Site icon Vistara News

Bengaluru News: ಸ್ಕಾಯ್ ಸಮರ ಕಲೆಯನ್ನು ಪಠ್ಯದ ಭಾಗವಾಗಿ ಪರಿಚಯಿಸಿದ ಅಪೋಲೋ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ

Apollo International Public School introduced Sqay samara kale as part of the syllabus

ಬೆಂಗಳೂರು: ಶಾಲಾ ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕ ಕ್ಷಮತೆ ಹೆಚ್ಚಿಸುವ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ಅಪೋಲೋ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ ಪಠ್ಯಕ್ರಮದಲ್ಲಿ ಸ್ಕಾಯ್ ಸಮರ ಕಲೆಯನ್ನು (Bengaluru News) ಪರಿಚಯಿಸಿದೆ.

ಗುರುವಾರ ಹಮ್ಮಿಕೊಳ್ಳಲಾಗಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಶ್ಮೀರ ಮೂಲದ ಈ ಸಮರ ಕಲೆಗೆ ಚಾಲನೆ ನೀಡಲಾಯಿತು.

ಶಾಲೆಯ ಪ್ರಾಚಾರ್ಯೆ ಡಾ. ವೇದವತಿ ಬಿ.ಎ. ಮಾತನಾಡಿ, ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ನೆರವಾಗುವ ಈ ಸಮರ ಕಲೆಯನ್ನು ಪಠ್ಯದ ಭಾಗವಾಗಿ ಪರಿಚಯಿಸಲಾಗಿದೆ. ಸ್ಕಾಯ್ ಸಮರ ಕಲೆಯ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಅವರಲ್ಲಿ ಹೆಮ್ಮೆ, ಶಿಸ್ತು ಹಾಗೂ ಸ್ವಯಂ ಜಾಗೃತಿಯನ್ನು ಮೂಡಿಸುವುದು ಇದರ ಮೂಲ ಉದ್ದೇಶ. ಈ ಪುರಾತನ ಸಮರ ಕಲೆಗೆ ಪ್ರೋತ್ಸಾಹ ನೀಡುವ ಮೂಲಕ ನಮ್ಮ ಶಾಲೆಯ ಮತ್ತು ಮಕ್ಕಳ ಬೆಳವಣಿಗೆ ಸಹಕಾರಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Bengaluru Power Cut: ಜು.27, 28, 30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಕಾರ್ಯಕ್ರಮದಲ್ಲಿ ಭಾರತೀಯ ಸ್ಕಾಯ್ ಫೆಡರೇಶನ್ ಜಂಟಿ ಕಾರ್ಯದರ್ಶಿ ಮೊಹಮದ್ ಅಲಿ, ಅಪೋಲೋ ನ್ಯಾಷನಲ್ ಪಬ್ಲಿಕ್ ಶಾಲೆಯ ಉಪಾಧ್ಯಕ್ಷೆ ಐಶ್ವರ್ಯ ಡಿಕೆಎಸ್ ಹೆಗ್ಡೆ, ಅಂತಾರಾಷ್ಟ್ರೀಯ ಸ್ವರ್ಣ ಪದಕ ವಿಜೇತೆ ಸಾನಿಯಾ ಸುಭಾಷ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Wonderla Offer: ವಂಡರ್‌ಲಾದಿಂದ ವಿಶೇಷ ಆಫರ್‌; 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಫ್ರೀ!

ಈ ವೇಳೆ ಸ್ಕಾಯ್ ಪಟುಗಳಾದ ಸಾನಿಯಾ ಸುಭಾಷ್ ಹಾಗೂ ದಿವ್ಯಾ ಅವರು ಈ ಕಲೆಯ ಕೌಶಲ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.

Exit mobile version