Site icon Vistara News

Book Release: ಬನಶಂಕರಿಯಲ್ಲಿ ಡಿ. 9ರಂದು ಲೇಖಕ ಬಿ.ಎಸ್‌. ವೆಂಕಟೇಶ ರಾವ್ ರಚನೆಯ ʼಸಿನಿ ಮಾಯೆʼ ಕೃತಿ ಲೋಕಾರ್ಪಣೆ

Cini Maye Book Release

ಬೆಂಗಳೂರು: ಸ್ನೇಹ ಬುಕ್ ಹೌಸ್ ಪ್ರಕಟಣೆಯ, ಲೇಖಕ ಬಿ.ಎಸ್‌. ವೆಂಕಟೇಶ ರಾವ್ ಬರೆದಿರುವ ಚೊಚ್ಚಲ ಕೃತಿ ʼಸಿನಿ ಮಾಯೆ-ತಣಿಯದ ಕುತೂಹಲʼ (Cini Maye) ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಡಿ. 9ರಂದು ಶನಿವಾರ ಸಂಜೆ 5.30ಕ್ಕೆ ನಗರದ ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯ ಸುಚಿತ್ರ ನಾಣಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ನೇಹ ಬುಕ್ ಹೌಸ್ ಪ್ರಕಾಶಕರಾದ ಪರಶಿವಪ್ಪ ಕೆ.ಬಿ. ತಿಳಿಸಿದ್ದಾರೆ.

ಹಿರಿಯ ಪತ್ರಕರ್ತರು ಹಾಗೂ ಲೇಖಕರಾದ ಗಣೇಶ ಕಾಸರಗೋಡು ಅವರು ಪುಸ್ತಕ ಲೋಕಾರ್ಪಣೆ ಮಾಡಲಿದ್ದು, ಲೇಖಕ ಹಾಗೂ ಯುವ ಸಾಹಿತಿ ಹೃದಯ ಶಿವ ಅವರು ಪುಸ್ತಕ ಪರಿಚಯ ಮಾಡಲಿದ್ದಾರೆ. ನಾಡಿನ ಶ್ರೇಷ್ಠ ಚಿಂತಕ ಹಾಗೂ ಜನಪ್ರಿಯ ಮೆಗಾ ಧಾರಾವಾಹಿಗಳ ನಿರ್ದೇಶಕ ಬ.ಲ.ಸುರೇಶ್ ಅವರಿಗೆ ಗೌರವ ಸನ್ಮಾನ ಏರ್ಪಡಿಸಲಾಗಿದ್ದು, ಈ ಸಮಾರಂಭದ ಅಧ್ಯಕ್ಷತೆಯನ್ನು ಸಾಕ್ಷ್ಯಚಿತ್ರಗಳ ನಿರ್ಮಾಪಕರಾದ ಬಿ.ಎಸ್.ಮನೋಹರ್ ವಹಿಸಲಿದ್ದಾರೆ. ಕೃತಿಯ ಲೇಖಕರಾದ ಬಿ.ಎಸ್.ವೆಂಕಟೇಶ ರಾವ್ ಮತ್ತು ಪ್ರಕಾಶಕರಾದ ಕೆ.ಬಿ.ಪರಶಿವಪ್ಪ ಉಪಸ್ಥಿತರಿರುತ್ತಾರೆ ಎಂದು ಹೇಳಿದ್ದಾರೆ.

ಹೊಸ ಲೇಖಕರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಲು ಸದಾ ಮುಂಚೂಣಿಯಲ್ಲಿರುವ ಸ್ನೇಹ ಬುಕ್ ಹೌಸ್ ಪ್ರಕಾಶನ ಸಂಸ್ಥೆಯ 495 ಪ್ರಕಟಣೆ ” ಸಿನಿಮಾಯೆ” ಕೃತಿಯಾಗಿದೆ.

ಇದನ್ನೂ ಓದಿ | Yellapur News: ಯಲ್ಲಾಪುರದಲ್ಲಿ ಡಿ. 9, 10 ರಂದು ಜಿಲ್ಲಾ ಮಟ್ಟದ ಸಾಹಿತ್ಯ-ಗಮಕ ಅಧಿವೇಶನ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version