Site icon Vistara News

Basavanagudi Name : ಬಸವನಗುಡಿ ಹೆಸ್ರು ಬದಲಾಗುತ್ತಾ? ಶುರುವಾಯ್ತು ಮರು ನಾಮಕರಣಕ್ಕೆ ವಿರೋಧ

Will basavanagudis name change Opposition to renaming begins

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ (BBMP Ward) ವಾರ್ಡ್‌ಗಳ ಮರು ವಿಂಗಡಣೆ ವಿಚಾರದಲ್ಲಿ ಈಗಾಗಳೇ ಒಂದರ ಹಿಂದೆ ಒಂದು ರಾದ್ಧಾಂತಗಳೇ ಆಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಏರಿಕೆ ಮಾಡಿದ್ದ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಇಳಿಕೆ ಮಾಡಲಾಗಿದೆ. ಆದರೆ ಈಗ ಬಿಬಿಎಂಪಿ ಮಾಡಿರುವ ಯಡವಟ್ಟು (Basavanagudi Name) ಬಸವನಗುಡಿ ವಾರ್ಡ್‌ (basavanagudi residential) ಜನರ ಕೆಂಗಣ್ಣಿಗೆ ಗುರಿಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಅನೇಕ ಬಡಾವಣೆಗಳು ತಮ್ಮ ಹೆಸರುಗಳಿಂದಲೇ ಸಾಕಷ್ಟು ವೈಶಿಷ್ಯತೆಗಳನ್ನು ಹೊಂದಿವೆ. ಈ ಪೈಕಿ 130ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಬಸವನಗುಡಿ ದೇವಸ್ಥಾನ, ಕಡಲೆಕಾಯಿ ಪರಿಷೆ ಸೇರಿದಂತೆ ಐತಿಹಾಸಿಕವಾಗಿ ಮನೆ ಮಾತಾಗಿದೆ. ಇಂತಹ ಬಡಾವಣೆಗೆ ಇದೀಗ ಸರ್ಕಾರ ಕುತ್ತು ತರುವ ಕೆಲಸ ಮಾಡುತ್ತಿದ್ದು, ಅದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Road Accident : ಬೈಕ್‌ಗಳ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ರಾಜ್ಯ ಸರ್ಕಾರ ವಾರ್ಡ್‌ಗಳ ಮರು ವಿಂಗಡಣೆ ವೇಳೆ ಕರಡು ಪಟ್ಟಿಯಲ್ಲಿ ರಾಜಧಾನಿಯ 12 ವಾರ್ಡ್‌ಗಳ ಹೆಸರು ಬದಲಾಯಿಸಲಾಗಿದೆ. ಈ ಪೈಕಿ ಇತಿಹಾಸ ಸುಪ್ರಸಿದ್ಧ ‘ಬಸವನಗುಡಿ’ ವಾರ್ಡ್ ಹೆಸರು ಸಹ ಇದೆ. ಸರ್ಕಾರದ ಹೆಸರು ಬದಲಾವಣೆ ವಿರುದ್ಧ ಬಸವನಗುಡಿ ನಿವಾಸಿಗಳು 10,000ಕ್ಕೂ ಸಹಿ ಸಂಗ್ರಹಿಸಿದ್ದಾರೆ. ಈ ಅಭಿಯಾನ ಮುಂದುವರಿದಿದೆ. ಅಲ್ಲದೆ ಹೆಸರು ಬದಲಾವಣೆ ಮಾಡುವಂತೆ ಕೇಳಿದವರಾದರೂ ಯಾರು ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ.

ವಾರ್ಡ್‌ಗಳಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಆಸಕ್ತಿ ತೋರದ ಪಾಲಿಕೆ, ವಾರ್ಡ್‌ಗಳ ಹೆಸರು ಮರು ನಾಮಕರಣಕ್ಕೆ ಮಾತ್ರ ಅನವಶ್ಯಕ ಆಸಕ್ತಿ ತೋರುತ್ತಿದೆ ಎಂದು ಕಿಡಿಕಾರಿದ್ದಾರೆ. ಬಸವನಗುಡಿ ಬದಲಿಗೆ ದೊಡ್ಡ ಗಣಪತಿ ಎಂದು ಹೆಸರಿಡುವ ಅವಶ್ಯಕತೆ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ಇದೇ ಒಂದು ವಿವಾದವಾಗಿ ಪರಿಣಮಿಸಿದ್ದು, ಸ್ಥಳೀಯರ ಒತ್ತಡಕ್ಕೆ ಪಾಲಿಕೆ ಮಣಿಯುತ್ತಾ? ವಾರ್ಡ್‌ನ ಹೆಸರು ಬದಲಾವಣೆ ನಿರ್ಧಾರ ಕೈಬಿಡುತ್ತಾ ಎಂಬುದೇ ಪ್ರಶ್ನೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version