Site icon Vistara News

Book Release: ಜ. 31ರಂದು ನಾಲ್ವರು ತಜ್ಞರ ಮಾತುಗಳು, ಆರು ಪುಸ್ತಕಗಳ ಲೋಕಾರ್ಪಣೆ

Book Release

ಬೆಂಗಳೂರು: ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮತ್ತು ಸುಬ್ಬು ಪಬ್ಲಿಕೇಶನ್ಸ್‌ ವತಿಯಿಂದ ‘ನಾಲ್ವರು ತಜ್ಞರ ಮಾತುಗಳು, ಆರು ಪುಸ್ತಕಗಳ ಲೋಕಾರ್ಪಣೆ’ ಕಾರ್ಯಕ್ರಮವನ್ನು (Book Release) ಜನವರಿ 31ರಂದು ಸಂಜೆ 5 ಗಂಟೆಗೆ ನಗರದ ಎನ್.ಆರ್.ಕಾಲೊನಿಯ ಸಿ. ಅಶ್ವತ್ಥ್ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶತಾವಧಾನಿ ಡಾ. ಆರ್. ಗಣೇಶ್ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವೀಣಾ ಬನ್ನಂಜೆ, ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಎಂ.ಎ.ಸುಬ್ರಹ್ಮಣ್ಯ ಹಾಗೂ ಹುಬ್ಬಳ್ಳಿಯ ಸುಬ್ಬು ಪಬ್ಲಿಕೇಶನ್ಸ್‌ನ ಎಂ.ಎಸ್. ಋತ್ವಿಕ್ ಅವರು ಭಾಗವಹಿಸಲಿದ್ದಾರೆ.

ʼಮನುಸ್ಮೃತಿ: ಯಾಕೆ ಒಂದು ವಿಶಿಷ್ಟ ಕೃತಿ?ʼ ವಿಷಯದ ಬಗ್ಗೆ ಡಾ. ಬಿ. ಭಾಸ್ಕರ ರಾವ್, ʼಅನುವಾದದ ಅನುಭವʼ ವಿಷಯದ ಕುರಿತು ಅಷ್ಟಾವಧಾನಿ ಗಣೇಶಭಟ್ಟ ಕೊಪ್ಪಲತೋಟ, ʼಮೊಘಲರ ಆಡಳಿತೆಯ ನೆನಪುʼ ಬಗ್ಗೆ ಸಂದೀಪ್ ಬಾಲಕೃಷ್ಣ ಹಾಗೂ ‘ಫ್ಯಾಂಟಸಿ-ಅದ್ಭುತ, ರಮ್ಯ’ ಬರೆಯುವುದು ಹೇಗೆ?ʼ ವಿಷಯದ ಬಗ್ಗೆ ಪ್ರೇಮಶೇಖರ್ ಅವರು ಮಾತನಾಡಲಿದ್ದಾರೆ.

ಬಿಡುಗಡೆಯಾಗುವ ಪುಸ್ತಕಗಳು

ಡಾ.ಬಿ. ಭಾಸ್ಕರ ರಾವ್‌ ರಚನೆಯ ʼಮನುಸ್ಮೃತಿ: ಒಂದು ವಿಶಿಷ್ಟ ಕೃತಿʼ
ಸಂದೀಪ್‌ ಬಾಲಕೃಷ್ಣ ಅವರ ‘A Day IN THE LIFE OF A CHAPATI’, ದೂತವಾಕ್ಯ ಕಾದಂಬರಿ
ಪ್ರೇಮಶೇಖರ ಅವರ ʼಮಳೆʼ ಕಾದಂಬರಿ, ʼ೧೧:೧೧-ಹನ್ನೊಂದು ಕಥೆಗಳುʼ,
ಡಾ. ಯಂಡಮೂರಿ ವೀರೇಂದ್ರನಾಥ್‌+ಯಂಡಮೂರಿ ಕಮಲೇಂದ್ರ ನಾಥ್‌ ಅವರ ೨೧ ಒಳ್ಳೆಯ(ತನದ) ಕಥೆಗಳು

ಇದನ್ನೂ ಓದಿ | Translation Workshop: ಮಕ್ಕಳ ಸಾಹಿತ್ಯಕ್ಕೆ ಹೊಸ ಸ್ಪರ್ಶ ಅಗತ್ಯ: ನಾಗೇಶ ಹೆಗಡೆ

Exit mobile version