ಬೆಂಗಳೂರು: ವಿದ್ಯಾರ್ಥಿಗಳ ಉನ್ನತೀಕರಣ ದೃಷ್ಟಿಯಿಂದ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ (IIPA) ಸಂಸ್ಥೆಯು ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿವೆ. ವಿಶ್ವ ವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್. ಎಂ ಮತ್ತು IIPA – KRB ಸಂಸ್ಥೆಯ ಅಧ್ಯಕ್ಷರು, ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ. ಟಿ.ಎಂ. ವಿಜಯ ಭಾಸ್ಕರ್ ಅವರು ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
ಈ ಒಡಂಬಡಿಕೆಯ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಮಾಡುವ ಕಾರ್ಯಕ್ರಮಗಳನ್ನು ಜಂಟಿಯಾಗಿ ಹಮ್ಮಿಕೊಳ್ಳಲಾಗುತ್ತದೆ. ಬೆಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಾರ್ವಜನಿಕ ನೀತಿ-ನಿಯಮ, ಕಾನೂನಿನ ಅರಿವು ಮೂಡಿಸುವುದು, ಸರ್ಕಾರದ ಕಾರ್ಯ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಮಾಡಲಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ತರಬೇತಿಯನ್ನು ಈ ಒಡಂಬಡಿಕೆಯ ಭಾಗವಾಗಿ ಮಾಡಲಾಗುವುದು. ಅತಿ ಮುಖ್ಯವಾಗಿ ಸರ್ಕಾರ ಮತ್ತು ವಿಶ್ವವಿದ್ಯಾಲಯದ ನಡುವೆ ಕೊಂಡಿಯಾಗಿ IIPA – KRB ಕೆಲಸ ಮಾಡಲಿದೆ.
ಒಡಂಬಡಿಕೆಯ ಬಗ್ಗೆ ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ಎಸ್.ಎಂ. ಸಂತಸ ವ್ಯಕ್ತಪಡಿಸಿದ್ದು, ಈ ಒಡಂಬಡಿಕೆ ವಿಶ್ವವಿದ್ಯಾಲಯ ಮಟ್ಟಿಗೆ ಸಾಕಷ್ಟು ಮಹತ್ವದಾಯಕವಾಗಿದೆ. ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗಕ್ಕೆ ಸೇರಿದ್ದಾರೆ. ಈ ಒಡಂಬಡಿಕೆ ಮೂಲಕ ವಿದ್ಯಾರ್ಥಿಗಳಿಗೆ ನುರಿತ ತಜ್ಞರಿಂದ ಸೂಕ್ತ ತರಬೇತಿ ಸಿಗಲಿದೆ, ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕುಲಸಚಿವ ಶೇಕ್ ಲತೀಫ್ ಕೆಎಎಸ್, IIPA- KRB ಕಾರ್ಯದರ್ಶಿ ಡಾ.ಜೀವನ್ ಕುಮಾರ್, ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.
ಇದನ್ನೂ ಓದಿ | JEE Mains : 24ರಂದು ಜೆಇಇ ಮೇನ್ಸ್ 2024 ಪ್ರವೇಶ ಪತ್ರ ಬಿಡುಗಡೆ
ಒಡಂಬಡಿಕೆಯಲ್ಲಿನ ಮುಖ್ಯ ಅಂಶಗಳು
1.ಕಾರ್ಯಗಾರ ಹಮ್ಮಿಕೊಳ್ಳುವುದು
2.ಜಂಟಿ ಯೋಜನೆಗಳು
3.ಸರ್ಟಿಫಿಕೇಟ್ ಕೋರ್ಸ್ ನಡೆಸುವುದು
4.ಸ್ಪರ್ಧಾತ್ಮಕ ಪರೀಕ್ಷೆಗಳ ತರಭೇತಿ
5.ಸಹಭಾಗಿತ್ವಡಿ ವಿದ್ಯಾರ್ಥಿಗಳ ಶ್ರೇಯೊಭಿವೃದ್ದಿ
6.ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು