನ್ನ ಪಿ.ಜಿ.ಯಲ್ಲಿ ಯಾರೂ ಇರದಿದ್ದಾಗ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಸ್ನೇಹಿತನಿಗೆ ಡೆತ್ ನೋಟ್ ರವಾನಿಸಿದ್ದ. ಯುವಕ ಆತ್ಮಹತ್ಯೆಗೆ ಯತ್ನಿಸಿದ ಸ್ಥಳದಿಂದ ದೂರದಲ್ಲಿದ್ದ ಸ್ನೇಹಿತ ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

ಸ್ಥಳದ ಮಾಹಿತಿ ಪಡೆದ ತಕ್ಷಣ ಜೆ.ಪಿ.ನಗರ ಠಾಣೆ ಹೊಯ್ಸಳ ಪೊಲೀಸರು ಪಿ.ಜಿ.ಗೆ ತೆರಳಿದ್ದಾರೆ. ಎಎಸ್ಐ ಚಂದ್ರಶೇಖರ್ ಹಾಗೂ ಹೆಡ್ ಕಾನ್​ಸ್ಟೆಬಲ್ ​ಬಿ.ರಮೇಶ್ ಪಿ.ಜಿ.ಯೊಳಗೆ ಪ್ರವಶಿಸಿ, ತೀವ್ರ ರಕ್ತಸ್ರಾವದಿಂದ ಅಸ್ವಸ್ಥನಾಗಿದ್ದ ಯುವಕನನ್ನು ರಕ್ಷಿಸಿದ್ದಾರೆ. ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವಕನ ಸ್ನೇಹಿತನ ಸಮಯಪ್ರಜ್ಞೆ ಹಾಗೂ ಪೊಲೀಸರ ಕರ್ತವ್ಯಪ್ರಜ್ಞೆಯಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ| ದಾವಣಗೆರೆಯಲ್ಲಿ ತಾಲೂಕು ದಂಡಾಧಿಕಾರಿ ಎದುರೇ ಪಂಚಾಯಿತಿ ಸದಸ್ಯ ಆತ್ಮಹತ್ಯೆ ಯತ್ನ

Exit mobile version