Site icon Vistara News

Bengaluru News: ಬೆಂಗಳೂರಿನಲ್ಲಿ ಮೇ 19ರಂದು ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ

7 books release programme on May 19 in Bengaluru

ಬೆಂಗಳೂರು: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ (Bengaluru News) ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ.

ಇದನ್ನೂ ಓದಿ: SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ. ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

ವೀರಕಪುತ್ರ ಆಶಯನುಡಿಗಳನ್ನಾಡಲಿದ್ದಾರೆ. ಶೋಭಾ ರಾವ್‌ ಮತ್ತು ಅನಂತ ಕುಣಿಗಲ್‌ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.

ಇದನ್ನೂ ಓದಿ: Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

ಲೋಕಾರ್ಪಣೆಗೊಳ್ಳಲಿರುವ ಕೃತಿಗಳು ಹಾಗೂ ಕೃತಿಕಾರರ ವಿವರ

ಡಾ. ಲಕ್ಷ್ಮಣಕೌಂಟೆ ಅವರ ಮಹಾವಿನಾಶ (ಕಾದಂಬರಿ), ಕೌಂಡಿನ್ಯ ಅವರ ಬೆಳವಡಿ ಮಲ್ಲಮ್ಮ (ಕಾದಂಬರಿ), ರಾಘವೇಂದ್ರ ಪ್ರಭು ಎಂ. ಅವರ ಬಹುತ್ವ ಭಾರತ ಕಟ್ಟಿದವರು (ಬದುಕು ಬರಹಗಳು), ವಿ. ಗೋಪಕುಮಾರ್‌ ಅವರ ಕಗ್ಗಕ್ಕೊಂದು ನ್ಯಾನೋ ಕಥೆ (ನ್ಯಾನೋ ಕತೆಗಳು), ಗೀತಾ ದೊಡ್ಮನೆ ಅವರ ನೀಲಿ ಶಾಯಿಯ ಕಡಲು (ಕವಿತೆಗಳು), ಮೇದಿನಿ ಕೆಸವಿನಮನೆ ಅವರ ಮಿಸ್ಸಿನ ಡೈರಿ (ಅನುಭವ ಕಥನ), ಪಾರ್ವತಿ ಪಿಟಗಿ ಅವರ ಪುನರುತ್ಥಾನ (ಕಾದಂಬರಿ) ಲೋಕಾರ್ಪಣೆಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Exit mobile version