ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು(BMTC Bus Pass) ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ ವಿಕಲಚೇತನರಿಗೆ ರಿಯಾಯಿತಿ ದರದ ಬಸ್ ಪಾಸ್‌ಗಳನ್ನು ವಿತರಿಸುತ್ತಿದೆ. ಅರ್ಹ ಫಲಾನುಭವಿಗಳು ಡಿಸೆಂಬರ್ ೨೬ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
2023ನೇ ಸಾಲಿನ ವಿಕಲಚೇತನರ ಪಾಸ್‌ಗಾಗಿ ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ತದನಂತರ ತಾವು ಆಯ್ಕೆ ಮಾಡಿಕೊಂಡ ಬಸ್ ನಿಲ್ದಾಣಗಳಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ, ಪಾಸ್‌ಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
2023ನೇ ಸಾಲಿನ ವಿಕಲಚೇತನರ ರಿಯಾಯಿತಿ ಪಾಸ್‌ಗಳನ್ನು ಈ ಕೆಳಕಂಡಂತೆ ವಿತರಿಸಲು, ನವೀಕರಿಸಲು ಕ್ರಮ ಕೈಗೊಳ್ಳಲಾಗಿದೆ.
- ವಿಕಲಚೇತನರ ನೂತನ ಪಾಸ್‌ಗಳನ್ನು ವರ್ಷವಿಡೀ ವಿತರಣೆ ಮಾಡಲಾಗುವುದು.
- ಕಳೆದ ಸಾಲಿನ ವಿಕಲಚೇತನರ ಬಸ್ ಪಾಸ್‌ಗಳನ್ನು 2023ರ ಫೆಬ್ರವರಿ ೨೮ರ ಒಳಗೆ ನವೀಕರಿಸಿಕೊಳ್ಳುವುದು.
- ವಿಕಲಚೇತನರ ರಿಯಾಯಿತಿ ಪಾಸ್ನ ದರ 660 ರೂಪಾಯಿ.
- ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2022ನೇ ಸಾಲಿನಲ್ಲಿ ವಿತರಿಸಿ ಡಿಸೆಂಬರ್ 31ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸುಗಳನ್ನು 2023ರ ಫೆಬ್ರವರಿ ೨೮ರವರೆಗೆ ಮಾನ್ಯ ಮಾಡಲಾಗುವುದು.
- ವಿಕಲಚೇತನರ ನೂತನ ಪಾಸ್‌ಗಳನ್ನು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಾತ್ರ ವಿತರಣೆ ಮಾಡಲಾಗುತ್ತದೆ. ಪಾಸ್ ನವೀಕರಣಕ್ಕೆ ನಗರದ ವಿವಿಧ ಬಸ್ ನಿಲ್ದಾಣಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕಳೆದ ಸಾಲಿನ ವಿಕಲಚೇತನರ ಬಸ್ ಪಾಸುಗಳನ್ನು ಬೆಂಗಳೂರಿನ ಈ ಕೆಳಕಂಡ ಬಸ್ ನಿಲ್ದಾಣಗಳಲ್ಲಿ ನವೀಕರಿಸಲಾಗುವುದು.
ಕೆಂಪೇಗೌಡ ಬಸ್ ನಿಲ್ದಾಣ | ಶಿವಾಜಿನಗರ ಬಸ್ ನಿಲ್ದಾಣ | ಶಾಂತಿನಗರ ಟಿಟಿಎಂಸಿ | ಕೃಷ್ಣರಾಜ ಮಾರುಕಟ್ಟೆ ಬಸ್ ನಿಲ್ದಾಣ |
ಬನಶಂಕರಿ ಟಿಟಿಎಂಸಿ | ಜಯನಗರ ಟಿಟಿಎಂಸಿ | ಕೆಂಗೇರಿ ಟಿಟಿಎಂಸಿ | ಹೊಸಕೋಟೆ ಬಸ್ ನಿಲ್ದಾಣ |
ವಿಜಯನಗರ ಟಿಟಿಎಂಸಿ | ಯಶವಂತಪುರ ಟಿಟಿಎಂಸಿ | ವೈಟ್ಫೀಲ್ಡ್ ಟಿಟಿಎಂಸಿ | ಯಲಹಂಕ ಹಳೆ ಬಸ್ ನಿಲ್ದಾಣ |
ದೊಮ್ಮಲೂರು ಟಿಟಿಎಂಸಿ |
ಇದನ್ನೂ ಓದಿ | Christmas Celebrations | ರಾಜ್ಯಾದ್ಯಂತ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ; ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ