Site icon Vistara News

Bengaluru News: ಜೈನ್‌ ಶಾಂತಮಣಿ ಕಲಾ ಕೇಂದ್ರದ ಕಲ್ಲಿನ ಕೆತ್ತನೆ ಮತ್ತು ಚಿತ್ರಕಲಾ ಶಿಬಿರ “ಪಾರ್ಶ್ವ ಪಡಾಪ್” ಗೆ ಸಂಭ್ರಮದ ತೆರೆ

Jain Shantamani Kala Kendra Stone Carving and Painting Camp in Bengaluru

ಬೆಂಗಳೂರು: ಭಾರತದಾದ್ಯಂತ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಒಂದು ವಾರದ ಸಮಾವೇಶ “ಪಾರ್ಶ್ವ ಪಡಾಪ್” ಶನಿವಾರ ಸಂಭ್ರಮದಿಂದ ತೆರೆ ಕಂಡಿತು. ದೇಶದ ನಾನಾ ರಾಜ್ಯಗಳಿಂದ ಆಗಮಿಸಿದ್ದ ಉತ್ಸಾಹಿ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರ ಅದ್ಭುತ ಶಿಲ್ಪಕಲೆ ಹಾಗೂ ಚಿತ್ರಕಲೆಗಳು ನೋಡುಗರ ಗಮನ (Bengaluru News) ಸೆಳೆದವು.

ಜೈನ್ ವಿವಿಯ (ಡೀಮ್ಡ್-ಟು-ಯುನಿವರ್ಸಿಟಿ) ಶಾಂತಮಣಿ ಕಲಾ ಕೇಂದ್ರ ಮತ್ತು ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ (ಜೆಐಆರ್‌ಎಸ್) ಸಹಯೋಗದಲ್ಲಿ ಆಯೋಜಿಸಿದ್ದ ಕಲಾ ಪ್ರತಿಭಾನ್ವೇಷಣೆ ಶಿಬಿರದಲ್ಲಿ ವಿವಿಧ ಕಲಾ ಪ್ರಕಾರಗಳ ಚಟುವಟಿಕೆಗಳು ಆಯೋಜನೆಗೊಂಡಿದ್ದವು. ಇವುಗಳಲ್ಲಿ ಬೆಂಗಳೂರಿನ ಜೈನ್ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆದ ಶಿಲ್ಪಕಲಾ ಸ್ಪರ್ಧೆ ಮತ್ತು ರಾಷ್ಟ್ರೀಯ ಚಿತ್ರಕಲಾ ಶಿಬಿರವೂ ಒಳಗೊಂಡಿದ್ದವು.

ಕಲ್ಲಿನ ಕೆತ್ತನೆ, ಶಿಲ್ಪಕಲೆ ಮತ್ತು ಭಾವನಾತ್ಮಕ ಚಿತ್ರಕಲೆಯ ಮೇಲೆ ಕೇಂದ್ರೀಕರಿಸಿದ ಈ ಕಾರ್ಯಕ್ರಮವು ವಿಶಿಷ್ಟ ವೇದಿಕೆಯೊಂದರ ಮೂಲಕ ಭಾರತೀಯ ಕಲಾವಿದರಲ್ಲಿ ಕಲಾತ್ಮಕ ಬುದ್ದಿಮತ್ತೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: VSK Media Awards 2024: ಬೆಂಗಳೂರಿನಲ್ಲಿ ಜೂ.30 ರಂದು “ವಿಎಸ್‌ಕೆ ಮಾಧ್ಯಮ ಪ್ರಶಸ್ತಿ” ಪ್ರದಾನ

ಈ ಶಿಬಿರವು ದೇಶದ ನಾನಾ ರಾಜ್ಯಗಳಿಂದ ಬಂದ ಉತ್ಸಾಹಿ ಶಿಲ್ಪಿಗಳು, ವರ್ಣಚಿತ್ರಕಾರರ ಸಮಗ್ರ, ಸಾಂಸ್ಕೃತಿಕ ಮತ್ತು ಶ್ರೀಮಂತ ಕಲಾತ್ಮಕತೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿತು. ಕಲಾವಿದರು, ಕಲಾ ಉತ್ಸಾಹಿಗಳು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ವಿವಿಧ ವಯೋಮಾನದ ಉತ್ಸಾಹಿಗಳು, ವಿಶೇಷಚೇತನ ಕಲಾವಿದರೊಬ್ಬರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಶಿಬಿರದಲ್ಲಿ ಕಲಾವಿದರು ಪ್ರಕೃತಿ ಮತ್ತು ಮಾನವೀಯತೆಯ ಅಂಶಗಳನ್ನು ಮುಕ್ತವಾಗಿ ಬೆಸೆದರು. ಇಂದಿನ ಜಗತ್ತಿಗೆ ಅಗತ್ಯವಿರುವ ಸಂದೇಶಗಳನ್ನು ಸಾರಿದರು. ಎಲ್ಲರೂ ಒಟ್ಟಾಗಿ ಭಾಗವಹಿಸಿದ ಈ ಪ್ರದರ್ಶನದಲ್ಲಿ ಕಲಾತ್ಮಕತೆಯ ವೈವಿಧ್ಯತೆ ಮತ್ತು ಆಳವನ್ನು ಅನುಭವಿಸಿದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಶಿಲ್ಪಿಗಳು, ವರ್ಣಚಿತ್ರಕಾರರನ್ನು ಗೌರವಿಸಿ, ಪ್ರಮಾಣಪತ್ರಗಳು ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು ಅಲ್ಲದೇ ಜೈನ್ ಗ್ರೂಪ್ ವತಿಯಿಂದ ನಗದು ಬಹುಮಾನಗಳನ್ನು ಸಹ ವಿತರಣೆ ಮಾಡಲಾಯಿತು.

ಇದನ್ನೂ ಓದಿ: Kannada New Movie: “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯ 3ನೇ ಸ್ಥಾನದಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು!

ಲೋಹದ ಲೇಬಲ್‌ಗಳೊಂದಿಗೆ ಕಲಾವಿದರ ಹೆಸರನ್ನು ಹೊಂದಿರುವ ಕಲ್ಲಿನ ಕೆತ್ತನೆಯ ಶಿಲ್ಪಗಳು ನೋಡುಗರನ್ನು ಆಕರ್ಷಿಸಿದವು. ಅದ್ಭುತ ಶಿಲ್ಪಕಲೆ ಹಾಗೂ ಚಿತ್ರಕಲೆಗಳು ವೀಕ್ಷಕರನ್ನು ಗಮನ ಸೆಳೆದವು.

Exit mobile version