Site icon Vistara News

Bengaluru Power Cut: ಆ.29 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Bengaluru Power Cut

ಬೆಂಗಳೂರು: ಬೆಂಗಳೂರು ನಗರದ 20/66/11ಕೆವಿ ಮತ್ತಿಕೆರೆ ಎಂ ಯು ಎಸ್ ಎಸ್ ವಿದ್ಯುತ್‌ ಉಪಕೇಂದ್ರದಲ್ಲಿ ವಾರ್ಷಿಕ ನಿರ್ವಹಣಾ ಕಾರ್ಯಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಆ.29 ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ಇದನ್ನೂ ಓದಿ: CM Siddaramaiah: ಘಟಪ್ರಭಾ ನದಿ ಪ್ರವಾಹ ಪರಿಹಾರ ಕುರಿತು ಶೀಘ್ರ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ಎಲ್.ಜಿ.ಹಳ್ಳಿ, ಆರ್.ಎಂ.ವಿ. 2ನೇ ಹಂತ, ಸಂಜೀವಪ್ಪ ಕಾಲೋನಿ, ನ್ಯೂ ಬಿ.ಇ.ಎಲ್‌ ರಸ್ತೆ, ಎಂ.ಎಸ್.ಆರ್‌ ನಗರ, ಮೋಹನ್‌ ಕುಮಾರ ನಗರ, ಪಂಪಾ ನಗರ, ಬಿ.ಕೆ. ನಗರ,ಬಾಂಬೆ ಡೈಯಿಂಗ್‌ ರಸ್ತೆ, ಯಶವಂತಪುರ ಮೊದಲನೆ ಮುಖ್ಯ ರಸ್ತೆ, ಗೋಕುಲ, ಎಚ್.ಎಂ.ಟಿ. ಮುಖ್ಯ ರಸ್ತೆ, ಎಚ್.ಎಂ.ಟಿ. ಲೇಔಟ್‌, ಬೃಂದಾವನ ನಗರ, ಎಸ್.ಬಿ.ಎಂ ಕಾಲೋನಿ, ಎಂ.ಆರ್.ಜೆ ಕಾಲೋನಿ, ವಿ.ಆರ್.ಲೇ ಔಟ್‌, ಜೆ.ಪಿ ಪಾರ್ಕ್‌ ರಸ್ತೆ.

ಇದನ್ನೂ ಓದಿ: Accident case: ಭೀಕರ ರಸ್ತೆ ಅಪಘಾತ: ಮಹಿಳೆ ಸಾವು, ಐವರು ಗಂಭೀರ

ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Exit mobile version