ಬೆಂಗಳೂರು: ನಗರದ ಐ.ಟಿ.ಐ ಸೆಂಟ್ರಲ್ ಶಾಲೆಯಲ್ಲಿ (Bengaluru News) 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (Yoga Day) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಎನ್.ಸಿ.ಸಿ. ತಂಡ ಹಾಗೂ ವಿದ್ಯಾರ್ಥಿಗಳಿಂದ ಹಲವು ಯೋಗಾಸನಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರಮತಿ ಪೊನ್ಮಲರ್ ಮಾತನಾಡಿ, ಯೋಗಾಭ್ಯಾಸದಿಂದ ಮನಸ್ಸು, ದೇಹ, ಆಲೋಚನೆ ಮತ್ತು ಕ್ರಿಯೆಗಳನ್ನು ಸಮಚಿತ್ತಗೊಳಿಸಲು ಸಹಕಾರಿಯಾಗಿದೆ. ಯೋಗ ಕೇವಲ ವ್ಯಾಯಾಮವಷ್ಟೇ ಅಲ್ಲದೇ ನಮ್ಮೆಲ್ಲರ ನಡುವೆ ಏಕತೆಯನ್ನು ಬಿಂಬಿಸುವ ಚಟುವಟಿಕೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: GST Council Meet : ನಕಲಿ ಬಿಲ್ ತಡೆಗೆ ಬಯೋಮೆಟ್ರಿಕ್ ವ್ಯವಸ್ಥೆ; ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಹಲವು ನಿರ್ಧಾರಗಳು ಪ್ರಕಟ
ಯೋಗ ಪ್ರತಿಯೊಬ್ಬರ ಜೀವನದಲ್ಲೂ ಖಾಯಿಲೆ ಮುಕ್ತ , ಆರೋಗ್ಯವಂತ ಹಾಗೂ ಜೀವನಶೈಲಿಯನ್ನು ಬದಲಾಯಿಸಲು ಇರುವ ಒಂದು ವಿಶಿಷ್ಟ ಮಾರ್ಗ ಎಂದು ಹೇಳಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಐ.ಟಿ.ಐ ಸೆಂಟ್ರಲ್ ಶಾಲೆಯ ಎನ್.ಸಿ.ಸಿ ತಂಡ ಹಾಗೂ ವಿದ್ಯಾರ್ಥಿಗಳಿಂದ ಹಲವು ಯೋಗಾಸನಗಳನ್ನು ಎನ್.ಸಿ.ಸಿ. ಅಧಿಕಾರಿ ಬಾಲಕೃಷ್ಣ ವಿ.ಎಚ್. ಅವರ ಮಾರ್ಗದರ್ಶನದಲ್ಲಿ ಪ್ರದರ್ಶಿಸಲಾಯಿತು.
ಈ ವೇಳೆ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ತ್ರಿಕೋನಾಸನ, ಅರ್ಧಉಷ್ಟ್ರಾಸನ, ಶಶಾಂಕಾಸನ, ಸೇತುಬಂದಾಸನ, ಶಲಭಾಸನ, ಚಕ್ರಾಸನ, ಭುಜಂಗಾಸನ ಹಾಗೂ ಪ್ರಾಣಾಯಾಮಗಳನ್ನು ಪ್ರದರ್ಶಿಸಲಾಯಿತು. ಐ.ಟಿ.ಐ. ಕಾರ್ಖಾನೆಯ ವಿವಿಧ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾಮಂದಿರ ಶಾಲೆ, ಐ.ಟಿ.ಐ. ಮಹಿಳಾ ಸಬಲೀಕರಣ ಸಮಿತಿಯಿಂದಲೂ ಯೋಗ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ: Job Alert: ಅಂಚೆ ಇಲಾಖೆಯಲ್ಲಿ 50,000ಕ್ಕೂ ಹೆಚ್ಚಿನ ಹುದ್ದೆಗೆ ಅರ್ಜಿ ಆಹ್ವಾನ
ಕಾರ್ಯಕ್ರಮದಲ್ಲಿ ಐ.ಟಿ.ಐ. ವಿದ್ಯಾಸಮಿತಿಯ ಆಡಳಿತಾಧಿಕಾರಿ ಲತಾ ಹಾಗೂ ಶಿಕ್ಷಕರು ಮತ್ತು ಇತರರು ಪಾಲ್ಗೊಂಡಿದ್ದರು.