ಬೆಂಗಳೂರು: ಸಖಿ ಮಹಿಳಾ ಸಂಘಟನೆಯು ರಕ್ಷಾ ಸೂತ್ರ ದಿನವನ್ನು (Bengaluru News) ಆಚರಿಸಿದೆ. ಅಧ್ಯಕ್ಷರು ಪ್ರೀತ ಘೋಷ್ ಪ್ರಮಾಣಿಕ್, ಉಪಾಧ್ಯಕ್ಷೆ ಪಲ್ಲವಿ ರಾಘವೇಂದ್ರ ಮತ್ತು ತಬಸ್ಸುಮ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಕ್ಷಾ ಸೂತ್ರದಲ್ಲಿ ಸಹೋದರರು ಮಾತ್ರ ನಮ್ಮನ್ನು ರಕ್ಷಿಸಲಾರರು. ಇದರಲ್ಲಿ ಎಲ್ಲರೂ ನಮ್ಮನ್ನು ಆರ್ಥಿಕವಾಗಿ, ಭಾವನಾತ್ಮಕವಾಗಿ, ದೈಹಿಕವಾಗಿ ರಕ್ಷಿಸಬಲ್ಲರು. ಅದು ನಿಮ್ಮ ಸ್ನೇಹಿತರೇ ಆಗಿರಬಹುದು ಅಥವಾ ಸಹೋದರಿಯರು, ಪೋಷಕರೇ ಆಗಿರಬಹುದು ಎಂದು ಸಖಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಡೀ ಭಾರತವೇ ಅಭಯಕ್ಕಾಗಿ ಪ್ರತಿಭಟಿಸುತ್ತಿರುವ ಹೊತ್ತಿನಲ್ಲಿ, ಅವಳಿಗಾಗಿ ಮೇಣದಬತ್ತಿಗಳನ್ನು ಬೆಳಗಿಸಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದೆ. ಈ ಸಖಿ ಮಹಿಳಾ ಗುಂಪು ಭಾರತದಾದ್ಯಂತ ಹರಡಿದೆ. ಇದು ಭಾರತ ಮಾತ್ರವಲ್ಲದೇ ಯುಎಸ್‌ಎ (USA), ಯುಕೆ( UK) ಯಲ್ಲೂ ಹರಡಿದೆ.
ಇನ್ನು ಆಸ್ಟ್ರೇಲಿಯಾ ಎಲ್ಲಾ ರೀತಿಯ ಬಿಕ್ಕಟ್ಟಿನಲ್ಲಿ ಒಟ್ಟಿಗೆ ಇರುವುದಾಗಿ ಸಖಿ ಮಹಿಳಾ ಸಂಘಟನೆ ಪ್ರಮಾಣ ಮಾಡಿದೆ. ಚರ್ಚಿಸಿ ಪರಿಹಾರವನ್ನು ಹೊರತೆಗೆಯುವ ಗುರಿಯೂ ಸಂಘಟನೆಗೆ ಇದೆ. ಹುಡುಗಿಯರನ್ನು ಮಾನಸಿಕವಾಗಿ ಸದೃಢರನ್ನಾಗಿಸಲು, ವಿವಿಧ ರೀತಿಯ ಧ್ಯಾನವನ್ನು ಹೇಳಿಕೊಡುತ್ತಿದ್ದಾರೆ. ಆದ್ದರಿಂದ ಅವರು ಕಷ್ಟಗಳನ್ನು ಎದುರಿಸಬಹುದು ಮತ್ತು ಜಯಿಸಬಹುದು ಇದು ಸಖಿ ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ.