ಬೆಂಗಳೂರು: ನಗರದ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 16ನೇ ರಾಜ್ಯಮಟ್ಟದ ಅಂತರಶಾಲಾ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ (Bengaluru News) ನೀಡಿದರು.
ನಗರದ ಯಂಗ್‌ಸ್ಟರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಲಾಗಿದ್ದ ಎರಡು ದಿನಗಳ 16ನೇ ರಾಜ್ಯಮಟ್ಟದ ಅಂತರಶಾಲಾ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿ, ಬಳಿಕ ಮಾತನಾಡಿದರು.
ಕ್ರೀಡಾಕೂಟವು 8 ವರ್ಷ, 10 ವರ್ಷ, 12 ವರ್ಷ, 14 ವರ್ಷ, 16 ವರ್ಷ ಹಾಗೂ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ನಡೆಯಿತು. ವಿವಿಧ ವಿಭಾಗಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: Tata Motors: ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಟಾಟಾ ಮೋಟಾರ್ಸ್‌ನಿಂದ ‘ವಿದ್ಯಾಧನ’, ‘ಉತ್ಕರ್ಷ’ ಯೋಜನೆ
ಕ್ರೀಡಾಕೂಟದಲ್ಲಿ ಟೀಮ್ ಚಾಂಪಿಯನ್ ಆಗಿ ಹೊರಹೊಮ್ಮಿದ ಶಾಲೆಗಳಿಗೆ ಪ್ರಥಮ ಬಹುಮಾನ 25,000 ರೂಪಾಯಿ ನಗದು ಬಹುಮಾನ ಮತ್ತು ದ್ವಿತೀಯ ಬಹುಮಾನ 15,000 ರೂಪಾಯಿ ಹಾಗೂ ತೃತೀಯ ಬಹುಮಾನ 10000 ರೂ.ದೊಂದಿಗೆ ರೋಲಿಂಗ್ ಟ್ರೋಫಿ ನೀಡಿ, ಗೌರವಿಸಲಾಯಿತು. ಇನ್ನು ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಯಿತು.