Site icon Vistara News

Bengaluru News: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್‌ ಸೇವೆ ಆರಂಭ

namma Yatri Cab service started in Bengaluru

ಬೆಂಗಳೂರು: ನಮ್ಮ ಯಾತ್ರಿ (Namma Yatri) ಸಂಸ್ಥೆಯ ಕ್ಯಾಬ್‌ ಸೇವೆಗೆ ಬೆಂಗಳೂರಿನಲ್ಲಿ (Bengaluru News) ಮಂಗಳವಾರ ಚಾಲನೆ ದೊರೆಯಿತು.

ಬೆಂಗಳೂರಿನಲ್ಲಿ ಈಗಾಗಲೇ ಆಟೋ ಸೇವೆ ಮೂಲಕ ಜನಪ್ರಿಯವಾಗಿರುವ ನಮ್ಮ ಯಾತ್ರಿ ಸಂಸ್ಥೆ ಇದೀಗ ಕ್ಯಾಬ್‌ ಸೇವೆಯನ್ನು ಆರಂಭಿಸಿದ್ದು, ನಮ್ಮ ಯಾತ್ರಿ ಅಪ್ಲಿಕೇಶನ್‌ ಮೂಲಕ ಕ್ಯಾಬ್ ಕೂಡ ಬುಕ್ ಮಾಡಬಹುದಾಗಿದೆ.

ಸದ್ಯ 25,000 ಕ್ಯಾಬ್ ಚಾಲಕರನ್ನು ಹೊಂದಿದ್ದು, ಮುಂದಿನ ಆರು ತಿಂಗಳಲ್ಲಿ ಒಂದು ಲಕ್ಷ ಚಾಲಕರನ್ನು ಸೇರಿಸುವ ಗುರಿಯನ್ನು ಹೊಂದಿದೆ. ಶೂನ್ಯ ಕಮಿಷನ್, ಡೈರೆಕ್ಟ್-ಟು-ಡ್ರೈವರ್ ಮಾದರಿಯನ್ನು ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: IPL 2024: ಜೋಶ್​ನಿಂದ ಬ್ಯಾಟಿಂಗ್​ ನಡೆಸಿ ಕ್ರಿಸ್​ ಗೇಲ್​ ದಾಖಲೆ ಮುರಿದ ಜಾಸ್​ ಬಟ್ಲರ್​

ನಮ್ಮ ಯಾತ್ರಿ ಆ್ಯಪ್ ಆಟೋ ಸೇವೆಯಂತೆಯೇ ಕ್ಯಾಬ್‌ಗಳಲ್ಲಿಯೂ ಪಾರದರ್ಶಕತೆ ಮತ್ತು ದಕ್ಷತೆಗೆ ಆದ್ಯತೆ ನೀಡಲಿದೆ. ಇದು ನಾನ್‌-ಎಸಿ ಮಿನಿ, ಎಸಿ ಮಿನಿ, ಸೆಡಾನ್ ಮತ್ತು ಎಕ್ಸ್‌ಎಲ್‌ (XL) ಕ್ಯಾಬ್ ಒಳಗೊಂಡಂತೆ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲಿದೆ.

ನಮ್ಮ ಯಾತ್ರಿ ಆ್ಯಪ್ ಶೀಘ್ರದಲ್ಲೇ ಅಂತರ-ನಗರ (ಇಂಟರ್-ಸಿಟಿ), ಬಾಡಿಗೆಗಳು ಮತ್ತು ನಿಗದಿತ ರೈಡ್‌ಗಳನ್ನು ಕೂಡ ಒದಗಿಸಲಿವೆ. ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಆ್ಯಪ್ ಸೇವೆ ಲಭ್ಯವಾಗಲಿದೆ. ಇದು ವಿಕಲಚೇತನ ಸ್ನೇಹಿ ಪ್ರಯಾಣ, ಹೆಚ್ಚುವರಿ ಲಗೇಜ್ ಕೊಂಡೊಯ್ಯಲು ಅವಕಾಶ, ಸಾಕುಪ್ರಾಣಿಗಳೊಂದಿಗೆ ಪ್ರಯಾಣ ಮತ್ತು ಪ್ರವಾಸಗಳಂತಹ ವಿಶೇಷ ಸೇವೆಗಳನ್ನೂ ಸಹ ಒದಗಿಸುತ್ತದೆ ಎಂದು ಸಂಸ್ಥೆಯು ತಿಳಿಸಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ನಮ್ಮ ಯಾತ್ರಿಯ ಕ್ಯಾಬ್ ಸೇವೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ನಮ್ಮ ಯಾತ್ರಿ ಕರ್ನಾಟಕದ ಸ್ವದೇಶಿ ಅಪ್ಲಿಕೇಶನ್ ಆಗಿದೆ. ಅದರ ಸಮುದಾಯ-ಕೇಂದ್ರಿತ ವಿಧಾನ ಮತ್ತು ಚಾಲಕರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳು ಶ್ಲಾಘನೀಯ. ನಾವೀನ್ಯತೆ, ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಗೆ ಅವರ ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ ಮತ್ತು ಅವರಿಗೆ ಯಶಸ್ಸನ್ನು ಬಯಸುತ್ತೇನೆ’ ಎಂದು ತಿಳಿಸಿದರು.

ಇದನ್ನೂ ಓದಿ: UPSC EXAM-2023: ಲಕ್ಷಾಂತರ ರೂಪಾಯಿ ಸಂಬಳವಿದ್ದ ಉದ್ಯೋಗವನ್ನೇ ತೊರೆದಿದ್ದ ಯುಪಿಎಸ್‌ಸಿ ಟಾಪರ್ ಆದಿತ್ಯ ಶ್ರೀವಾಸ್ತವ

ದಿ ಇಂಡಿಯನ್ ಫೆಡರೇಶನ್ ಆಫ್ ಆಪ್ ಬೇಸ್ಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ (ಐಎಫ್‌ಎಟಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೇಕ್ ಸಲಾವುದ್ದೀನ್ ಮಾತನಾಡಿ, ನಾವು ನಮ್ಮ ಯಾತ್ರಿಯನ್ನು ಅಭಿನಂದಿಸುತ್ತೇವೆ. ನಮ್ಮ ಚಾಲಕರ ಸಬಲೀಕರಣಕ್ಕಾಗಿ ನೇರ-ಚಾಲಕರಿಗೆ ಹಣವನ್ನು ಯಾವುದೇ ಕಮಿಷನ್ ಇಲ್ಲದೆ ಮತ್ತು ಮುಕ್ತ ಚಲನಶೀಲತೆಯ ವೇದಿಕೆಯನ್ನು ನಮ್ಮ ಯಾತ್ರಿ ಅಭಿವೃದ್ಧಿಪಡಿಸಿದೆ . ಸಮುದಾಯ ಮತ್ತು ನ್ಯಾಯಯುತ ವೇತನ ಮತ್ತು ಪರಸ್ಪರ ಗೌರವವನ್ನು ನಮ್ಮ ಯಾತ್ರಿ ನೀಡುತ್ತದೆ. ಇದು ಚಾಲಕರ ಕಲ್ಯಾಣ ಯೋಜನೆಗಳನ್ನು ವರ್ಧಿಸುತ್ತದೆ ಎಂದು ತಿಳಿಸಿದ್ದಾರೆ. ನಮ್ಮ ಯಾತ್ರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಗಿಜನ್ ಸೆಲ್ವನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

Exit mobile version