Site icon Vistara News

Bhaichung Bhutia : ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಗೆ ಫುಟ್​ಬಾಲ್​ ತರಬೇತಿ ನೀಡಿದ ಬೈಚುಂಗ್ ಭುಟಿಯಾ

orchids school

ಬೆಂಗಳೂರು : ಭಾರತದ ಪ್ರಮುಖ ಇಂಟರ್​ನ್ಯಾಷನಲ್​ ಸ್ಕೂಲ್​ ನೆಟ್​ವರ್ಕ್​ ಆಗಿರುವ ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್ ಭಾರತೀಯ ಫುಟ್‌ಬಾಲ್ ದಿಗ್ಗಜ ಭೈಚುಂಗ್ ಭುಟಿಯಾ (Bhaichung Bhutia) ಅವರ ‘ಭೈಚುಂಗ್ ಭುಟಿಯಾ ಫುಟ್‌ಬಾಲ್‌ ಅಕಾಡೆಮಿ ಯೊಂದಿಗೆ ಪಾಲುದಾರಿಕೆ ಪಡೆದುಕೊಂಡಿದೆ. ಈ ಜಂಟಿ ನೇತೃತತ್ವದಲ್ಲಿ ‘ಪವರ್ ಅಪ್ ವಿತ್ ಲೆಜೆಂಡ್ಸ್’ ಸರಣಿಯ ಭಾಗವಾಗಿ, ಜನವರಿ 11 ರಿಂದ ಆರ್ಕಿಡ್‌ನ ಹರಳೂರು ಮತ್ತು ಕಾಡುಗೋಡಿ ಕ್ಯಾಂಪಸ್‌ಗಳಲ್ಲಿ ಫುಟ್‌ಬಾಲ್ ತರಬೇತಿ ಶಿಬಿರಗಳು ನಡೆಯಲಿವೆ. ಅಂತೆಯೇ ಜನವರಿ 13 ರಂದು ಭಾರತೀಯ ಫುಟ್‌ಬಾಲ್‌ತಾರೆ ಭೈಚುಂಗ್ ಭುಟಿಯಾ ಫುಟ್ಬಾಲ್​ ಕೌಶಲಗಳ ಕುರಿತು ಮಾಸ್ಟರ್‌ ಕ್ಲಾಸ್‌ ನಡೆಸಿಕೊಟ್ಟಿದ್ದಾರೆ. ‘ ಇಲ್ಲಿ ತನಕ ಕ್ರೀಡಾ ಐಕಾನ್‌ಗಳಾದ ಮೇರಿ ಕೋಮ್, ಶಿಖರ್ ಧವನ್ ಅವರ ಡಾ ಒನ್ ಸ್ಪೋರ್ಟ್ಸ್ ಅಕಾಡೆಮಿ, ಗೀತಾ ಫೋಗಟ್ ಮತ್ತು ಅಜಂತಾ ಮೆಂಡಿಸ್ ಅವರೊಂದಿಗೆ ಇಲ್ಲಿ ತರಬೇತಿ ಶಿಬಿರ ನಡೆಸಲಾಗಿತ್ತು.

ಈ ಫುಟ್‌ಬಾಲ್ ತರಬೇತಿ ಶಿಬಿರಗಳ ಪ್ರಾಥಮಿಕ ಗುರಿ ಆರ್ಕಿಡ್‌ನ ಯುವ ವಿದ್ಯಾರ್ಥಿಗಳಲ್ಲಿ ಶಿಸ್ತು, ತಂಡದ ಜವಬ್ದಾರಿ, ನಿರ್ಣಯ ತೆಗೆದುಕೊಳ್ಳುವಿಕೆ ಮುಂತಾದ ಕೌಶಲ ಹೆಚ್ಚಿಸುವುದಾಗಿದೆ. ಮೂರು ದಿನಗಳ ಶಿಬಿರವು ಆಟದ ಒಳನೋಟ ಹಾಗೂ ಅಗತ್ಯ ಕೌಶಲ ವೃದ್ಧಿಗೆ ನೆರವಾಗಲಿದೆ.

ಶಿಬಿರದ ಬಗ್ಗೆ ಭೈಚುಂಗ್ ಭುಟಿಯಾ ಮಾತನಾಡಿ, ಫುಟ್‌ಬಾಲ್ ಆಟಗಾರನಾಗಿ ನನಗೆ ಮೈದಾನದ ಗೆಲುವು ಮಾತ್ರ ಮುಖ್ಯವಲ್ಲ. ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದು ನಿಜವಾದ ಗೆಲುವಾಗಿದೆ. ನಾನು ಮಕ್ಕಳಿಗೆ ಮಾಸ್ಟರ್‌ಕ್ಲಾಸ್ ನಡೆಸಲು ಮತ್ತು ಫುಟ್‌ಬಾಲ್‌ನಲ್ಲಿ ನನ್ನ ಕಲಿಕೆಯ ಕೌಶಲಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿಗಳು ಈ ಮಾಸ್ಟರ್‌ಕ್ಲಾಸ್ ಮತ್ತು ಕ್ಯಾಂಪ್‌ಗಳ ಮೂಲಕ, ಮೈದಾನದಲ್ಲಿ ಉತ್ತಮ ಸಾಧನೆ ಮಾಡುವುದಲ್ಲದೆ ತಮ್ಮ ಜೀವನದ ಎಲ್ಲಾ ಅಂಶಗಳಲ್ಲಿ ಕ್ರೀಡಾ ಮನೋಭಾವ ಮತ್ತು ತಂಡ ಮನೋಭಾವವನ್ನು ಬೆಳೆಸಿಕೊಳ್ಳುವುದನ್ನು ನೋಡಲು ಆಶಿಸುತ್ತೇನೆ” ಎಂದರು.

ಇದನ್ನೂ ಓದಿ : ಚಿನ್ನದ ಸರ ಮಾರಿ ಕ್ರಿಕೆಟ್​ ಕಿಟ್​ ಕೊಡಿಸಿದ ತಾಯಿ, ಸಾಲ ಮಾಡಿ ಬ್ಯಾಟ್ ಕೊಡಿಸಿದ ತಂದೆ; ಇದು ಧ್ರುವ್ ಜುರೆಲ್ ಕ್ರಿಕೆಟ್​ ಜರ್ನಿ

ಆರ್ಕಿಡ್ಸ್ ದಿ ಇಂಟರ್ನ್ಯಾಷನಲ್ ಸ್ಕೂಲ್‌ನ ಅಕಾಡೆಮಿಕ್ಸ್‌ ವಿಪಿ ಡಾ ವೇದಾ ಬೈಸಾನಿ ಮಾತನಾಡಿ ಆರ್ಕಿಡ್‌ನಲ್ಲಿ ಯಾವಾಗಲೂ ಕ್ರೀಡೆ ಮತ್ತು ದೈಹಿಕ ಶಿಕ್ಷಣಕ್ಕೆ ಆದ್ಯತೆ ನೀಡುತ್ತೇವೆ. ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಅನುಭವ ಒದಗಿಸಲು ಅನನ್ಯವಾದ ಅವಕಾಶಗಳನ್ನು ನೀಡುತ್ತೇವೆ. ಬೈಚುಂಗ್ ಭುಟಿಯಾ ಅವರ ಮಾಸ್ಟರ್‌ಕ್ಲಾಸ್ ಸಮಗ್ರ ಶಿಕ್ಷಣದ ಕಡೆಗೆ ನಮ್ಮ ಬದ್ಧತೆಯಾಗಿದೆ ಎಂದು ಹೇಳಿದರು.

ಆರ್ಕಿಡ್‌ನ ಅಕಾಡೆಮಿಕ್ಸ್‌ ಉಪಾಧ್ಯಕ್ಷ ಸಕಿನಾ ಸಕಿನ ಖಾಸಿಮಗ್‌ ಜೈದಿ ಮಾತನಾಡಿ ಈ ಕ್ರೀಡಾ ಸಹಭಾಗಿತ್ವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೇಗೆ ಸಹಕಾರಿ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ದಿ ಆರ್ಕಿಸ್‌ನ ವಿದ್ಯಾರ್ಥಿ ಹಿತರಕ್ಷಣೆ ವಿಭಾಗದ ವಿಪಿ ಹರ್ಷ ಗುಪ್ತಾ ಮಾತನಾಡಿ, ವಿದ್ಯಾರ್ಥಿಗಳಿಗೆ ಅತ್ಯುತ್ತಮವಾಗಿದ್ದನ್ನು ನೀಡಲು ಶಾಲೆಯ ಬದ್ಧತೆ ಮತ್ತು ಅದರ ಉಪಕ್ರಮಗಳ ಕುರಿತು ವಿವರಿಸಿದರು.

Exit mobile version