Site icon Vistara News

Quiz Competition: ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ; ಬೊಮ್ಮನಹಳ್ಳಿ ಸರ್ಕಾರಿ ಶಾಲೆಗೆ ಪ್ರಥಮ ಸ್ಥಾನ

quiz competition

ಬೆಂಗಳೂರು: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಮತ್ತು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಸಹಯೋಗದಲ್ಲಿ ನಗರದ ಸಿಲ್ವರ್ ಜ್ಯೂಬಿಲಿ ಭವನದಲ್ಲಿ ಮಂಗಳವಾರ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ (Quiz Competition) ಆಯೋಜಿಸಲಾಗಿತ್ತು. 14 ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ನೆಲಮಂಗಲದ ಬೊಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಮಕ್ಕಳಲ್ಲಿ 7 ತಂಡಗಳ ಎರಡು ಸೆಮಿ ಫೈನಲ್ ಅನ್ನು ನಡೆಸಿ 8 ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ಇದರಲ್ಲಿ ನೆಲಮಂಗಲದ ಬೊಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಾಲೆ ಪ್ರಥಮ ಸ್ಥಾನ (27,000 ನಗದು ಬಹುಮಾನ), ಯಲಹಂಕದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ದ್ವಿತೀಯ ಸ್ಥಾನ (21,000 ನಗದು ಬಹುಮಾನ) ಹಾಗೂ ಯಾದಗಿರಿ ಆದರ್ಶ ವಿದ್ಯಾಲಯ ತೃತೀಯ ಸ್ಥಾನ (15,000 ನಗದು ಬಹುಮಾನ) ಪಡೆದಿವೆ.

ಇದನ್ನೂ ಓದಿ | Robotics Challenge: ಇಸ್ರೋದಿಂದ ವಿದ್ಯಾರ್ಥಿಗಳಿಗೆ ರೊಬೋಟಿಕ್ಸ್ ಚಾಲೆಂಜ್; ಗೆದ್ದವರಿಗೆ 5 ಲಕ್ಷ ರೂ.

ಕಾರ್ಯಕ್ರಮದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ನಿರ್ದೇಶಕ (ಗುಣಮಟ್ಟ) ಮಾರುತಿ ಎಂ.ಆರ್, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ನಿರ್ದೇಶಕಿ ತನುಜ ಸಿಂಗ್, ಅಗಸ್ತ್ಯ ಸಂಸ್ಥೆ ಕಾರ್ಯನಿರ್ವಾಹಕ ತ್ಯಾಗರಾಜನ್, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಅರಿಂದಮ್ ಚಟರ್ಜಿ, ಕರ್ನಾಟಕದ ಬೇರೆ ಬೇರೆ ಜಿಲ್ಲೆಯ ಮಕ್ಕಳು ಮತ್ತು ಶಿಕ್ಷಕರು ಮತ್ತು ಅಗಸ್ತ್ಯ ಸಂಸ್ಥೆ ಸಿಬ್ಬಂದಿ ಭಾಗವಹಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version