Site icon Vistara News

Board Exams: ಬೋರ್ಡ್‌ ಎಕ್ಸಾಂ ವ್ಯಾಲ್ಯುವೇಶನ್‌; 3 ದಿನದ ಗಡುವು ಆದೇಶ ವಾಪಸ್‌

Board Exam

ಬೆಂಗಳೂರು: ಇಂದಿನಿಂದ (ಮಾ.29) 5, 8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ (Paper Evaluation) ಶುರುವಾಗಿದೆ. ಆದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಆದೇಶದ ವಿರುದ್ಧ ಶಿಕ್ಷಕರು ಕಿಡಿಕಾರಿದ್ದರು. 1 ಕೋಟಿಗೂ ಅಧಿಕ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಮೂರೇ ದಿನದಲ್ಲಿ ಮುಗಿಸುವಂತೆ ಆದೇಶ ಹೊರಡಿಸಿತ್ತು.

ಮೂರು ದಿನದಲ್ಲಿ ಮೌಲ್ಯಮಾಪನ ಮುಗಿಸಿ SATS ನಲ್ಲಿ ಅಪ್ ಲೋಡ್ ಮಾಡುವಂತೆ ಆದೇಶಿಸಿತ್ತು. 1.66 ಕೋಟಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ 3 ದಿನಗಳಲ್ಲಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿತ್ತು. ಅನೇಕ ಒತ್ತಡಗಳ ಮಧ್ಯೆ ಶಿಕ್ಷರಿಗೆ ಮೌಲ್ಯಮಾಪನದ ಟಾಸ್ಕ್‌ ಭಯ ಹುಟ್ಟಿಸಿತ್ತು.

ಒಂದೆಡೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತೊಂದೆಡೆ ಪಬ್ಲಿಕ್‌ ಪರೀಕ್ಷೆ ಉತ್ತರ ಪತ್ರಿಕೆ ವ್ಯಾಲ್ಯುವೇಶನ್‌ ತಲೆನೋವು ತರಿಸಿತ್ತು. ಶಿಕ್ಷಣ ಇಲಾಖೆಯ ಅವೈಜ್ಞಾನಿಕ ಆದೇಶಕ್ಕೆ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳಿಂದ ವಿರೋಧ ವ್ಯಕ್ತವಾಗಿತ್ತು. ಶಿಕ್ಷಕರ ಕೊರತೆ ಮಧ್ಯೆ ಇಲಾಖೆಯ ಈ ನಿರ್ಧಾರ ಸರಿಯಲ್ಲ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಕಿಡಿಕಾರಿದ್ದರು.

ಇದನ್ನೂ ಓದಿ: Kodagu University : ಉದ್ಯೋಗ ಸೃಷ್ಟಿ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಪ್ರೊ.ಅಶೋಕ್ ಸಂಗಪ್ಪ

ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಯಾವುದೇ ಸಂಭಾವನೆ ಪ್ರಕಟಿಸದೆ ಶಿಕ್ಷಕರ ಮೇಲೆ ಹೀಗೆ ಒತ್ತಡ ಹೇರುತ್ತಿರುವುದು ಸರಿಯಲ್ಲ. ಈ ರೀತಿಯ ಅವೈಜ್ಞಾನಿಕ ನಿರ್ಧಾರ ತೆಗೆದುಕೊಳ್ಳದಂತೆ ಇಲಾಖೆಗೆ ಮನವಿ ಮಾಡಿದ್ದರು. ಈ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರು.

ಶಿಕ್ಷಕರ ಮನವಿಗೆ ಸ್ಪಂದಿಸಿ ಆದೇಶ ಹಿಂಪಡೆದ ಇಲಾಖೆ

ಶಿಕ್ಷಕರ ಮನವಿಗೆ ಸ್ಪಂದಿಸಿದ ಕರ್ನಾಟಕ ಪರೀಕ್ಷಾ ಹಾಗೂ ಮೌಲ್ಯ ನಿರ್ಣಯಕ ಪರೀಕ್ಷಾ ಮಂಡಳಿ ಹಳೇ ಆದೇಶವನ್ನು ತಿದ್ದುಪಡೆದಿದೆ. ಪ್ರಸ್ತುತ 8ನೇ ತರಗತಿ 50 ಹಾಗೂ 9ನೇ ತರಗತಿ 30 ಪತ್ರಿಕೆ ಮೌಲ್ಯ ಮಾಪನ ಮಾಡಲು ಸೂಚನೆ ನೀಡಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಚುನಾವಣಾ ಕಾರ್ಯ ಇರುವ ಹಿನ್ನೆಲೆಯಲ್ಲಿ ತಡ ಮಾಡದೇ ಮೌಲ್ಯ ಮಾಪನ ಮಾಡುವಂತೆ ತಿಳಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version