ಬೆಂಗಳೂರು: ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸ ಅಥವಾ ಗುಲಾಬಿ ತಿಂಗಳು ಎಂದು ಗುರುತಿಸಲಾಗಿದೆ. ಹೀಗಾಗಿ ಮಾರಕ ರೋಗದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದಲ್ಲಿ ಅಪೋಲೋ ಆಸ್ಪತ್ರೆ ವತಿಯಿಂದ ʼಗುಲಾಬಿ ಬಣ್ಣದ ಸೀರೆ ಓಟʼ ಆಯೋಜಿಸಲಾಗಿತ್ತು.
ಸ್ತನ ಕ್ಯಾನ್ಸರ್‌ನಿಂದ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ ಬಗ್ಗೆ ಇರುವ ಆತಂಕ ದೂರ ಮಾಡಲು ಹಾಗೂ ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ಮಹತ್ವದ ಕುರಿತು ಜಾಗೃತಿ ಮೂಡಿಸಲು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ಆಂಕೊಲಾಜಿ ವಿಭಾಗದಿಂದ ಗುಲಾಬಿ ಬಣ್ಣದ ಸೀರೆ ಓಟʼ ಆಯೋಜಿಸಲಾಗಿತ್ತು. ಇದಕ್ಕೆ ಅಪೋಲೋ ಆಸ್ಪತ್ರೆ ಕರ್ನಾಟಕದ ಸಿಇಒ ಡಾ. ಮನೀಷ್ ಮಟ್ಟ, ಬೆಂಗಳೂರಿನ ಅಪೋಲೋ ಕ್ಯಾನ್ಸರ್ ಸೆಂಟರ್‌ನ ಪ್ರಮುಖ ಶಸ್ತ್ರಚಿಕಿತ್ಸಕ ಡಾ. ಜಯಂತಿ ತುಪ್ಪ ಮತ್ತು ವೈದ್ಯಕೀಯ ಅಂಕೊಲಾಜಿಸ್ಟ್ ಮುಖ್ಯಸ್ಥ ಮತ್ತು ಹಿರಿಯ ಕನ್ಸಲೆಂಟ್ ಡಾ.ವಿಜಯ್ ಅಗರ್ವಾಲ್ ಅವರು ಚಾಲನೆ ನೀಡಿದರು.
ಭಾನುವಾರ ಬೆಳಗ್ಗೆ 6 ಗಂಟೆಗೆ ಅಪೋಲೋ ಆಸ್ಪತ್ರೆಯಿಂದ ಹೊರಟು ಬನ್ನೇರುಘಟ್ಟ ರಸ್ತೆ ಮೂಲಕ ಸಾಗಿ ಡೆಲ್ಲಿಯಾ ವೃತ್ತ ಮೂಲಕ ಅಪೋಲೋ ಆಸ್ಪತ್ರೆಗೆ ಹಿಂತಿರುಗಲಾಯಿತು. ಈ ಓಟದಲ್ಲಿ ವೈದ್ಯರು, ಆಸ್ಪತ್ರೆಯ ಇತರ ಸಿಬ್ಬಂದಿ, ರೋಗಿಗಳು ಮತ್ತು ಹಿತೈಷಿಗಳು ಸೇರಿ 600ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಇದನ್ನೂ ಓದಿ | Foods For Brain Power: ಈ ಆಹಾರಗಳನ್ನು ನಿಮ್ಮ ಮಕ್ಕಳಿಗೆ ತಿನ್ನಿಸಿ, ನೆನಪಿನ ಶಕ್ತಿ ಹೆಚ್ಚಿಸಿ!
ಸ್ತನ ಕ್ಯಾನ್ಸರ್‌ನಂತಹ ನಿರ್ಣಾಯಕ ವಿಷಯದತ್ತ ಮಹಿಳೆಯರ ಗಮನವನ್ನು ಸೆಳೆಯುವುದು ಈ ಓಟ ಆಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಇದನ್ನೂ ಒಳಗೊಂಡಿರುವ ವಿವಿಧ ಮೂಢನಂಬಿಕೆಗಳನ್ನು ಹೊರಹಾಕುವುದು ಮತ್ತು ಸ್ವಯಂ ಪರೀಕ್ಷೆ ಮತ್ತು ಮ್ಯಾಮೊಗ್ರಾಮ್‌ಗಳ ಪ್ರಾಮುಖ್ಯತೆಯ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡುವ ಉದ್ದೇಶವನ್ನು ಈ ಒಂದು ಕಾರ್ಯಕ್ರಮ ಹೊಂದಿತ್ತು.
ಗುಲಾಬಿ ಸೀರೆ ಓಟವು ವಿಶಿಷ್ಟವಾದ ಮತ್ತು ಸಬಲೀಕರಣದ ಉಪಕ್ರಮವಾಗಿದ್ದು, ಇದರಲ್ಲಿ ಮಹಿಳೆಯರು ಗುಲಾಬಿ ಬಣ್ಣದ ಸೀರೆಗಳನ್ನು ಧರಿಸಿದ್ದರು. ಪುರುಷರು ಸಾಂಪ್ರದಾಯಿಕ ಉಡುಗೆಯಲ್ಲಿ ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಏಕತೆಯ ಸಂಕೇತವನ್ನು ಗುರುತಾಗಿ ಧರಿಸಿದ್ದರು. ರೋಗದ ಆರಂಭಿಕ ಪತ್ತೆಯ ಮಹತ್ವವನ್ನು ಒತ್ತಿಹೇಳುವ ಮೂಲಕ, ಗುಲಾಬಿ ಸೀರೆ ಓಟವು ಭಾರತೀಯ ಮಹಿಳೆಯರು ಮತ್ತು ಅವರ ಕುಟುಂಬಗಳ ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡಿತು.
ಸ್ತನ ಕ್ಯಾನ್ಸರ್ ಇನ್ನು ಮುಂದೆ ಮೂಕ ಬೆದರಿಕೆ ಇಲ್ಲದ ಭವಿಷ್ಯದತ್ತ ನಾವು ಕೆಲಸ ಮಾಡಬಹುದು ಮತ್ತು ಸ್ತನ ಕ್ಯಾನ್ಸರ್ ಚಿಕಿತ್ಸೆಯ ನಂತರ ಹೆಚ್ಚು ಮಹಿಳೆಯರು ಬದುಕಬಹುದು,ಅಭಿವೃದ್ಧಿ ಹೊಂದಬಹುದು’ ಎಂಬ ಸಂದೇಶ ನೀಡಲಾಯಿತು.
ಸ್ಟ್ರೋಕ್ ಜಾಗೃತಿಗೆ ರುನಾಥನ್
ಬೆಂಗಳೂರು: ಭಾರತದಲ್ಲಿ ಹೆಚ್ಚುತ್ತಿರುವ ಪಾರ್ಶ್ವವಾಯು (ಸ್ಟ್ರೋಕ್) ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲು ಜಯನಗರದ ಅಪೋಲೋ ಆಸ್ಪತ್ರೆಯಿಂದ ನಗರದಲ್ಲಿ ಭಾನುವಾರ 5ಕೆ ಮತ್ತು 10ಕೆ ದೀರ್ಘಾವಧಿ ಓಟ (ರುನಾಥನ್) ಆಯೋಜಿಸಿತ್ತು.
ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬೆಳಗ್ಗೆ 6 ಗಂಟೆಗೆ ರುನಾಥನ್‌ಗೆ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ಚಾಲನೆ ನೀಡಿದರು. ಜಯನಗರ ಅಪೋಲೋ ಆಸ್ಪತ್ರೆಯ ಹಿರಿಯ ಸಮಾಲೋಚಕರು ಮತ್ತು ಸಲಹೆಗಾರರಾದ ಡಾ.ಪಿ. ಸತೀಶ್ ಚಂದ್ರ ಮತ್ತು ಜಯನಗರ ಅಪೋಲೊ ಆಸ್ಪತ್ರೆಯ ಉಪಾಧ್ಯಕ್ಷರು ಮತ್ತು ಯುನಿಟ್ ಹೆಡ್ ಡಾ.ಗೋವಿಂದಯ್ಯ ಯತೀಶ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ | Drinking Water: ದೇಹಕ್ಕೆ ಬೇಕಾದಷ್ಟು ನೀರು ಕುಡಿಯದೆ ಇದ್ದರೆ ಏನೆಲ್ಲ ಆಗಬಹುದು ಗೊತ್ತೇ?
ಕಿರಿಯರಿಂದ ಹಿರಿಯರವರೆಗೆ ಜೀವನದ ವಿವಿಧ ವಯೋಮಾನದವರು ಇದರಲ್ಲಿ ಪಾಲ್ಗೊಂಡಿದ್ದರು. ಸುಮಾರು 1,300 ಜನರ ಭಾಗವಹಿಸುವಿಕೆಗೆ ದೀರ್ಘಾವಧಿ ಓಟ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೂಡ ಭಾಗವಹಿಸಿದ್ದರು. ಪಾರ್ಶ್ವವಾಯು ವಿರುದ್ಧ ಜನಜಾಗೃತಿ ಮೂಡಿಸುವ ಈ ಒಂದು ಓಟ, ದೊಡ್ಡ ಮಟ್ಟದಲ್ಲಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಯಿತು. ರೋಗದ ವಿರುದ್ಧ ಜಾಗೃತಿ ಮೂಡಿಸುವ ಅಪೋಲೋ ಆಸ್ಪತ್ರೆಯ ಆಶಯಕ್ಕೂ ಬೆಲೆ ತಂದುಕೊಟ್ಟಿತು.