Site icon Vistara News

BBMP Tuition Class | ಬೆಂಗಳೂರಿನ 3, 5ನೇ ಕ್ಲಾಸ್‌ ಮಕ್ಕಳಿಗೆ ಸಂಜೆ ಟ್ಯೂಷನ್‌; 10 ಕಡೆ ಆರಂಭ

teacher transfer

teacher

ಬೆಂಗಳೂರು: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ ಕಾರ್ಯಕ್ರಮದ ಅಡಿ ಸಂಜೆ ಟ್ಯೂಷನ್ (BBMP Tuition Class) ಆರಂಭಿಸಲಾಗಿದೆ. ಕಳೆದ ಆಗಸ್ಟ್ 15 ರಿಂದಲೇ ಪ್ರಾಯೋಗಿಕವಾಗಿ ನಗರದ 10 ಪ್ರದೇಶದಲ್ಲಿ ಪ್ರಾರಂಭವಾಗಿದೆ.

3 ಮತ್ತು 5ನೇ ತರಗತಿ ಮಕ್ಕಳಿಗೆ ಸಂಜೆ ಟ್ಯೂಷನ್ ಇರಲಿದ್ದು, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಈ ಅವಕಾಶ ಇರಲಿದೆ. ಪಾಲಿಕೆ ಮಾತ್ರವಲ್ಲದೇ ಸರ್ಕಾರಿ ಶಾಲಾ ಮಕ್ಕಳಿಗೂ ಟ್ಯೂಷನ್‌ ಪ್ರವೇಶಾತಿಗೆ ಅವಕಾಶ ಇದೆ. ಸಂಜೆ 5:30ರಿಂದ ರಾತ್ರಿ 8 ಗಂಟೆವರೆಗೆ ಟ್ಯೂಷನ್ ಕ್ಲಾಸ್‌ ನಡೆಯಲಿದೆ.

ಟ್ಯೂಷನ್‌ ಕ್ಲಾಸ್‌ ಉಸ್ತುವಾರಿಯನ್ನು ಸಂಘ-ಸಂಸ್ಥೆಗಳು ವಹಿಸಿಕೊಂಡಿದ್ದು, ಮಾಸಿಕ 1,500 ರೂ. ಗೌರವ ಧನ ನೀಡಲಾಗುತ್ತಿದೆ. ಟ್ಯೂಷನ್ ಮಾಡಲು ಬಿಬಿಎಂಪಿ ಶಾಲಾ ಕೊಠಡಿಗಳನ್ನು ಬಳಕೆ ಮಾಡಲಾಗುತ್ತಿದೆ. 10 ಕಡೆ ಶುರುವಾಗಿರುವ ಸಂಜೆ ಟ್ಯೂಷನ್‌ ಕ್ಲಾಸ್‌ ಯಶಸ್ವಿಯಾದರೆ, ನಗರದಲ್ಲಿ 209ರಿಂದ 300 ಅಧ್ಯಯನ ಕೇಂದ್ರ ಆರಂಭಿಸಲು ಚಿಂತನೆ ಇರುವುದಾಗಿ ಪಾಲಿಕೆ ಕಲ್ಯಾಣ ವಿಭಾಗದ, ವಿಶೇಷ ಆಯುಕ್ತ ಡಾ.ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.

ಪ್ರಾಯೋಗಿಕ ಟ್ಯೂಷನ್ ಕ್ಲಾಸ್‌ ಎಲ್ಲೆಲ್ಲಿ?

1) ಕ್ಲೀವ್ ಲ್ಯಾಂಡ್ ಟೌನ್ ಬಿಬಿಎಂಪಿ ಶಾಲಾ-ಕಾಲೇಜು

2) ಭೈರವೇಶ್ವರ ನಗರ ಬಿಬಿಎಂಪಿ ಶಾಲಾ-ಕಾಲೇಜು

3) ಶ್ರೀರಾಮಪುರ ಬಿಬಿಎಂಪಿ ಶಾಲಾ-ಕಾಲೇಜು

4) ಕಸ್ತೂರಿ ಬಾ ನಗರ ಬಿಬಿಎಂಪಿ ಶಾಲಾ-ಕಾಲೇಜು

5) ಆಸ್ಟೀನ್‌ಟೌನ್ ಬಾಲಕರ ಶಾಲೆ

6) ಗಂಗಾನಗರ ಪಾಲಿಕೆ ಪ್ರೌಢಶಾಲೆ

7) ಪಾದರಾಯನಪುರ ಪಾಲಿಕೆ ಶಾಲೆ-ಕಾಲೇಜು

8) ಮತ್ತೀಕೆರೆ ಬಿಬಿಎಂಪಿ ಶಾಲಾ-ಕಾಲೇಜು

9) ವಿಜಯನಗರ ಬಿಬಿಎಂಪಿ ಶಾಲಾ-ಕಾಲೇಜು

10) ಪಿಳ್ಳಣ್ಣ ಗಾರ್ಡ್‌ನ್ ಬಿಬಿಎಂಪಿ ಶಾಲಾ-ಕಾಲೇಜು

ಇದನ್ನೂ ಓದಿ | Revised Textbook | ಪರಿಷ್ಕೃತವಾಯ್ತು ಪಠ್ಯಪುಸ್ತಕ; ರಾಜ್ಯದ ಶಾಲೆಗಳಿಗೆ ಸರಬರಾಜು

Exit mobile version