ಬೆಂಗಳೂರು: ಭಾರತದ ಅತ್ಯಂತ ಜನಪ್ರಿಯ ಡಿಜಿಟಲ್ ಗೇಮ್ ಬ್ಯಾಟಲ್ ರಾಯಲ್ ಗೇಮ್‌ನ ತಯಾರಕರಾದ ಕ್ರಾಫ್ಟನ್ ಇಂಡಿಯಾ ಜೊತೆ ಕೆಎಫ್‌ಸಿ ಇಂಡಿಯಾ ಹೊಸ ಪಾಲುದಾರಿಕೆ ಮಾಡಿಕೊಂಡಿದೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (Battlegrounds Mobile India) ಆಟವಾಡುವವರಿಗಾಗಿ ಈ ಸಹಭಾಗಿತ್ವ ಪಡೆದುಕೊಂಡಿದ್ದು, ‘ವಿನ್ನರ್ ವಿನ್ನರ್ ಚಿಕನ್ ಲಂಚ್’ ಅನ್ನು ಬಿಡುಗಡೆ ಮಾಡಿದೆ.
ಇದು ಸೀಮಿತ ಅವಧಿಯ ಸಹಯೋಗವಾಗಿದ್ದು. ಕೆಎಫ್‌ಸಿ ಮತ್ತು ಬಿಜಿಎಂಐ ಚಿಕನ್ ಮತ್ತು ಗೇಮಿಂಗ್ ಪ್ರಿಯರಿಗೆ ಒಂದೊಳ್ಳೆ ಕೊಡುಗೆಯಾಗಿದೆ. ಅಭಿಮಾನಿಗಳು ಕೆಎಫ್‌ಸಿ ಜಿಂಜರ್ ಬಾಕ್ಸ್ ಅನ್ನು ಖರೀದಿಸುವ ಮೂಲಕ ಅತ್ಯಾಕರ್ಷಕ ಇನ್ ಗೇಮ್ ಬಿಜಿಎಂಐ ಬಹುಮಾನಗಳನ್ನು ಪಡೆಯಲು ಸಾಧ್ಯವಿದೆ. ಜೆನರೇಷನ್ ಝೀಯ (ಆಧುನಿಕ ಪೀಳಿಗೆಯ ಜನರು) ಪ್ರೀತಿಯ ವಿಷಯಗಳಾದ ಆಹಾರ ಮತ್ತು ಗೇಮಿಂಗ್ ಅನ್ನು ಒಂದುಗೂಡಿಸುವ ಉದ್ದೇಶದಿಂದ ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಯುವ ಭಾರತೀಯರಲ್ಲಿ ಈಗ ಗೇಮಿಂಗ್ ಬಹಳ ಜನಪ್ರಿಯವಾಗಿದ್ದು, 2025ರಲ್ಲಿ ಒಟ್ಟು ಗೇಮರ್ ಗಳ ಸಂಖ್ಯೆ 750 ಮಿಲಿಯನ್ ಗೆ ಹೋಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: Deepika Padukone: ‘ಕಲ್ಕಿ 2898 ಎಡಿ’ ಚಿತ್ರದ ದೀಪಿಕಾ ಪಡುಕೋಣೆ ನಗ್ನ ಚಿತ್ರ ಸೋರಿಕೆ; ನೆಟ್ಟಿಗರು ಹೇಳಿದ್ದೇನು?
ಕೆಎಫ್‌ಸಿ ಜಿಂಜರ್ ಬಾಕ್ಸ್ ಮೂಲಕ ಗ್ರಾಹಕರು ಕ್ರಿಸ್ಪಿ ಚಿಕನ್ ಮತ್ತು ವಿಶೇಷವಾದ ಇನ್-ಗೇಮ್ ಬಹುಮಾನಗಳನ್ನು ಪಡೆಯಬಹುದಾಗಿದೆ. ಈ ಪ್ಯಾಕ್ ಬೆಲೆ ರೂ.299. (ಡೈನ್ ಇನ್ ಅಥವಾ ಟೇಕ್‌ಅವೇ ಲಭ್ಯವಿರುತ್ತಎ) ಈ ಬಾಕ್ಸ್ ನಲ್ಲಿ ಕೆಎಫ್‌ಸಿಯ ಕ್ಲಾಸಿಕ್ ಜಿಂಜರ್ ಬರ್ಗರ್, 2-ಪೀಸ್ ಹಾಟ್ ವಿಂಗ್ಸ್, ಫ್ರೈಸ್ ಮತ್ತು ತಂಪು ಪಾನೀಯ ಕೂಡ ಸೇರಿದಎ.
ಕೆಎಫ್‌ಸಿ ಜಿಂಜರ್ ಬಾಕ್ಸ್ ನಲ್ಲಿ ಒಂದು ಯುನಿಕ್ ಕೋಡ್ ದೊರೆಯುತ್ತದೆ. ಅದನ್ನು ಬಿಜಿಎಂಐ ವೆಬ್ ಸೈಟ್ ನಲ್ಲಿ ಅನ್ ಲಾಕ್ ಮಾಡಬೇಕು. ಅದೃಷ್ಯಶಾಲಿ ಅಭಿಮಾನಿಗಳಿಗೆ ದೊರೆಯುವ ವಿಶೇಷ ಕೋಡ್ ಗಳಿಂದ ಪ್ಯಾರಾಚೂಟ್ ಗಳು, ಬ್ಯಾಗ್ ಗಳು, ಹ್ಯಾಟ್ ಗಳು ಮತ್ತು ಇತ್ಯಾದಿ ವಸ್ತುಗಳನ್ನು ಉಚಿತವಾಗಿ ಪಡೆಯಬಹುದು.
ಸಹಯೋಗದ ಕುರಿತು ಮಾತನಾಡಿದ ಕೆಎಫ್‌ಸಿ ಇಂಡಿಯಾದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅಪರ್ಣಾ ಭವಾಲ್, “ನಾವು ಇತ್ತೀಚೆಗೆ ಕೆಎಫ್‌ಸಿಯ ಲಂಚ್ ಸ್ಪೆಷಲ್ ಗಳನ್ನು ಬಿಡುಗಡೆ ಮಾಡಿದಾಗ ಬಿಜಿಎಂಐ ಜೊತೆಗಿನ ಸಹಯೋಗದ ಕಲ್ಪನೆ ಹುಟ್ಟಿಕೊಂಡಿತು. ಗೇಮರ್ಗಳು ಸಾಮಾನ್ಯವಾಗಿ ‘ವಿನ್ನರ್, ವಿನ್ನರ್ ಚಿಕನ್ ಡಿನ್ನರ್’ ಜೊತೆಗೆ ಗೆಲುವು ಆಚರಿಸಿಕೊಳ್ಳಲಿದ್ದಾರೆ. ಆದ್ದರಿಂದ ಅದಕ್ಕೆ ಕೆಎಫ್‌ಸಿ ಟ್ವಿಸ್ಟ್ ನೀಡಿ ಜೆನ್ ಝೀ ಗ್ರಾಹಕರ ಮನ ಸೆಳೆಯುವ ಪ್ರಯತ್ನ ಮಾಡಿದ್ದೇವೆ” ಎಂದು ಹೇಳಿದರು.
ಕ್ರಾಫ್ಟನ್ ಇಂಡಿಯಾದ ಬಿಸಿನೆಸ್ ಡೆವಲಪ್ಮೆಂಟ್ ಹೆಡ್ ಸಿದ್ದಾರ್ಥ ಮಲ್ಹೋತ್ರಾ ಈ ಸಹಯೋಗದ ಕುರಿತು ಸಂತಸ ವ್ಯಕ್ತಪಡಿಸಿದರು. ಗ್ರಾಹಕರು ಇನ್-ಗೇಮ್ ಕೆಎಫ್‌ಸಿ ಬಹುಮಾನಗಳನ್ನು ಪಡೆಯಲು ಕೆಎಫ್‌ಸಿ ಜಿಂಜರ್ ಬಾಕ್ಸ್ ನಲ್ಲಿ ಬರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು ಅಥವಾ www.battlegroundsmobileindia.com/redeemಗೆ ಭೇಟಿ ನೀಡಬಹುದು.
ಬಿಜಿಎಂಐ ಬಹುಮಾನಗಳು ದೊರೆಯುವ ಕೆಎಫ್‌ಸಿ ಜಿಂಜರ್ ಬಾಕ್ಸ್ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ನವದೆಹಲಿ ಮತ್ತು ಪುಣೆಗಳಾದ್ಯಂತ ಇರುವ ಕೆಎಫ್‌ಸಿ ರೆಸ್ಟೋರೆಂಟ್‌ಗಳಲ್ಲಿ 30 ಆಗಸ್ಟ್ 2024 ರವರೆಗೆ ಮಾತ್ರ ಲಭ್ಯವಿರುತ್ತದೆ.