ಬೆಂಗಳೂರು: ಸಾವಣ್ಣ ಪ್ರಕಾಶನದ (Sawanna Prakashana) ವತಿಯಿಂದ ಪುಸ್ತಕ ಪ್ರಪಂಚ; ರಂಗಸ್ವಾಮಿ ಮೂಕನಹಳ್ಳಿ ಅವರ ʼಸಿರಿವಂತಿಕೆಗೆ ಸರಳ ಸೂತ್ರಗಳುʼ ಸೇರಿದಂತೆ 5 ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಫೆ. 11ರಂದು ಬೆಳಗ್ಗೆ 10.30ಕ್ಕೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ʼಪುಸ್ತಕ ಪ್ರಪಂಚʼ ಸಮಾರಂಭದಲ್ಲಿ ಸಾವಣ್ಣ ಪ್ರಕಾಶನದ 5 ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಲೇಖಕರೊಡನೆ ವಿಶೇಷ ಸಂವಾದವನ್ನು ಏಮ್ ಹೈ ಕನ್ಸಲ್ಟಿಂಗ್ ಸಿಇಒ, ಅಂಕಣಕಾರರು, ಸ್ಟಾರ್ಟಪ್ ಮಾರ್ಗದರ್ಶಕರಾದ ಎನ್. ರವಿಶಂಕರ್ ಅವರು ನಡೆಸಿಕೊಡಲಿದ್ದಾರೆ ಹಾಗೂ
ರಂಜನೀ ಕೀರ್ತಿ ಅವರು ನಿರೂಪಣೆ ಮಾಡಲಿದ್ದಾರೆ. ಬೆಳಗ್ಗೆ 9:30 ಗಂಟೆಗೆ ಉಪಾಹಾರ ವ್ಯವಸ್ಥೆಯೂ ಇರುತ್ತದೆ.
ಇದನ್ನೂ ಓದಿ | Swadeshi Mela: ಫೆ. 7 ರಿಂದ ಬೆಂಗಳೂರಿನಲ್ಲಿ ಬೃಹತ್ ಸ್ವದೇಶಿ ಮೇಳ
ಬಿಡುಗಡೆಯಾಗುವ ಪುಸ್ತಕಗಳು
ರಂಗಸ್ವಾಮಿ ಮೂಕನಹಳ್ಳಿ ಅವರ ʼಸಿರಿವಂತಿಕೆಗೆ ಸರಳ ಸೂತ್ರಗಳುʼ
ಡಾ. ನಾ. ಸೋಮೇಶ್ವರ ಅವರ ʼಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು?ʼ
ಜಗದೀಶಶರ್ಮಾ ಸಂಪ ಅವರ (25ನೇ ಪುಸ್ತಕ) ʼಮಹಾಭಾರತ ಅನ್ವೇಷಣೆʼ
ಸತೀಶ್ ವೆಂಕಟಸುಬ್ಬು ಅವರ ʼಸೈಬರ್ ಕ್ರೈಂʼ ತಡೆಗಟ್ಟುವುದು ಹೇಗೆ? (ಕನ್ನಡ) ಮತ್ತು ʼCyber Crimeʼ (ಇಂಗ್ಲಿಷ್)