Site icon Vistara News

Bengaluru News: ಬೆಂಗಳೂರಿನಲ್ಲಿ ಕರಾವಳಿಯ ಕೊಂಕಣಿ ಭಾಷಿಕರ ಕಲರವ

26th Anniversary Programme of Consortium of Konkani Catholic Associations in Bengaluru

ಬೆಂಗಳೂರು: ಕೊಂಕಣಿ ಕ್ಯಾಥೋಲಿಕ್‌ ಅಸೋಷಿಯೇಷನ್ ವತಿಯಿಂದ ಭಾನುವಾರ ಕೊಂಕಣಿ ಕ್ಯಾಥೋಲಿಕ್‌ ಸಂಘಗಳ ಒಕ್ಕೂಟದ 26 ನೇ ವಾರ್ಷಿಕೋತ್ಸವ ಕಾರ್ಯಕ್ರಮವು ನಗರದ (Bengaluru News) ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಿತು.

ಇದನ್ನೂ ಓದಿ: Karnataka Congress: ಈ ದೇಶವನ್ನು ಅಭಿವೃದ್ಧಿಗೊಳಿಸಿದ್ದು ನೆಹರೂ ಹೊರತು ಮೋದಿಯಲ್ಲ: ಸಿದ್ದರಾಮಯ್ಯ ಪ್ರತಿಪಾದನೆ

ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಮಂಗಳೂರು ನಗರ ಮಾಜಿ ಶಾಸಕ ಜೆ.ಆರ್.ಲೋಬೊ ಹಾಗೂ ಎಫ್‌ಎಂಸಿಐ ಕಂಕನಾಡಿ ಮತ್ತು ಆಡಳಿತದ ನಿಯೋಜಿತ ನಿರ್ದೇಶಕ ರೆವ್. ಫಾ. ಫೌಸ್ಟಿನ್ ಲ್ಯೂಕಾಸ್ ಲೋಬೊ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಗರಿಕರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಜೀವಮಾನ ಸಾಧಕ ಪ್ರಶಸ್ತಿ, ವೃತ್ತಿಯಾಧಾರಿತ ಸಾಧಕ ಪ್ರಶಸ್ತಿ, ವರ್ಷದ ಉದ್ಯಮಿ ಪ್ರಶಸ್ತಿ ಹಾಗೂ ವಿಶೇಷ ಸಮೂಹ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ: Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

ಕೊಂಕಣಿ ಕಲರವ

ನಗರದ ಅರಮನೆ ಮೈದಾನದಲ್ಲಿ ಕೊಂಕಣಿ ಕಲರವ ಮೂಡಿತ್ತು, ಕೊಂಕಣಿ ಸಮುದಾಯದವರು ಒಂದೆಡೆ ಸೇರಿ ಸಂಭ್ರಮಿಸಿದರು. ಅಸೋಷಿಯೇಷನ್ ವತಿಯಿಂದ ಕೊಂಕಣಿ ಕ್ಯಾಥೋಲಿಕ್‌ ಸಂಘಗಳ ಒಕ್ಕೂಟದ 26ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಯೋಗ ಮೇಳ, ನೃತ್ಯ ಸ್ಪರ್ಧೆ, ವಿಂಟೇಜ್ ಕಾರುಗಳ ವೀಕ್ಷಣೆ, ಕ್ಯಾನ್ಸರ್ ಪೀಡಿತರಿಗೆ ಹಣ ಸಂಗ್ರಹಣೆ ಕಾರ್ಯಕ್ರಮ, ಮಕ್ಕಳ ಆಟಗಳು, ಸಂಗೀತ ಸಂಜೆ ಸೇರಿದಂತೆ ಇತರೆ ಕಾರ್ಯಕ್ರಮಗಳು ಜರುಗಿದವು.

Exit mobile version